HEALTH TIPS

ಆನ್‌ಮಾರ್ಕ್ ಪೋರ್ಟಲ್‌ನಲ್ಲಿನ ದೋಷ ಸರಿಪಡಿಸಲಾಗಿದೆ: ಸಿಬಿಎಸ್‌ಇ

 ನವದೆಹಲಿ: ಆನ್‌ಮಾರ್ಕ್ ಪೋರ್ಟಲ್‌ನಲ್ಲಿನ ದೋಷಗಳನ್ನು ನಿವಾರಿಸಲಾಗಿದೆ ಎಂದು ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿಯ (ಸಿಬಿಎಸ್‌ಇ) ಭಾನುವಾರ ಹೇಳಿದೆ.


ಈ ಪೋರ್ಟಲ್‌ನ ಪಾವತಿ ವ್ಯವಸ್ಥೆಯ ಮೇಲೆ ಶನಿವಾರ ಸೈಬರ್‌ ದಾಳಿ ನಡೆದಿದ್ದು, ಕೆಲವು ವಿದ್ಯಾರ್ಥಿಗಳು ಅನಧಿಕೃತವಾಗಿ ಪೋರ್ಟಲ್‌ ಪ್ರವೇಶಿಸಿ, ಪಾವತಿ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡಿದ್ದರು.

ವಿನೋದಕ್ಕಾಗಿ ಅಥವಾ ದುರುದ್ದೇಶದಿಂದ ನಡೆದ ಈ ಕೃತ್ಯದ ಬೆನ್ನಲ್ಲೇ, ಸಿಬಿಎಸ್‌ಇ ಐಐಟಿನ ಸೈಬರ್‌ ತಜ್ಞರ ನೆರವಿನೊಂದಿಗೆ ಆನ್‌ಮಾರ್ಕ್ ಪೋರ್ಟಲ್‌ನ ಭದ್ರತೆಯನ್ನು ಹೆಚ್ಚಿಸಿತ್ತು.

'ಪೋರ್ಟಲ್‌ ನಿರ್ವಹಣೆದಾರರು ತಾಂತ್ರಿಕ ದೋಷವನ್ನು ಸರಿಪಡಿಸಿದ್ದಾರೆ. ಹಣ ವರ್ಗಾವಣೆಯ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುವ ಪೇಮೆಂಟ್‌ ಗೇಟ್‌ವೇ ಮೇಲೆ ಮತ್ತೆ ಸೈಬರ್‌ ದಾಳಿ ನಡೆಯದಂತೆ ಸುರಕ್ಷತಾ ಕ್ರಮ ಬಲಪಡಿಸಲಾಗಿದೆ. ಪೋರ್ಟಲ್‌ ಅನ್ನು ಶೀಘ್ರವೇ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲಾಗುವುದು' ಎಂದು ಸಿಬಿಎಸ್‌ಇ ಎಕ್ಸ್‌ನಲ್ಲಿ ತಿಳಿಸಿದೆ.

'ನೈತಿಕ ಹ್ಯಾಕರ್‌ಗಳಿಗೆ ಧನ್ಯವಾದ'

'ಆನ್‌ಮಾರ್ಕ್ ಪೋರ್ಟಲ್‌ನಲ್ಲಿನ ಭದ್ರತಾ ದೌರ್ಬಲ್ಯವನ್ನು ಎತ್ತಿ ತೋರಿಸಿದ 'ನೈತಿಕ ಹ್ಯಾಕರ್‌'ಗಳಿಗೆ ಮತ್ತು ಸಾರ್ವಜನಿಕರಿಗೆ ಧನ್ಯವಾದ. ಮತ್ತೆ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಲ್ಲಿ seಛಿಥಿ-ಛಿbse@ಟಿiಛಿ.iಟಿ ಮೂಲಕ ಸೈಬರ್‌ ಭದ್ರತಾ ತಂಡವನ್ನು ಸಂಪರ್ಕಿಸಬಹುದು ಎಂದು ಸಿಬಿಎಸ್‌ಇ ಪ್ರಕಟಣೆ ತಿಳಿಸಿದೆ.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries