ಕಾಸರಗೋಡು: ಆಲ್ ಕೇರಳ ಪೋಟೋಗ್ರಾಫರ್ಸ್ ಅಸೋಸಿಯೇಷನ್(ಎಕೆಪಿಎ) ವೆಸ್ಟ್ ಯುನಿಟ್ ವತಿಯಿಂದ ಸಂಘಟನೆ ಸದಸ್ಯರ ಮಕ್ಕಳಿಗೆ ಕಲಿಕೋಪಕರಣ ವಿತರಿಸಲಾಯಿತು. ಕಾಸರಗೋಡು ನಗರಸಭಾ ಸದಸ್ಯ ಕೆ.ಎನ್. ರಾಮಕೃಷ್ಣ ಹೊಳ್ಳ ಮಕ್ಕಳಿಗೆ ಬ್ಯಾಗ್ ನೀಡುವ ಮೂಲಕ ಉದ್ಘಾಟಿಸಿದರು.
ಯೂನಿಟ್ ಅಧ್ಯಕ್ಷ ವಸಂತ್ ಕೆರೆಮನೆ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಮಹೇಶ್ ಪರಕ್ಕಿಲ, ಉದಯ, ಮುರಳಿ ಕೃಷ್ಣ, ದೀಪ್ತ್, ಸುಪ್ರಿಯಾ ಹೇಮಂತ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಶಾಲಿನಿ ರಾಜೇಂದ್ರನ್ ಸ್ವಾಗತಿಸಿದರು. ಯೂನಿಟ್ ಸಮಿತಿ ಸದಸ್ಯ ರತೀಶ್ ರಾಮು ವಂದಿಸಿದರು. ಒಂದರಿಂದ ಎಂಟನೇ ತರಗತಿ ವರೆಗೆ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಕಲಿಕೋಪಕರಣ ವಿತರಿಸಲಾಯಿತು.


