HEALTH TIPS

ಮಾದಕವಸ್ತು ಸಾಗಣೆಗೆ ಡ್ರೋನ್‌

 ನವದೆಹಲಿ : 'ಪಾರ್ಸಲ್‌ ಮತ್ತು ಕೊರಿಯರ್‌ ಸೇವೆಗಳ ಬದಲು ಡ್ರೋನ್‌ಗಳನ್ನು ಬಳಸಿಕೊಂಡು 'ಮಾನವ ರಹಿತ' ವಿಧಾನದಲ್ಲಿ ಮಾದಕ ವಸ್ತುಗಳ ಸಾಗಣೆ ಮಾಡುವುದು ಇತ್ತೀಚಿನ ವರ್ಷಗಳಲ್ಲಿ ಗಣನೀಯವಾಗಿ ಹೆಚ್ಚಿದ್ದು, ದೇಶದ ಭದ್ರತೆಗೆ ಗಂಭೀರ ಸವಾಲಾಗಿದೆ' ಎಂದು ಮಾದಕವಸ್ತು ನಿಗ್ರಹ ದಳ (ಎನ್‌ಸಿಬಿ) ಇತ್ತೀಚೆಗೆ ಬಿಡುಗಡೆ ಮಾಡಿದ 2025ನೇ ಸಾಲಿನ ಅಂಕಿ ಅಂಶ ಬಹಿರಂಗಪಡಿಸಿದೆ. 


ಭಾರತ- ಪಾಕ್‌ ಗಡಿಯಲ್ಲಿ ಡ್ರೋನ್‌ ಮೂಲಕ ಮಾದಕ ವಸ್ತುಗಳ ಕಳ್ಳಸಾಗಣೆ ಪ್ರಕರಣಗಳು ಹೆಚ್ಚುತ್ತಿವೆ. 2025ರಲ್ಲಿ ಪಂಜಾಬ್‌ನಲ್ಲಿ 298, ಜಮ್ಮು ಮತ್ತು ಕಾಶ್ಮೀರದಲ್ಲಿ ನಾಲ್ಕು, ರಾಜಸ್ಥಾನದಲ್ಲಿ ಮೂರು ಸೇರಿ ಡ್ರೋನ್‌ ಮೂಲಕ ಮಾದಕವಸ್ತು ಸಾಗಣೆಗೆ ಸಂಬಂಧಿಸಿದ ಒಟ್ಟು 305 ಪ್ರಕರಣಗಳು ವರದಿಯಾಗಿವೆ. ಕಾನೂನು ಜಾರಿ ಸಂಸ್ಥೆಗಳು ಇಂತಹ ಹಲವು ಪ್ರಯತ್ನಗಳನ್ನು ವಿಫಲಗೊಳಿಸಿದ್ದು,

ಒಟ್ಟು 468 ಕೆ.ಜಿಯಷ್ಟು ಮಾದಕವಸ್ತು ವಶಪಡಿಸಿಕೊಳ್ಳಲಾಗಿದೆ.

'ಡ್ರೋನ್‌ಗಳ ಮೂಲಕ ಸಾಗಣೆ ಮಾಡಿದ ಮಾದಕ ವಸ್ತುಗಳಲ್ಲಿ ಹೆರಾಯಿನ್‌, ಮೆಥಾಂಫೆಟಮೈನ್, ಅಫೀಮು ಪ್ರಮಾಣವೇ ಹೆಚ್ಚಿದೆ. ಮಾದಕ ವಸ್ತು ಸಾಗಣೆದಾರರು ಕಾನೂನು ಜಾರಿ ಸಂಸ್ಥೆಗಳಿಂದ ತಪ್ಪಿಸಿಕೊಳ್ಳಲು ಪರ್ಯಾಯ ಸಾಗಾಣಿಕೆ ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ. ಡೆಡ್‌ ಡ್ರಾಪ್‌ ವಿಧಾನ, ಡಾರ್ಕ್‌ನೆಟ್ ಮಾರ್ಕೆಟ್‌, ಕ್ರಿಪ್ಟೊಕರೆನ್ಸಿ, ಕಡಲ ಮಾರ್ಗಗಳ ಮೂಲಕ ನಿಷೇಧಿತ ವಸ್ತುಗಳ ಸಾಗಾಣಿಕೆ ಇತ್ತೀಚಿನ ವರ್ಷಗಳಲ್ಲಿ ಗಣನೀಯವಾಗಿ ಹೆಚ್ಚಿದೆ' ಎಂದು ಎನ್‌ಸಿಬಿ ಹೇಳಿದೆ.

'ಮಾದಕವಸ್ತು ಕಳ್ಳಸಾಗಣೆಯ ವಿಧಾನಗಳು ದಿನದಿಂದ ದಿನಕ್ಕೆ ಬದಲಾಗುತ್ತಲೇ ಇವೆ. ಇದನ್ನು ತಡೆಯಲು ಅಂತರರಾಷ್ಟ್ರೀಯ ಸಹಕಾರ, ಸುಧಾರಿತ ಡಿಜಿಟಲ್‌ ಮತ್ತು ವಿಧಿವಿಜ್ಞಾನ ತಂತ್ರಜ್ಞಾನವನ್ನು ಬಲಪಡಿಸುವುದು ಅಗತ್ಯವಾಗಿದೆ' ಎಂದು ಎನ್‌ಸಿಬಿ ಹೇಳಿದೆ. ಮಾನವ ರಹಿತ ಸಾಗಣೆ, ಅನಾಮಧೇಯ ಖಾತೆ, ಕ್ರಿಪ್ಟೊಕರೆನ್ಸಿ ಮತ್ತು ಡಿಜಿಟಲ್ ವ್ಯಾಲೆಟ್‌ಗಳ ಮೂಲಕ ಪಾವತಿ ಮಾಡುವುದರಿಂದ ಇಂತಹ ಜಾಲವನ್ನು ಭೇದಿಸುವುದು ಅಷ್ಟೊಂದು ಸುಲಭವಲ್ಲ ಎನ್ನುತ್ತಾರೆ ಅಧಿಕಾರಿಗಳು.

2021ರಲ್ಲಿ ಕೊರಿಯರ್‌ ಮೂಲಕ ರವಾನೆ ಮಾಡಿದ್ದ ಒಟ್ಟು 1,557 ಕೆ.ಜಿಯಷ್ಟು ಮಾದಕವಸ್ತು ವಶಕ್ಕೆ ಪಡೆಯಲಾಗಿತ್ತು.

2022ರಲ್ಲಿ ಕೊರಿಯರ್‌ ಮೂಲಕ ಸಾಗಣೆ ಮಾಡಿದ ಮಾದಕವಸ್ತು ಪ್ರಮಾಣ 754 ಕೆ.ಜಿಗೆ ಮತ್ತು ಪ್ರಕರಣಗಳ ಸಂಖ್ಯೆ 240ಕ್ಕೆ ಇಳಿಕೆಯಾಯಿತು. ಆದರೆ, 2023ರಲ್ಲಿ ಇದು ಮತ್ತೆ 241 ಪ್ರಕರಣ, 1,098 ಕೆ.ಜಿಗೆ ಏರಿಕೆಯಾಯಿತು. 2024ರಲ್ಲಿ 173 ಪ್ರಕರಣಗಳು ವರದಿಯಾದರೆ, ಕಳೆದ ವರ್ಷ ಇದು 174 ಪ್ರಕರಣ ಮತ್ತು ವಶಪಡಿಸಿಕೊಂಡ ಮಾದಕವಸ್ತು 972 ಕೆ.ಜಿಗೆ ಇಳಿಕೆಯಾಗಿದೆ.

ಇದೇ ವೇಳೆ, ಡ್ರೋನ್‌ ಮೂಲಕ ಸಾಗಣೆ ಗಣನೀಯವಾಗಿ ಹೆಚ್ಚಿದೆ ಎಂದು ಎನ್‌ಸಿಬಿ ವರದಿ ಹೇಳಿದೆ. 










ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries