ನವದೆಹಲಿ (PTI): ಐಟಿಸಿ ಕಂಪನಿಯ ಶೀಘ್ರ ವಿಲೇವಾರಿಯಾಗುವ ಗ್ರಾಹಕ ಸರಕುಗಳ (ಎಫ್‌ಎಂಸಿಜಿ) ಮಾರಾಟವು 2026ನೇ ಸಾಲಿನ ಆರ್ಥಿಕ ವರ್ಷದಲ್ಲಿ ಶೇ 8.8 ರಷ್ಟು ಹೆಚ್ಚಿದ್ದು, ₹37 ಸಾವಿರ ಕೋಟಿ ವಹಿವಾಟು ದಾಖಲಾಗಿದೆ ಎಂದು ಕಂಪನಿಯ ವಾರ್ಷಿಕ ವರದಿ ಹೇಳಿದೆ.
ಐಟಿಸಿಯ ಎಫ್‌ಎಂಸಿಜಿ ವಿಭಾಗವು ಆಶೀರ್ವಾದ್, ಬಿಂಗೊ, ಸನ್‌ಫೀಸ್ಟ್, ಕ್ಲಾಸ್‌ಮೇಟ್, ಯಿಪ್ಪಿ, ಮಂಗಳದೀಪ್, ಫಿಯಾಮ ಸೇರಿದಂತೆ 30 ಬಗೆಯ ವಿವಿಧ ಬ್ರ್ಯಾಂಡ್‌ಗಳನ್ನು ಒಳಗೊಂಡಿದೆ.
'ಈಗಾಗಲೇ ಕಂಪನಿಯ ಉತ್ಪನ್ನಗಳು ದೇಶದ 28 ಕೋಟಿ ಕುಟುಂಬಗಳನ್ನು ತಲುಪಿದ್ದು, ದೇಶದ ನಂ.1 ಎಫ್‌ಎಂಸಿಜಿ ಕಂಪನಿಯಾಗುವ ಗುರಿಯೊಂದಿಗೆ ಮುನ್ನಡೆಯುತ್ತಿದ್ದೇವೆ'ಎಂದು ಐಟಿಸಿ ಪ್ರಕಟಣೆ ತಿಳಿಸಿದೆ.
ಕಂಪನಿಯು 2026ನೇ ಸಾಲಿನ ಹಣಕಾಸು ವರ್ಷದಲ್ಲಿ 100ಕ್ಕೂ ಹೆಚ್ಚು ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಆಶೀರ್ವಾದ್ ಗೋಧಿಹಿಟ್ಟು ಮತ್ತು ಬಿಂಗೊ ಬ್ರ್ಯಾಂಡ್‌ಗಳು ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿವೆ ಎಂದು ಕಂಪನಿ ಹೇಳಿದೆ.

