ಟಾಯ್ಲೆಟ್ ಟ್ಯಾಂಕ್ ಫ್ಲಶ್ ಟ್ಯಾಬ್ಲೆಟ್, ಟಾಯ್ಲೆಟ್ ನೀರನ್ನು ನೀಲಿಯಾಗಿಡುತ್ತದೆ. ಫ್ಲಶ್ ಮಾಡಿದಾಗ ಅದ್ರಿಂದ ಪರಿಮಳ ಬರುತ್ತದೆ. ಇದು ಟಾಯ್ಲೆಟ್ ಸ್ವಚ್ಛವಾಗಿಡುತ್ತೆ ಅಂತ ಬಹುತೇಕರು ಭಾವಿಸಿದ್ದಾರೆ. ಆದ್ರೆ ಈ ಟ್ಯಾಬ್ಲೆಟ್ 24 ಗಂಟೆಗಳ ಕಾಲ ಫ್ಲಶ್ ಟ್ಯಾಂಕ್ನಲ್ಲಿ ಮುಳುಗಿರೋದ್ರಿಂದ ಟ್ಯಾಂಕ್ನೊಳಗಿನ ರಬ್ಬರ್ ಸೀಲುಗಳು, ಪ್ಲಾಸ್ಟಿಕ್ ಭಾಗಗಳು ಮತ್ತು ಫ್ಲಾಪರ್ಗಳನ್ನು ಕ್ರಮೇಣ ಹಾಳು ಮಾಡುತ್ವೆ. ರಬ್ಬರ್ ಸೀಲು ಹಾಳಾದಾಗ ಟ್ಯಾಂಕ್ನಿಂದ ನೀರು ನಿರಂತರವಾಗಿ ಟಾಯ್ಲೆಟ್ ನಲ್ಲಿ ಸೋರಿಕೆ ಆಗುತ್ತೆ. ಇದ್ರಿಂದ ನೀರು ವ್ಯರ್ಥವಾಗುತ್ತೆ.
ಕುದಿಯುವ ನೀರು
ಕುದಿಯುವ ನೀರು ಬ್ಯಾಕ್ಟೀರಿಯಾ ಕೊಲ್ಲುತ್ತೆ ನಿಜ. ಆದ್ರೆ ಟಾಯ್ಲೆಟ್ ಕ್ಲೀನ್ ಮಾಡಲು ಕುದಿಯುವ ನೀರನ್ನು ಬಳಸಬಾರದು. ಕಮೋಡ್ಗೆ ಕುದಿಯುವ ನೀರನ್ನು ಹಾಕಿದಾಗ ಕಮೋಡ್ ಬಿರುಕು ಬಿಡುವ ಸಾಧ್ಯತೆ ಇದೆ. ಹಳೆಯ ಕಮೋಡ್ ಒಡೆಯುವ ಅಪಾಯವಿದೆ. ಹಾಗಾಗಿ ಕುದಿಯುವ ನೀರಿನ ಬದಲು ನೀವು ಸಾಮಾನ್ಯ ನೀರನ್ನು ಟಾಯ್ಲೆಟ್ ಕ್ಲೀನ್ ಮಾಡಲು ಬಳಸಿ.
ಬ್ಲೀಚ್
ಟಾಯ್ಲೆಟ್ ಕ್ಲೀನ್ ಮಾಡಲು ಮಾರ್ಕೆಟ್ ನಲ್ಲಿ ಸಾಕಷ್ಟು ರಾಸಾಯನಿಕ ವಸ್ತುಗಳು ಲಭ್ಯವಿದೆ. ತುಂಬಾ ಸಮಯ ಈ ಕೆಮಿಕಲ್ ಟಾಯ್ಲೆಟ್ ನಲ್ಲಿದ್ರೆ ಟಾಯ್ಲೆಟ್ ಕ್ಲೀನ್ ಆಗುತ್ತೆ ಎನ್ನುವ ಭ್ರಮೆ ನಮ್ಮಲ್ಲಿದೆ. ಬ್ಲೀಷ್ ಅಥವಾ ಬೇರೆ ಕೆಮಿಕಲ್ ಗಳು ದೀರ್ಘ ಸಮಯ ಟಾಯ್ಲೆಟ್ ನಲ್ಲಿದ್ದರೆ ಟಾಯ್ಲೆಟ್ ಹಾಳು ಮಾಡುತ್ತೆ. ಆಧುನಿಕ ಟಾಯ್ಲೆಟ್ ಆಂಟಿ-ಸ್ಟೇನ್ ಹೊಳಪನ್ನು ಹೊಂದಿರುತ್ತೆ. ತುಂಬಾ ಸಮಯ ಕೆಮಿಕಲ್ ಟಾಯ್ಲೆಟ್ ನಲ್ಲಿದ್ದಾಗ ಹೊಳಪು ಕಡಿಮೆಯಾಗುತ್ತದೆ. ಟಾಯ್ಲೆಟ್ ಬೇಗ ಕೊಳಕಾಗುತ್ತದೆ.
ಐರನ್ ಸ್ಕ್ರಬ್ ಪ್ಯಾಡ್
ಕೆಲವರು ಪಾತ್ರೆ ಕ್ಲೀನ್ ಮಾಡುವ ಐರನ್ ಸ್ಕ್ರಬ್ ಪ್ಯಾಡ್ ಗಳನ್ನು ಟಾಯ್ಲೆಟ್ ಕ್ಲೀನ್ ಮಾಡಲು ಬಲಸ್ತಾರೆ. ಇವು ಒರಟಾಗಿರುತ್ತವೆ. ಇವುಗಳಿಂದ ಟಾಯ್ಲೆಟ್ ರಬ್ ಮಾಡಿದ್ರೆ ಮೇಲ್ಭಾಗ ಗೀರಾಗುತ್ತೆ. ಗೀರುಗಳು ಅಸಹ್ಯವಾಗಿ ಕಾಣೋದಲ್ದೆ ಬ್ಯಾಕ್ಟೀರಿಯಾ ಮತ್ತು ಕೊಳೆಯನ್ನು ಸುಲಭವಾಗಿ ಹಿಡಿದಿಟ್ಟುಕೊಳ್ಳುತ್ತವೆ.
ಟಾಯ್ಲೆಟ್ ಕ್ಲೀನ್ ಹೀಗೆ ಮಾಡಿ
ಮೃದುವಾದ ಬ್ರಷ್ ಬಳಸಿ. ಸೌಮ್ಯವಾದ ಕ್ಲೀನರ್ ಬಳಸಿ ಕ್ಲೀನ್ ಮಾಡಿ. ಅತಿಯಾಗಿ ಟಾಯ್ಲೆಟ್ ಉಜ್ಜಬೇಡಿ. ಬಿಳಿ ವಿನೆಗರ್ - ಶೌಚಾಲಯದ ಮೇಲೆ ಮೊಂಡುತನದ ಗಟ್ಟಿಯಾದ ನೀರಿನ ಕಲೆಯನ್ನು ತೆಗೆಯುತ್ತದೆ. ಬಿಳಿ ವಿನೆಗರ್ ಹಾಕಿ ಸ್ವಲ್ಪ ಹೊತ್ತು ಬಿಟ್ಟ ನಂತ್ರ ಬ್ರಷ್ ಮಾಡಿದ್ರೆ ಟಾಯ್ಲೆಟ್ ಕ್ಲೀನ್ ಆಗುತ್ತದೆ.



