ಪೆಶಾವರ (PTI): ಪಾಕಿಸ್ತಾನದ ಸೇನಾ ಚೆಕ್‌ಪೋಸ್ಟ್‌ವೊಂದರ ಮೇಲಿನ ಆತ್ಮಾಹುತಿ ಬಾಂಬ್ ದಾಳಿ ಯತ್ನವನ್ನು ಭದ್ರತಾ ಪಡೆಗಳು ಮಂಗಳವಾರ ವಿಫಲಗೊಳಿಸಿ, ನಾಲ್ವರು ತಾಲಿಬಾನ್ ಉಗ್ರರನ್ನು ಹತ್ಯೆ ಮಾಡಿವೆ.
ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಮಿರನ್‌ಶಾ ಪೋಸ್ಟ್ ಬಳಿ ಇರುವ ಚೆಕ್‌ಪೋಸ್ಟ್‌ಗೆ ಸ್ಫೋಟಕ ತುಂಬಿದ್ದ ವಾಹನದ ಮೂಲಕ ದಾಳಿ ನಡೆಸಲು ತೆಹ್ರಿಕ್-ಎ-ತಾಲಿಬಾನ್(ಟಿಟಿಪಿ) ಭಯೋತ್ಪಾದಕರು ಯತ್ನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುರಿಯನ್ನು ತಲುಪುವ ಮೊದಲೇ ಭದ್ರತಾ ಸಿಬ್ಬಂದಿ ವಾಹನವನ್ನು ನಾಶ ಮಾಡಿದ್ದಾರೆ. ನಾಲ್ವರು ಉಗ್ರರನ್ನು ಹತ್ಯೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಪ್ರತ್ಯೇಕ ಘಟನೆವೊಂದರಲ್ಲಿ, ಅಸ್ಲಾಂ ಪ್ಯಾಕೆಟ್ ಬಳಿ ಸ್ಫೋಟ ಸಂಭವಿಸಿದೆ. ಸ್ಫೋಟದ ಪ್ರಮಾಣ ತೀವ್ರವಾಗಿತ್ತು.

