HEALTH TIPS

ಕೆಂಪು ಸಮುದ್ರದಲ್ಲಿ ಇಸ್ರೇಲ್‌ ಹಡಗುಗಳಿಗೆ ಸಂಪೂರ್ಣ ನಿರ್ಬಂಧ: ಹೂಥಿ ಬಂಡುಕೋರರು

ಸನಾ: ಕೆಂಪು ಸಮುದ್ರದಲ್ಲಿ ಇಸ್ರೇಲ್‌ ಹಡಗುಗಳಿಗೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ ಎಂದು ಯೆಮೆನ್‌ನ ಹೂಥಿ ಬಂಡುಕೋರರು ಹೇಳಿದ್ದಾರೆ.

ಹೂಥಿ ಬಂಡುಕೋರರಿಗೆ ಇರಾನ್‌ ಬೆಂಬಲ ನೀಡುತ್ತಾ ಬಂದಿದೆ. ಇರಾನ್-ಇಸ್ರೇಲ್ ಸಂಘರ್ಷ ಮತ್ತೆ ಆರಂಭವಾದ ಬಳಿಕ, ಯೆಮೆನ್ ಕೂಡ ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ನಡೆಸುತ್ತಿದೆ.

ಸಂಘರ್ಷದ ಪರಿಸ್ಥಿತಿಯ ನಡುವೆಯೇ ಕೆಂಪು ಸಮುದ್ರದಲ್ಲಿ ಇಸ್ರೇಲ್ ಹಡುಗುಗಳಿಗೆ ನಿರ್ಬಂಧ ವಿಧಿಸಿದ್ದು, ಇದರಿಂದ ಸಾಗರ ಸಂಚಾರದಲ್ಲಿ ಅಡತಡೆಗಳು ಉಂಟಾಗುವ ಸಾಧ್ಯತೆಯಿದೆ. ಇಸ್ರೇಲ್-ಹಮಾಸ್ ಯುದ್ಧದ ಸಮಯದಲ್ಲಿ ಕೂಡ ಹೂಥಿ ಬಂಡುಕೋರರು, ಕೆಂಪು ಸಮುದ್ರದ ಮೇಲಿನ ಸಂಚಾರವನ್ನು ನಿಯಂತ್ರಣ ಮಾಡಿದ್ದರಿಂದ ಇಸ್ರೇಲ್‌ನ ಹಲವು ಹಡಗುಗಳು, ದಕ್ಷಿಣ ಆಫ್ರಿಕಾ ಮೂಲಕ ದೀರ್ಘ ಮಾರ್ಗದ ಮೂಲಕ ಸಂಚಾರ ಮಾಡುವ ಪರಿಸ್ಥಿತಿ ಎದುರಾಗಿತ್ತು.

ಕೆಂಪು ಸಮುದ್ರದಲ್ಲಿನ ಇಸ್ರೇಲ್‌ನ ಸಂಪೂರ್ಣ ಹಡಗು ಸಂಚಾರಕ್ಕೆ ನಾವು ನಿರ್ಬಂಧ ವಿಧಿಸಿದ್ದೇವೆ. ಈ ಕ್ಷಣದಿಂದಲೇ, ಇದನ್ನು ಉಲ್ಲಂಘಿಸಿದರೆ ಅದನ್ನು ಶತ್ರುಗಳ ಚಲನವಲನ ಎಂದು ಪರಿಗಣಿಸಿ ಅವರ ಮೇಲೆ ದಾಳಿ ಮಾಡುತ್ತೇವೆ ಎಂದು ಹೂಥಿ ಬಂಡುಕೋರರು ಹೇಳಿದ್ದಾರೆ.

ಈಗಾಗಲೇ ಪಶ್ಚಿಮ ಏಷ್ಯಾ ಸಂಘರ್ಷದ ಬಳಿಕ ಹೊರ್ಮುಜ್ ಜಲಸಂಧಿಯ ಮೇಲೆ ಇರಾನ್ ಹಿಡಿತ ಸಾಧಿಸಿದ್ದು, ಜಾಗತಿಕ ತೈಲ ಬಿಕ್ಕಟ್ಟಿಗೆ ಕಾರಣವಾಗಿದೆ. ಈ ಸಂಘರ್ಷದಲ್ಲಿ ಹೂಥಿಗಳು ಇರಾನ್‌ಗೆ ಬೆಂಬಲ ನೀಡಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries