ಪೆರ್ಲ: ಲೇಖಕಿ ಮಾಲತಿ ಪಟ್ಟಣಶೆಟ್ಟಿಯವರ ಕವಿತೆಗಳು ವೈಯಕ್ತಿಕ ನೋವು ನಲಿವುಗಳಿಗಲ್ಲದೆ ಸಾಮಾಜಿಕ ತಲ್ಲಣಗಳಿಗೂ ಸ್ಪಂದಿಸುತ್ತಿದ್ದು, ಇವರ ಕಾವ್ಯವು ಸಾಮಾಜಿಕ ಸಮಸ್ಯೆಗಳಿಗೆ ದನಿಯಾಗುತ್ತದೆ ಎಂದು ಯುವ ಸಾಹಿತಿ ಡಾ. ಸುಭಾಷ್ ಪಟ್ಟಾಜೆ ತಿಳಿಸಿದ್ದಾರೆ.
ಅವರು ಧಾರವಾಡದ ರಾ. ಹ. ದೇಶಪಾಂಡೆ ಸಭಾಭವನದಲ್ಲಿ ಉತ್ತರ ಕರ್ನಾಟಕ ಲೇಖಕಿಯರ ಸಂಘವು ಆಯೋಜಿಸಿದ 'ಹಿರಿಯಕ್ಕನ ಅಕ್ಷರ ಸಂಭ್ರಮ' ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ನಿವೃತ್ತ ಕುಲಪತಿ ವೀರಣ್ಣ ರಾಜೂರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಯುವ ವಿಮರ್ಶಕ ವಿಕಾಸ ಹೊಸಮನಿ ಉಪಸ್ಥಿತರಿದ್ದರು.
ಲಲಿತಾ ಪಾಟೀಲ, ಸುವರ್ಣಾ, ಪುಷ್ಪಾ ಹಾಲಭಾವಿ, ಸುನಂದಾ ಪ್ರಾರ್ಥನಾ ಗೀತೆಯನ್ನು ಹಾಡಿದರು. ಮಾಲತಿ ಹೆಗಡೆ ಸ್ವಾಗತಿಸಿದರು. ರೂಪಾ ಜೋಶಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅನಿತಾ ಗುಡಿ ಅವರು ಆಶಯ ಭಾಷಣ ಮಾಡಿದರು. ಉಷಾ ಗದ್ದಗಿಮಠ, ಮೇಘಾ ಹುಕ್ಕೇರಿಯವರು ಕಾರ್ಯಕ್ರಮ ನಿರೂಪಿಸಿದರು. ಸುಮಾ ಹಡಪದ ಅವರು ವಂದಿಸಿದರು. ಮಾಲತಿ ಪಟ್ಟಣಶೆಟ್ಟಿಯವರ ಜೊತೆ ಹುಬ್ಬಳ್ಳಿ ಧಾರವಾಡದ ಲೇಖಕಿಯರು ಸಂವಾದ ನಡೆಸಿದರು.



