2024ರ ಆರಂಭದಲ್ಲಿ ಗೋಗಲ್ ದಾರಾ ಅರಣ್ಯದೊಳಗೆ ಭಯೋತ್ಪಾದಕ ಗುಂಪು ಡ್ರೋನ್ ಅನ್ನು ಕಳುಹಿಸಿತ್ತು. ಅದರಲ್ಲಿ 20 ಪಿಸ್ತೂಲ್‌ಗಳು, ₹15 ಲಕ್ಷ ಮತ್ತು ತ್ರಿಕೋನಾಕಾರದ ಬಾಂಬ್‌ಗಳು (ಚೀನಾದ ಗ್ರೆನೇಡ್‌ಗಳು) ಇದ್ದವು ಎಂದು ಎನ್‌ಐಎ ತಿಳಿಸಿದೆ.
'2022 ಮತ್ತು 2024ರ ನಡುವೆ ಗುಪ್ತಚರ ಮಾಹಿತಿ ಸಂಗ್ರಹದಲ್ಲಿ ಉಂಟಾದ ವೈಫಲ್ಯವೇ ಭಯೋತ್ಪಾದಕರು ಕಣಿವೆಯಲ್ಲಿ ಯಾರ ಕಣ್ಣಿಗೂ ಬೀಳದೆ ಮುಕ್ತವಾಗಿ ಓಡಾಡಲು ಮುಖ್ಯ ಕಾರಣ' ಎಂದು ದೋಷಾರೋಪ ಪಟ್ಟಿಯನ್ನು ವಿಶ್ಲೇಷಿಸುತ್ತಿರುವ ಭದ್ರತಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
'2022-24ರ ಅವಧಿಯಲ್ಲಿ ಸ್ಥಳೀಯ, ತಳಮಟ್ಟದಲ್ಲಿ ಮಾಹಿತಿ ನೀಡುತ್ತಿದ್ದ 'ಮಾನವ ಬುದ್ಧಿಮತ್ತೆ ಜಾಲ'ಗಳನ್ನು ನಿರ್ಲಕ್ಷಿಸಿ, ಕೇವಲ ತಾಂತ್ರಿಕ ಬುದ್ಧಿಮತ್ತೆಯ ಮೇಲೆಯೇ ಅತಿಯಾಗಿ ಅವಲಂಬಿಸಲಾಗಿತ್ತು. ಇದರಿಂದ ಭಯೋತ್ಪಾದಕರು ಸುಲಭವಾಗಿ ಶಸ್ತ್ರಾಸ್ತ್ರಗಳನ್ನು ಪಡೆಯಲು ಹಾಗೂ ದೊಡ್ಡ ಮಟ್ಟದಲ್ಲಿ ದಾಳಿ ನಡೆಸಲು ಸಾಧ್ಯವಾಗಿದೆ' ಎಂದು ಹೇಳಿದ್ದಾರೆ.
'ಪರ್ವತಗಳ ಕಣ್ಣು ಮತ್ತು ಕಿವಿ' ಎಂದು ಪರಿಗಣಿಸಲಾದ ಗುಜ್ಜರ್ ಮತ್ತು ಬೇಕರ್ವಾಲ್ ಅಲೆಮಾರಿ ಬುಡಕಟ್ಟು ಜನಾಂಗದವರಿಗೆ ದುರ್ಗಮ ಪ್ರದೇಶಗಳ ಬಗ್ಗೆ ಆಳವಾದ ಜ್ಞಾನವಿತ್ತು. ಇವರು ಭಯೋತ್ಪಾದಕರು ಹಾಗೂ ಅವರ ಅಡಗುತಾಣಗಳ ಬಗ್ಗೆ ಭದ್ರತಾ ಪಡೆಗಳಿಗೆ ಮಾಹಿತಿ ನೀಡುತ್ತಿದ್ದರು. ಆದರೆ, ಇತ್ತೀಚಿನ ವರ್ಷಗಳಲ್ಲಿ ಈ ಬುಡಕಟ್ಟು ಜನಾಂಗದವರು ಹಾಗೂ ಭದ್ರತಾ ಪಡೆಗಳ ನಡುವೆ ಅಪನಂಬಿಕೆ ಹೆಚ್ಚುತ್ತಿದೆ. ಹೀಗಾಗಿ, ಅವರ ವಿಶ್ವಾಸವನ್ನು ಮರುಗಳಿಸಬೇಕು' ಎಂದು ತಜ್ಞರು ಸಲಹೆ ನೀಡಿದ್ದಾರೆ.
ಕಳೆದ ವರ್ಷ ಏಪ್ರಿಲ್‌ನಲ್ಲಿ ಪಹಲ್ಗಾಮ್‌ನಲ್ಲಿ ನಡೆದಿದ್ದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಮೃತಪಟ್ಟಿದ್ದರು. ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆಯು ಆಪರೇಷನ್ ಸಿಂಧೂರ ಕಾರ್ಯಾಚರಣೆ ಮೂಲಕ ಗಡಿಯುದ್ದಕ್ಕೂ ಇದ್ದ ಭಯೋತ್ಪಾದಕರ ಅಡಗುತಾಣಗಳನ್ನು ನಾಶಗೊಳಿಸಿತ್ತು.

