HEALTH TIPS

ಶೀಘ್ರದಲ್ಲೇ ಕೇಂದ್ರದ ಮಂತ್ರಿ ಪರಿಷತ್ ಪುನರ್‌ರಚನೆ ಸಾಧ್ಯತೆ: ವರದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಮಂತ್ರಿ ಪರಿಷತ್ ಪುನರ್‌ರಚನೆಗೆ ಕಾಲ ಸನ್ನಿಹಿತವಾಗಿರುವಂತೆ ತೋರುತ್ತಿದೆ. ಯಾವುದೇ ಸಂದರ್ಭದಲ್ಲಿ ಈ ಪ್ರಕ್ರಿಯೆ ನಡೆಯಬಹುದು ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.

ಬಹುಶಃ ಜುಲೈ 3ನೇ ವಾರದಿಂದ ಆರಂಭವಾಗಲಿರುವ ಸಂಸತ್ತಿನ ಮಳೆಗಾಲದ ಅಧಿವೇಶನಕ್ಕೂ ಮುನ್ನ ಪುನರ್‌ರಚನೆಯ ಸೂಚನೆಗಳು ಸಿಕ್ಕಿವೆ ಎಂದು ಮೂಲಗಳು ತಿಳಿಸಿವೆ.

ಈ ಚರ್ಚೆಯ ಬಗ್ಗೆ ತಿಳಿದಿರುವ ಮೂಲಗಳ ಪ್ರಕಾರ, ರಾಜ್ಯ ಘಟಕಗಳಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ನೇತೃತ್ವದಲ್ಲಿ ಹೊಸ ತಂಡದ ಘೋಷಣೆಯ ಜೊತೆ ಜೊತೆಗೇ ಮಂತ್ರಿ ಪರಿಷತ್ ಪುನರ್‌ರಚನೆ ಮಾಡಲಾಗುತ್ತದೆ. ನಿತಿನ್ ನವೀನ್ ಅವರ ತಂಡವನ್ನು ಶೀಘ್ರದಲ್ಲೇ ಘೋಷಿಸುವ ಸಾಧ್ಯತೆ ಇದೆ. ಏಕೆಂದರೆ, ಬಿಜೆಪಿಯ ಉನ್ನತ ನಾಯಕರು ಪಟ್ಟಿಯನ್ನು ಅಂತಿಮಗೊಳಿಸಿದ್ದಾರೆ ಎಂದು ನಂಬಲಾಗಿದೆ, ಯುವಕರಿಗೆ ಪ್ರಮುಖ ಸಂಘಟನಾ ಹೊಣೆ ನೀಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಈ ಸಂಬಂಧ ನಿತಿನ್ ನವೀನ್, ಕಳೆದ ವಾರ ಕೇಂದ್ರದ ಕೆಲ ರಾಜ್ಯ ಸಚಿವರೊಂದಿಗೂ ಸಮಾಲೋಚನೆ ನಡೆಸಿದ್ದಾರೆ. ಕೆಲ ಕೇಂದ್ರ ಸಚಿವರನ್ನು ಪಕ್ಷದ ಸಂಘಟನಾ ಕೆಲಸಕ್ಕೆ ನಿಯೋಜಿಸುವ ಮತ್ತು ಪಕ್ಷದ ಕೆಲ ನಾಯಕರನ್ನು ಮೋದಿ ಸಂಪುಟಕ್ಕೆ ಸೇರಿಸಿಕೊಳ್ಳುವ ಬಲವಾದ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಕೆಲವು ಸಚಿವರ ಖಾತೆ ಬದಲಾವಣೆಗಳ ಬಗ್ಗೆಯೂ ಸುದ್ದಿ ಹಬ್ಬಿದೆ. ನೀಟ್ ಪತ್ರಿಕೆ ಸೋರಿಕೆ ಮತ್ತು ಸಿಬಿಎಸ್‌ಇ ಡಿಜಿಟಲ್ ಮಾರ್ಕಿಂಗ್ ವ್ಯವಸ್ಥೆಯಲ್ಲಿನ ಅಕ್ರಮ ಸೇರಿದಂತೆ ಶಿಕ್ಷಣ ಸಚಿವಾಲಯದ ವಿರುದ್ಧ ಹಲವು ಆರೋಪಗಳ ಹಿನ್ನೆಲೆ ಸಚಿವ ಧರ್ಮೇಂದ್ರ ಪ್ರಧಾನ್ ಕುರ್ಚಿ ಅಲುಗಾಡುತ್ತಿದೆ ಎಂದು ವರದಿ ತಿಳಿಸಿದೆ.

ಮಂತ್ರಿ ಪರಿಷತ್ ಪುನರ್‌ರಚನೆಯು ಪ್ರಧಾನಿ ನರೇಂದ್ರ ಮೋದಿಯವರ ನಿಗದಿತ ವಿದೇಶ ಪ್ರವಾಸಗಳನ್ನು ನೋಡಿಕೊಂಡೇ ಮಾಡಲಾಗುತ್ತಿದೆ. ಜೂನ್ 27ರಿಂದ 29ರವರೆಗೆ ಮೋದಿ ಸೀಚೆಲ್ಸ್ ಪ್ರವಾಸ ಕೈಗೊಂಡಿದ್ದಾರೆ. ಜೂಲೈ 6ರಿಂದ 11ರವರೆಗೆ ಇಂಡೋನೇಶಯಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳುವ ನಿರೀಕ್ಷೆಯೂ ಇದೆ. ಜೂಲೈ 1ರಿಂದ 3ರವರೆಗೆ ಜಪಾನ್ ಪ್ರಧಾನಿಯ ಭಾರತ ಭೇಟಿ ನಿಗದಿಯಾಗಿದೆ.

ತಮ್ಮ ರಾಜ್ಯಸಭಾ ಸ್ಥಾನದ ಅವಧಿ ಮುಗಿದ ಬಳಿಕ ಕೇಂದ್ರ ಸಚಿವ ಜಾರ್ಜ್ ಕುರಿಯನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಕುರಿಯನ್ ಅವರು ಕೇಂದ್ರದ ಅಲ್ಪಸಂಖ್ಯಾತ ಸಚಿವಾಲಯ ಮತ್ತು ಮೀನುಗಾರಿಕೆ ಮತ್ತು ಪಶು ಸಂಗೋಪನೆ ಖಾತೆಯ ರಾಜ್ಯ ಸಚಿವರಾಗಿದ್ದರು.

ಜೂನ್ 21ರಂದು ಕುರಿಯನ್ ಅವರ ರಾಜ್ಯಸಭಾ ಸ್ಥಾನದ ಅವಧಿ ಅಂತ್ಯಗೊಂಡಿತ್ತು. ಅವರನ್ನು ಮತ್ತೆ ಆಯ್ಕೆ ಮಾಡಲು ಬಿಜೆಪಿ ಆಸಕ್ತಿ ತೋರಿಸಲಿಲ್ಲ.

ರೈಲ್ವೆ ಖಾತೆ ರಾಜ್ಯ ಸಚಿವರಾದ ರವನೀತ್ ಸಿಂಗ್ ರಾಜ್ಯಸಭಾ ಸ್ಥಾನದ ಅವಧಿ ಸಹ ಮುಗಿದಿದ್ದು, ಅವರನ್ನೂ ಮರುಆಯ್ಕೆಗೆ ಪರಿಗಣಿಸಿಲ್ಲ.

ಮೇ 28 ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರು, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳು ಹಾಗೂ ಕಾರ್ಪೊರೇಟ್ ವ್ಯವಹಾರಗಳ ರಾಜ್ಯ ಸಚಿವ ಹರ್ಷ್ ಮಲ್ಹೋತ್ರಾ ಅವರನ್ನು ದೆಹಲಿ ಬಿಜೆಪಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದರು. ಕಳೆದ ವರ್ಷ ಡಿಸೆಂಬರ್‌ನಲ್ಲಿ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಅವರನ್ನು ಬಿಜೆಪಿಯ ಉತ್ತರ ಪ್ರದೇಶ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು.

ಈ ನಡುವೆ, ಟಿಎಂಸಿಯ ಬಂಡಾಯ ಬಣದ ಸಂಸದರು ಮತ್ತು ಶಿವಸೇನಾದ ಕೆಲವರಿಗೂ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries