HEALTH TIPS

ಸಿಬಿಎಸ್‌ಇ: ಎರಡು ವಿದೇಶಿ ಭಾಷೆ ಕಲಿಕೆ ಅವಕಾಶ ಮುಂದುವರಿಕೆ

 ನವದೆಹಲಿ: 'ಪ್ರಸ್ತುತ 7ರಿಂದ 9ನೇ ತರಗತಿಯಲ್ಲಿ ಕಲಿಯುತ್ತಿರುವ ಮತ್ತು ತ್ರಿಭಾಷಾ ಸೂತ್ರದ ಅಡಿಯಲ್ಲಿ ಎರಡು ವಿದೇಶಿ ಭಾಷೆಗಳನ್ನು ಆಯ್ಕೆ ಮಾಡಿಕೊಂಡಿರುವ ವಿದ್ಯಾರ್ಥಿಗಳು 10ನೇ ತರಗತಿವರೆಗೂ ಇದೇ ಭಾಷಾ ಸಂಯೋಜನೆಯನ್ನು ಮುಂದುವರಿಸಬಹುದು' ಎಂದು ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಯ (ಸಿಬಿಎಸ್‌ಇ) ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. 


ಸಿಬಿಎಸ್‌ಇ ನಿರ್ಧಾರದಿಂದ ಲಕ್ಷಾಂತರ ವಿದ್ಯಾರ್ಥಿಗಳು ನಿರಾಳರಾಗಿದ್ದಾರೆ. 9ನೇ ತರಗತಿ ವಿದ್ಯಾರ್ಥಿಗಳಿಗೆ ಜುಲೈ 1ರಿಂದ ತ್ರಿಭಾಷಾ ಅಧ್ಯಯನ ಕಡ್ಡಾಯಗೊಳಿಸಲಾಗಿದೆ ಎಂದು ಸಿಬಿಎಸ್‌ಸಿ ಘೋಷಿಸಿದ ಒಂದು ತಿಂಗಳ ಬಳಿಕ ಈ ಬೆಳವಣಿಗೆ ನಡೆದಿದೆ.

'9ನೇ ತರಗತಿ ವಿದ್ಯಾರ್ಥಿಗಳಿಗೆ ಕನಿಷ್ಠ ಎರಡು ಭಾರತೀಯ ಭಾಷೆಗಳು ಸೇರಿ ಮೂರು ಭಾಷೆಗಳ ಕಲಿಕೆ ಕಡ್ಡಾಯಗೊಳಿಸಲಾಗಿದೆ' ಎಂದು ಸಿಬಿಎಸ್‌ಇ ಮೇ 16ರಂದು ಪ್ರಕಟಿಸಿತ್ತು. ಸಿಬಿಎಸ್‌ಇ ಆದೇಶವನ್ನು ಪ್ರಶ್ನಿಸಿ ಹಲವು ವಿದ್ಯಾರ್ಥಿಗಳ ಪೋಷಕರು ನ್ಯಾಯಾಲಯದ ಮೊರೆಹೋಗಿದ್ದರು.

'ಹೊಸ ಭಾಷಾ ನೀತಿಯ ಅಡಿಯಲ್ಲಿ ಕನಿಷ್ಠ ಎರಡು ಭಾರತೀಯ ಭಾಷೆಗಳನ್ನು ಕಡ್ಡಾಯವಾಗಿ ಅಧ್ಯಯನ ಮಾಡುವುದನ್ನು 6ನೇ ತರಗತಿಯಿಂದ ಜಾರಿಗೆ ತರಲಾಗುವುದು. ಪ್ರಸ್ತುತ 7ರಿಂದ 9ನೇ ತರಗತಿಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಇದು ಅನ್ವಯಿಸುವುದಿಲ್ಲ' ಎಂದು ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

'ಎರಡು ಭಾರತೀಯ ಭಾಷೆ ಅಧ್ಯಯನ ಮಾಡಿದ ನಂತರವೇ ವಿದ್ಯಾರ್ಥಿಗಳಿಗೆ ಮೂರನೇ ಭಾಷೆಯಾಗಿ ಅಥವಾ ನಾಲ್ಕನೆಯ ಹೆಚ್ಚುವರಿ ಭಾಷೆಯಾಗಿ ವಿದೇಶಿ ಭಾಷೆಯ ಆಯ್ಕೆಗೆ ಅವಕಾಶ ಇದೆ. ರಾಷ್ಟ್ರೀಯ ಶಿಕ್ಷಣ ನೀತಿ -2020, ಶಾಲಾ ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು -2023' ಯೋಜನೆಯ ಭಾಗವಾಗಿ ಈ ಪರಿಷ್ಕರಣೆ ಮಾಡಲಾಗಿದೆ' ಎಂದು ಸಿಬಿಎಸ್‌ಇ ಮೇ ತಿಂಗಳಲ್ಲಿ ತಿಳಿಸಿತ್ತು.

'2026-27ನೇ ಶೈಕ್ಷಣಿಕ ವರ್ಷಕ್ಕೆ 6ನೇ ತರಗತಿಯಿಂದ ಕಡ್ಡಾಯವಾಗಿ ತ್ರಿಭಾಷಾ ಸೂತ್ರವನ್ನು ಅಳವಡಿಸಲಾಗುತ್ತದೆ ಮತ್ತು 9ನೇ ತರಗತಿಯ ವಿದ್ಯಾರ್ಥಿಗಳು ಗಣಿತ ಮತ್ತು ವಿಜ್ಞಾನ ವಿಷಯವನ್ನು ಎರಡು ಹಂತಗಳಲ್ಲಿ ಅಧ್ಯಯನ ನಡೆಸಬಹುದಾದ ಹೊಸ ಅವಕಾಶವನ್ನು ಒದಗಿಸಲಾಗುವುದು' ಎಂದು ಸಿಬಿಎಸ್‌ಇ, ಏಪ್ರಿಲ್‌ನಲ್ಲಿ ಘೋಷಿಸಿತ್ತು. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries