ಸೋಲ್: 'ಹಡಗು ನಿರ್ಮಾಣ, ಆರೋಗ್ಯ, ಮೂಲಸೌಕರ್ಯ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ಭಾರತ ಮತ್ತು ದಕ್ಷಿಣ ಕೊರಿಯಾ ದೇಶಗಳು ಹೆಚ್ಚು ಸಹಕಾರದಿಂದ ಕೆಲಸ ಮಾಡಬೇಕು' ಎಂದು ಭಾರತದ ವಿದೇಶಾಂಗ ಸಚಿವ ಜೈಶಂಕರ್ ಗುರುವಾರ ಅಭಿಪ್ರಾಯಪಟ್ಟರು.
ಜೈಶಂಕರ್ ಅವರು ವಿದೇಶ ಪ್ರವಾಸದಲ್ಲಿದ್ದು, ಸದ್ಯ ಎರಡು ದಿನಗಳ ಭೇಟಿಗಾಗಿ ದಕ್ಷಿಣ ಕೊರಿಯಾದಲ್ಲಿ ಇದ್ದಾರೆ.
'ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಹೆಚ್ಚಿನ ಸಾಮರ್ಥ್ಯವಿದೆ ಮತ್ತು ಅವಕಾಶಗಳೂ ಇವೆ. ಆದರೆ, ಕೆಲವು ದೇಶಗಳ ಹಿತಾಸಕ್ತಿಗಳಿಗೆ ಬಹಿರಂಗವಾಗಿಯೇ ಪ್ರಾಧಾನ್ಯ ನೀಡಲಾಗುತ್ತಿದೆ' ಎಂದು ದೇಶದ ಹೆಸರು ಉಲ್ಲೇಖಿಸದೆ ಜೈಶಂಕರ್ ಹೇಳಿದರು.

