HEALTH TIPS

ಭಾರತದಲ್ಲಿ ಕೇವಲ ₹ 2,300ಕ್ಕೆ ಸಿಗುವ ಔಷಧಕ್ಕೆ ಅಮೆರಿಕದಲ್ಲಿ ₹ 95,000

 ವಾಷಿಂಗ್ಟನ್‌: ಅಮೆರಿಕದ ಜಿಡಿಪಿಯ ಶೇ 18ರಷ್ಟನ್ನು ಆರೋಗ್ಯ ರಕ್ಷಣಾ ವ್ಯವಸ್ಥೆಗೇ ವ್ಯಯಿಸಲಾಗುತ್ತದೆಯಾದರೂ, ಅಲ್ಲಿನ ನಿವಾಸಿಗಳಿಗೆ ವೈದ್ಯಕೀಯ ಸೌಲಭ್ಯಗಳನ್ನು ಪಡೆಯುವುದು ಅಷ್ಟು ಸುಲಭವಲ್ಲ. ಅನಾರೋಗ್ಯಕ್ಕೀಡಾದರೆ ಭಾರಿ ಬೆಲೆ ತೆರಬೇಕಾಗುತ್ತದೆ ಎನ್ನುವ ಸಂಗತಿ ಹೊರಬಿದ್ದಿದೆ. 


ವೈದ್ಯಕೀಯ ವ್ಯವಸ್ಥೆ, ಔಷಧಗಳ ದರಕ್ಕೆ ಸಂಬಂಧಿಸಿದಂತೆ ಅಮೆರಿಕದ ಮಹಿಳೆ ವಿಕ್ಟೋರಿಯಾ ಎಂಬವರು ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊವೊಂದನ್ನು ಹಂಚಿಕೊಂಡಿದ್ದು, ಅಲ್ಲಿನ ಸ್ಥಿತಿಗತಿಯ ಮೇಲೆ ಬೆಳಕು ಚೆಲ್ಲಿದೆ. ಭಾರತದಲ್ಲಿ ಅತಿ ಕಡಿಮೆ ಬೆಲೆಗೆ ಸಿಗುವ ಔಷಧಕ್ಕೆ ಅಮೆರಿಕದಲ್ಲಿ ಭಾರಿ ಬೆಲೆ ತೆರಬೇಕು. ಇದೊಂದು ದೊಡ್ಡ ಹಗರಣವೇ ಸರಿ ಎಂದು ಟೀಕಿಸಿದ್ದಾರೆ.

ಮಾತ್ರೆಗಳನ್ನು ತೋರಿಸುತ್ತಾ 'ಈ ಔಷಧಿಗೆ ಅಮೆರಿಕದಲ್ಲಿ ನನ್ನ ಜೇಬಿನಿಂದ 1,000 ಡಾಲರ್‌ (ಅಂದಾಜು ₹ 95,000) ವೆಚ್ಚವಾಗುತ್ತಿತ್ತು. ಆದರೆ, ಇದನ್ನು ಕೇವಲ 25 ಡಾಲರ್‌ಗೆ (ಅಂದಾಜು ₹ 2,300) ಖರೀದಿಸಿದೆ. ಹೌದು, ಕೇವಲ ಈ ಆರು ಸಣ್ಣ ಮಾತ್ರೆಗಳಿಗೆ ಇಷ್ಟು ಮೊತ್ತವಾಗುತ್ತೆ. ಏಕೆಂದರೆ, ಇವು ನನ್ನ ವಿಮೆ ವ್ಯಾಪ್ತಿಗೆ ಬರುವುದಿಲ್ಲ' ಎಂದಿದ್ದಾರೆ.

ಹೆಚ್ಚು ವೆಚ್ಚ ಭರಿಸುವುದಕ್ಕೆ ಪರ್ಯಾಯವಾಗಿ ಕೆನಡಾ ಔಷಧಾಲಯಗಳನ್ನು ಸಂಪರ್ಕಿಸಿದ್ದ ಅವರು, 100 ರಿಂದ 200 ಡಾಲರ್‌ (₹ 9,500 - ₹ 19,000) ಆಗಬಹುದು ಎಂದು ಭಾವಿಸಿದ್ದರಂತೆ. 'ನಿಜವಾದ ಬೆಲೆ ಕೇಳಿ ಅಚ್ಚರಿಯಾಯಿತು. ಭಾರತೀಯ ಕಂಪನಿಯ ಔಷಧಕ್ಕೆ 25 ಡಾಲರ್‌ (ಅಂದಾಜು ₹ 2,300) ಹಾಗೂ ಅಂತರರಾಷ್ಟ್ರೀಯ ಸಾಗಣೆಗೆ ಹೆಚ್ಚುವರಿಯಾಗಿ 15 ಡಾಲರ್ (ಅಂದಾಜು ₹ 1,400) ವೆಚ್ಚವಾಯಿತು' ಎಂದು ಹೇಳಿಕೊಂಡಿದ್ದಾರೆ.

'ಅಮೆರಿಕದ ನಾಗರಿಕರನ್ನು ವಂಚಿಸಲಾಗುತ್ತಿದೆ' ಎಂದಿರುವ ವಿಕ್ಟೋರಿಯಾ, 'ಈ ಹಣವೆಲ್ಲ ಯಾರಿಗೆ ಹೋಗುತ್ತಿದೆ' ಎಂದು ಪ್ರಶ್ನಿಸಿದ್ದಾರೆ.

ತಮಗೂ ಇದೇ ರೀತಿ ಆಗಿರುವುದಾಗಿ ಹಲವು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ಭಾರತೀಯ ಕಂಪನಿಗಳ ಔಷಧಗಳನ್ನು ವಿದೇಶಗಳಲ್ಲಿ ಅತಿಯಾದ ದರಕ್ಕೆ ಮಾರಾಟ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಈ ವಿಚಾರವು ಅಮೆರಿಕದ ವೈದ್ಯಕೀಯ ವ್ಯವಸ್ಥೆ ದುಬಾರಿ ಏಕೆ? ಮತ್ತು ಅನಿವಾಸಿ ಭಾರತೀಯರು ಅಲ್ಲಿ ನೆಲೆಸಿದ್ದರೂ ಭಾರತದಿಂದಲೇ ಔಷಧಿಗಳನ್ನು ಖರೀದಿಸಲು ಮುಂದಾಗುತ್ತಿರುವುದು ಏಕೆ? ಎಂಬ ಚರ್ಚೆಗೆ ಕಾವುಕೊಟ್ಟಿದೆ.









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries