ವಿಚಿತ್ರವೆನಿಸುವ ಈ ಯೋಜನೆಯ ಉದ್ದೇಶ ಸೊಳ್ಳೆಗಳ ಸಂತತಿಯನ್ನು ನಿರ್ನಾಮ ಮಾಡುವುದೇ ಆಗಿದೆ.
ಕಂಪನಿಯು ರೋಗಕಾರಕ ಸೊಳ್ಳೆಗಳಿಂದ ಮುಕ್ತಿಗಾಗಿ ದಶಕದ ಹಿಂದೆ 'ಡೀಬಗ್' ಎಂಬ ಯೋಜನೆ ಆರಂಭಿಸಿದ್ದು, ಇದರ ಭಾಗವಾಗಿ ಫ್ಲೋರಿಡಾ ಮತ್ತು ಕ್ಯಾಲಿಫೋರ್ನಿಯಾದಲ್ಲಿ ಕಳೆದ 2 ವರ್ಷಗಳಲ್ಲಿ 3.2 ಕೋಟಿ ಸೊಳ್ಳೆಗಳನ್ನು ಸೃಷ್ಟಿಸಿತ್ತು. ಈಗ ಅವುಗಳನ್ನು 2 ಹಂತದಲ್ಲಿ ಬಿಡುಗಡೆಗೆ ಅನುಮತಿಗಾಗಿ ಅಮೆರಿಕದ ಪರಿಸರ ಸಂರಕ್ಷಣಾ ಇಲಾಖೆಗೆ ಮನವಿ ಮಾಡಿದೆ.
ಈ ತಂತ್ರವನ್ನು ಈಗಾಗಲೇ ಸ್ಕ್ರೂವರ್ಮ ಎಂಬ ನೊಣದ ರೀತಿಯ ಜೀವಿಯ ಮೇಲೆ ಪ್ರಯೋಗ ಮಾಡಲಾಗಿದೆ.
ಸೊಳ್ಳೆಗಳೇನು ಮಾಡ್ತವೆ?:
ಗೂಗಲ್‌ನ ಸೊಳ್ಳೆಗಳಲ್ಲಿ ವೋಲ್ಬಾಚಿಯಾ ಪೈಪಿಯೆಂಟಿಸ್ ಬ್ಯಾಕ್ಟೀರಿಯಾ ಇರುತ್ತದೆ. ಇವುಗಳ ಜತೆಗಿನ ಸಂಭೋಗದಿಂದ ಹೆಣ್ಣುಸೊಳ್ಳೆಗಳಿಡುವ ಮೊಟ್ಟೆಗಳು ಒಡೆಯುವುದೇ ಇಲ್ಲ. ಹೀಗೆ ಕ್ರಮೇಣ ಸೊಳ್ಳೆಗಳ ಜನನವೇ ನಿಂತು ಅವು ನಿರ್ನಾಮವಾಗುತ್ತವೆ ಎಂಬುದು ಈ ಯೋಜನೆಯ ಲೆಕ್ಕಾಚಾರ.
ಇದಕ್ಕೆಂದು ಬಿಡುಗಡೆ ಮಾಡಲಾಗುವ 3.2 ಕೋಟಿ ಗಂಡು ಸೊಳ್ಳೆಗಳಿಂದ ಮನುಷ್ಯರಿಗೆ ಯಾವುದೇ ಅಪಾಯವಾಗದು. ಕಾರಣ ಕಚ್ಚುವುದು ಹೆಣ್ಣುಸೊಳ್ಳೆಗಳು ಮಾತ್ರ.
- ಗೂಗಲ್‌ನಿಂದ 3.2 ಕೋಟಿ ಗಂಡು ಸೊಳ್ಳೆಗಳ ಸೃಷ್ಟಿ!
- ಬಿಡುಗಡೆಗೆ ಸರ್ಕಾರದ ಬಳಿ ಮನವಿ
- ಜಗತ್ತನ್ನು ಸೊಳ್ಳೆ ಮುಕ್ತ ಮಾಡುವ ಗುರಿ

