HEALTH TIPS

ಫಿಫಾ ವಿಶ್ವಕಪ್‌ ನಲ್ಲಿ ಭಾಗವಹಿಸಲು ಅಮೆರಿಕದ ವೀಸಾಗಳನ್ನು ಸ್ವೀಕರಿಸಿದ ಇರಾನ್

 ನ್ಯೂಯಾರ್ಕ್ : ಇರಾನ್ ಫುಟ್ಬಾಲ್ ತಂಡವು 2026ರ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಲು ಅಗತ್ಯವಿರುವ ಅಮೆರಿಕದ ವೀಸಾಗಳನ್ನು ಪಡೆದಿದೆ. ಇದರೊಂದಿಗೆ ತನ್ನ ಮೊದಲ ಪಂದ್ಯ ಆರಂಭವಾಗಲು ಕೆಲವೇ ದಿನಗಳು ಬಾಕಿ ಇರುವಾಗ ಉಂಟಾಗಿದ್ದ ಅನಿಶ್ಚಿತತೆ ಹಾಗೂ ರಾಜತಾಂತ್ರಿಕ ತೊಡಕುಗಳಿಗೆ ತೆರೆಬಿದ್ದಿದೆ. 


ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನ ಸಂಬಂಧಗಳ ಹಿನ್ನೆಲೆಯಲ್ಲಿ ವೀಸಾ ಪ್ರಕ್ರಿಯೆಯಲ್ಲಿನ ವಿಳಂಬವು ಇರಾನ್ ತಂಡದ ವಿಶ್ವಕಪ್ ಭಾಗವಹಿಸುವಿಕೆ ಕುರಿತು ಗೊಂದಲಕ್ಕೆ ಕಾರಣವಾಗಿತ್ತು.

ವೀಸಾಗಳನ್ನು ಅಂತಿಮಗೊಳಿಸಿ ವಿತರಿಸಲಾಗಿದೆ ಎಂದು ಶ್ವೇತಭವನದ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ. ಇದರಿಂದ ಇರಾನ್ ನಿಯೋಗದ ವಿಶ್ವಕಪ್ ಪ್ರಯಾಣಕ್ಕೆ ದಾರಿ ಸುಗಮವಾಗಿದೆ.

ಅಗತ್ಯ ಪ್ರಯಾಣ ದಾಖಲೆಗಳ ಪ್ರಕ್ರಿಯೆ ವಿಳಂಬವಾಗಿರುವ ಹಿನ್ನೆಲೆಯಲ್ಲಿ ಫಿಫಾ ಮಧ್ಯಪ್ರವೇಶಿಸಬೇಕು ಎಂದು ಇರಾನ್ ಫುಟ್ಬಾಲ್ ಫೆಡರೇಶನ್ ಆಗ್ರಹಿಸಿತ್ತು. ಎಲ್ಲ ಅರ್ಹ ತಂಡಗಳಿಗೆ ಸಮಾನ ಪ್ರವೇಶ ಒದಗಿಸುವ ಜವಾಬ್ದಾರಿಯನ್ನು ಆತಿಥೇಯ ರಾಷ್ಟ್ರ ನಿರ್ವಹಿಸುವುದನ್ನು ಖಚಿತಪಡಿಸಬೇಕು ಎಂದು ಅದು ಹೇಳಿತ್ತು.

1930ರಲ್ಲಿ ವಿಶ್ವಕಪ್ ಆರಂಭವಾದ ಬಳಿಕ, ಆತಿಥೇಯ ರಾಷ್ಟ್ರ ಮತ್ತು ಭಾಗವಹಿಸುವ ರಾಷ್ಟ್ರದ ನಡುವೆ ಇಂತಹ ರಾಜತಾಂತ್ರಿಕ ಹಾಗೂ ಭದ್ರತಾ ಸವಾಲುಗಳು ಎದುರಾದ ಅಪರೂಪದ ಸಂದರ್ಭಗಳಲ್ಲಿ ಇದೂ ಒಂದಾಗಿದೆ.


ಇರಾನ್ ರಾಷ್ಟ್ರೀಯ ತಂಡದ ಎಲ್ಲಾ ಆಟಗಾರರ ವೀಸಾಗಳಿಗೆ ಅನುಮೋದನೆ ನೀಡಲಾಗಿದೆ. ತರಬೇತುದಾರರು ಹಾಗೂ ಸಹಾಯಕ ಸಿಬ್ಬಂದಿಯ ಹಲವರಿಗೂ ವೀಸಾಗಳು ದೊರೆತಿವೆ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.


ಇರಾನ್ ತಂಡವು ವಿಶ್ವಕಪ್‌ನ 'ಜಿ' ಗುಂಪಿನಲ್ಲಿ ಸ್ಥಾನ ಪಡೆದಿದ್ದು, ತನ್ನ ಮೂರು ಗುಂಪು ಹಂತದ ಪಂದ್ಯಗಳನ್ನೂ ಅಮೆರಿಕದಲ್ಲೇ ಆಡಲಿದೆ.


ಪಂದ್ಯಗಳ ವೇಳಾಪಟ್ಟಿ:


ಜೂನ್ 15: ಅಮೆರಿಕ - ನ್ಯೂಜಿಲೆಂಡ್, ಲಾಸ್ ಏಂಜಲೀಸ್ ಸ್ಟೇಡಿಯಂ, ಇಂಗಲ್‌ವುಡ್


ಜೂನ್ 21: ಇರಾನ್ - ಬೆಲ್ಜಿಯಂ, ಲಾಸ್ ಏಂಜಲೀಸ್ ಸ್ಟೇಡಿಯಂ,

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries