ಕಾಸರಗೋಡು: ಕುಂಬಳೆ ಹಾಗೂ ಬದಿಯಡ್ಕ ಪೊಲೀಸ್ ಠಾಣೆ ವ್ಯಾಫ್ತಿಯಲ್ಲಿ ನಡೆದ ಎರಡುಪ್ರತ್ಯೇಕ ಕಾರ್ಯಾಚರಣೆಯಲ್ಲಿ ಎಂಡಿಎಂಎ ಸಾಗಿಸುತ್ತಿದ್ದ ಇಬ್ಬರನ್ನು ಪೊಲೀಸರುಬಂಧಿಸಿದ್ದಾರೆ. ಇವರಿಂದ ಒಟ್ಟು 42ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ.
ಸೀತಾಂಗೋಳಿ ಪೇಟೆಯಲ್ಲಿ ಕುಂಬಳೆ ಪೆÇಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಎಂಡಿಎಂಎ ಸಾಗಿಸುತ್ತಿದ್ದ ಪುತ್ತಿಗೆ ಮುಗು ಸಮೀಪದ ಉರ್ಮಿ ನಿವಾಸಿ ಷಬೀರ್ ಆಲಿ (44)ಎಂಬಾತನನ್ನು ಬಂಧಿಸಲಾಘಿದ್ದು, ಈತನ ವಶದಲ್ಲಿದ್ದ 12ಗ್ರಾಂ. ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ. ಕುಂಬಳೆ ಠಾಣೆ ಎಸ್. ಐ. ಅನಂತಕೃಷ್ಣನ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಖಚಿತ ಸುಳಿವಿನ ಮೇರೆಗೆ ಭಾನುವಾರ ನಸುಕಿನ 2.45ರ ವೇಳೆಗೆ ಕಾರ್ಯಾಚರಣೆ ನಡೆಸಿ, ಸೀತಾಂಗೋಳಿಯ ಕಟ್ಟಡವೊಂದರಿಂದ ಈತನನ್ನು ಬಂಧಿಸಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಭಾನುವಾರ ಬೆಳಗ್ಗೆ 5.30ಕ್ಕೆ ಪುತ್ತಿಗೆ ಕಟ್ಟತ್ತಡ್ಕ ಎಕೆಜಿ ನಗರ ನಿವಾಸಿ ಮುಹ್ಮದ್ ಹನೀಫ (36) ಎಂಬಾತನನ್ನು ಬದಿಯಡ್ಕದ ಬೋಳುಕಟ್ಟೆಯಿಂದ ಬದಿಯಡ್ಕ ಠಾಣೆ ಪೊಲೀಸರು ಬಂಧಿಸಿದ್ದು, ಈತನ ವಶದಲ್ಲಿದ್ದ 30 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ. ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ವಿಜಯಭರತ್ ರೆಡ್ಡಿ ಅವರ ಆದೇಶದಂತೆ ಬದಿಯಡ್ಕ ಠಾಣೆ ಎಸ್. ಐ ಅನೂಪ್ ಕೃಷ್ಣನ್ ನೇತೃತ್ವದ ಪೊಲೀಸರ ತಂಡ ಬದಿಯಡ್ಕ ಬೋಳುಕಟ್ಟೆಯಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿ ಸಂಚರಿಸುತ್ತಿದ್ದ ಬೈಕ್ ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ಎಂಡಿಎಂಎ ಪತ್ತೆಯಾಗಿದೆ.
ಕೇರಳ ವ್ಯಾಪಕ ಮಾದಕ ದ್ರವ್ಯ ದಂಧೆಯನ್ನು ಸಂಪೂರ್ಣ ಮುಟ್ಟುಗೋಲು ಹಾಕಲು ಗೃಹ ಸಚಿವ ರಮೇಶ್ ಚೆನ್ನಿತಲ ಅವರ ಆದೇಶದಂತೆ ಆಪರೇಷನ್ ತೂಫಾನ್ ಕಾರ್ಯಾಚರಣೆ ನಡೆಯುತ್ತಿದೆ.
ಶಾಲಾ ತರಗತಿ ಪುನರಾರಂಭಗೊಳ್ಳುತ್ತಿದ್ದಂತೆ ಮಾದಕ ವಸ್ತುಗಳ ಪೂರೈಕೆ ಹೆಚ್ಚಾಗಿರುವುದು ನಾಗರಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ.



