HEALTH TIPS

ಭಾರತದಿಂದ ಬ್ರಹ್ಮೋಸ್ ಕ್ಷಿಪಣಿ ಖರೀದಿ ಒಪ್ಪಂದಕ್ಕೆ ವಿಯೆಟ್ನಾಮ್ ಅಂಕಿತ

 ಸಿಂಗಾಪುರ: ಭಾರತದ ಸ್ವದೇಶಿ ನಿರ್ಮಿಸಿದ ಶಕ್ತಿಶಾಲಿ ಬ್ರಹ್ಮೋಸ್ ಕ್ಷಿಪಣಿಯನ್ನು ಖರೀದಿಸುವ ಒಪ್ಪಂದಕ್ಕೆ ವಿಯೆಟ್ನಾಮ್ ಸಹಿಹಾಕಿದೆ. ಸಿಂಗಾಪುರದಲ್ಲಿ ನಡೆಯುತ್ತಿರುವ ಶಾಂಗ್ರಿಲಾ ಡಯಲಾಗ್ ಶೃಂಗಸಭೆಯಲ್ಲಿ ಮಾತನಾಡಿದ ಸಂದರ್ಭ ಭಾರತದ ರಕ್ಷಣಾ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿಂಗ್ ಈ ವಿಷಯವನ್ನು ತಿಳಿಸಿದರು.


ವಿಯೆಟ್ನಾಮ್‌ಗೆ ಬ್ರಹ್ಮೋಸ್ ಪೂರೈಕೆ ಮಾಡುವ ಒಡಂಬಡಿಕೆಯು ಭಾರತದ ಆಯಕಟ್ಟಿನ ರಕ್ಷಣಾ ಸಾಮಾಗ್ರಿಗಳ ರಫ್ತಿನಲ್ಲಿ ಮಹತ್ವದ ಮೈಲುಗಲ್ಲಾಗಿದೆ ಎಂದು ರಾಜೇಶ್ ಕುಮಾರ್ ಬಣ್ಣಿಸಿದ್ದಾರೆ.

ಇಂಡೋನೇಶಿಯದ ಜೊತೆ ಇದೇ ರೀತಿಯ ಒಪ್ಪಂದವೊಂದು ಏರ್ಪಡಲಿದ್ದು, ಅದು ಅಂತಿಮ ಹಂತದಲ್ಲಿದೆ ಎಂದವರು ಹೇಳಿದರು.

ಫಿಲಿಪ್ಪೀನ್ಸ್, 2022ರಲ್ಲಿ ಬ್ರಹ್ಮೋಸ್ ಕ್ಷಿಪಣಿಯನ್ನು ಖರೀದಿಸಿದ ಮೊದಲ ಹೊರದೇಶವಾಗಿದ್ದು, 375 ದಶಲಕ್ಷಡಾಲರ್ ಮೊತ್ತದ ಒಪ್ಪಂದವಾಗಿತ್ತು. ಇದೀಗ ವಿಯೆಟ್ನಾಮ್ ಜೊತೆಗೆ ಸುಮಾರು 630 ದಶಲಕ್ಷ ಡಾಲರ್ (5800 ಕೋಟಿ ರೂ.) ಒಪ್ಪಂದವಾಗಿದೆ. ಕ್ಷಿಪಣಿ ವ್ಯವಸ್ಥೆಯ ಜೊತೆಗೆ, ದೀರ್ಘಾವಧಿಯ ಕ್ಷಿಪಣಿ ಸಾಗಣೆ ವ್ಯವಸ್ಥೆಯನ್ನು ಕೂಡಾ ಈ ಒಪ್ಪಂದದಡಿ ಭಾರತವು ವಿಯೆಟ್ನಾಮ್‌ಗೆ ಒದಗಿಸಲಿದೆ.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries