ಮಂಗಳವಾರ ಒಂದು ಗಂಟೆಯೊಳಗೆ ನಡೆದ ಮಹಿಳೆಯರ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಎಂಟನೇ ಶ್ರೇಯಾಂಕದ ಆಂಡ್ರೀವಾ ರೋಮಾನಿಯಾದ ಆಟಗಾರ್ತಿ ಸೊರಾನಾ ಸಿರ್ಸ್ಟಿ ಅವರನ್ನು 6-0, 6-3 ನೇರ ಸೆಟ್‌ಗಳ ಅಂತರದಿಂದ ಮಣಿಸಿದರು.
ಫ್ರೆಂಚ್ ಓಪನ್‌ನಲ್ಲಿ ಮೂರು ವರ್ಷಗಳಲ್ಲಿ ಎರಡನೇ ಬಾರಿ ಅಂತಿಮ-4ರ ಸುತ್ತು ತಲುಪಿದರು.
ಈ ಸೋಲಿನ ಮೂಲಕ 36ರ ಹರೆಯದ ಸೊರಾನಾ ಗೆಲುವಿನ ಓಟಕ್ಕೆ ತೆರೆ ಬಿತ್ತು. ಫಾರ್ಮ್‌ನಲ್ಲಿರುವ ಸೊರಾನಾ ಅವರು ಈ ವರ್ಷಾಂತ್ಯಕ್ಕೆ ಟೆನಿಸ್‌ಗೆ ವಿದಾಯ ಹೇಳಲಿದ್ದಾರೆ. 2009ರ ನಂತರ ಮೊದಲ ಬಾರಿ ಪ್ಯಾರಿಸ್‌ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದರು.
ಆಂಡ್ರೀವಾ ಮುಂದಿನ ಸುತ್ತಿನಲ್ಲಿ ಉಕ್ರೇನ್ ಆಟಗಾರ್ತಿಯರಾದ ಎಲಿನಾ ಸ್ವಿಟೋಲಿನಾ ಅಥವಾ ಮಾರ್ಟಾ ಕೋಸ್ಟ್ಯುಕ್‌ರನ್ನು ಎದುರಿಸಲಿದ್ದಾರೆ.

