ನವದೆಹಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ(ಸಿಬಿಎಸ್‌ಇ)ಯ 12ನೇ ತರಗತಿ ಪರೀಕ್ಷೆಯ ಮರುಮೌಲ್ಯಮಾಪನದ ಫಲಿತಾಂಶವು ಭಾನುವಾರ ಪ್ರಕಟವಾಗಿದೆ.
'ಪರಿಶೀಲನೆ ಮತ್ತು ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದವರ ಫಲಿತಾಂಶವನ್ನು ಹಂತ ಹಂತವಾಗಿ ಪ್ರಕಟಿಸಲಾಗುತ್ತದೆ. ಶೇಕಡ 87ರಷ್ಟು ಅರ್ಜಿದಾರರ ಫಲಿತಾಂಶ ಪ್ರಕಟವಾಗಿದೆ.
ಇನ್ನುಳಿದ ಅರ್ಜಿದಾರರ ಫಲಿತಾಂಶವೂ ಶೀಘ್ರದಲ್ಲಿಯೇ ಪ್ರಕಟವಾಗಲಿದೆ' ಎಂದು ಸಿಬಿಎಸ್‌ಇ 'ಎಕ್ಸ್'ನಲ್ಲಿ ತಿಳಿಸಿದೆ.
'ಸಿಬಿಎಸ್‌ಇಯ ಅಧಿಕೃತ ವೆಬ್‌ಸೈಟ್‌ನಲ್ಲಿ ಅಂಕಗಳನ್ನು ಪರಿಶೀಲಿಸಬಹುದು. results.digilocker.gov.in ಮೂಲಕ ಅರ್ಜಿಯ ಸ್ಥಿತಿಯನ್ನು ತಿಳಿಯಬಹುದು' ಎಂದು ಸಿಬಿಎಸ್‌ಇ ತಿಳಿಸಿದೆ.

