HEALTH TIPS

ಪಿಚೈ ಭಾಷಣ: ಪ್ಯಾಲೆಸ್ಟೀನ್‌ಗೆ ಬೆಂಬಲ ವ್ಯಕ್ತಪಡಿಸಿ ಹೊರನಡೆದ ವಿದ್ಯಾರ್ಥಿಗಳು

 ನ್ಯೂಯಾರ್ಕ್‌: ಸ್ಟ್ಯಾನ್‌ಫೋರ್ಡ್‌ ವಿಶ್ವವಿದ್ಯಾಲಯದಲ್ಲಿ ಗೂಗಲ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಸುಂದರ್‌ ಪಿಚೈ ಅವರ ಮುಖ್ಯ ಭಾಷಣದ ವೇಳೆ, ಪ್ಯಾಲೆಸ್ಟೀನ್‌ಗೆ ಬೆಂಬಲ ವ್ಯಕ್ತಪಡಿಸಿ ಹಲವಾರು ವಿದ್ಯಾರ್ಥಿಗಳು ಹೊರನಡೆದಿದ್ದಾರೆ. 


ಇದೇ ವಿಶ್ವವಿದ್ಯಾಲಯದಲ್ಲಿ ಮೆಟೀರಿಯಲ್ಸ್‌ ಸೈನ್ಸ್‌ ಮತ್ತು ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ಪಿಚೈ, ಭಾನುವಾರ ಆಯೋಜಿಸಿದ್ದ 2026ರ ತರಗತಿಯ ಪ್ರಾರಂಭೋತ್ಸವದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿದ್ದರು.

ಈ ಕಾರ್ಯಕ್ರಮದಲ್ಲಿ 3,600 ವಿದ್ಯಾರ್ಥಿಗಳು ಸೇರಿದಂತೆ 20 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.

ಪಿಚೈ ಭಾಷಣ ಮಾಡುತ್ತಿದ್ದಂತೆ ಪ್ರೇಕ್ಷಕರ ಗ್ಯಾಲರಿಯಿಂದ ಸುಮಾರು 200 ವಿದ್ಯಾರ್ಥಿಗಳು ಸಣ್ಣ ಗುಂಪುಗಳಾಗಿ ಬ್ಯಾನರ್‌ ಬೀಸುತ್ತಾ, ಶಿಳ್ಳೆ ಹೊಡೆಯುತ್ತಾ, ಪ್ಯಾಲೆಸ್ಟೀನಿಯನ್‌ ಧ್ವಜ ಬೀಸುತ್ತಾ ಸಮಾರಂಭದಿಂದ ಹೊರ ನಡೆದಿದ್ದಾರೆ ಎಂದು 'ಎಸ್‌ಎಫ್‌ಗೇಟ್‌' ವರದಿ ಮಾಡಿದೆ.

ಗೂಗಲ್‌ ಕಂಪನಿಯು ಇಸ್ರೇಲ್‌ನೊಂದಿಗೆ ಹೊಂದಿರುವ ಸಂಬಂಧವನ್ನು ಪ್ರತಿಭಟನಕಾರರು ಖಂಡಿಸಿದ್ದಾರೆ. ಮುಖ್ಯವಾಗಿ 2021ರಲ್ಲಿ ಆ ದೇಶದೊಂದಿಗೆ ಮಾಡಿಕೊಂಡ 'ಪ್ರಾಜೆಕ್ಟ್‌ ನಿಂಬಸ್‌' ಎಂದು ಕರೆಯುವ, 1.2 ಬಿಲಿಯನ್‌ ಡಾಲರ್ (ಸುಮಾರು ₹11,347 ಕೋಟಿ) ಮೊತ್ತದ ಕ್ಲೌಡ್‌-ಕಂಪ್ಯೂಟಿಂಗ್‌ ಒಪ್ಪಂದವನ್ನು ಅವರು ವಿರೋಧಿಸಿದ್ದಾರೆ.

ಗಾಜಾದಲ್ಲಿ ಇಸ್ರೇಲ್‌ ನಡೆಸುತ್ತಿರುವ ಯುದ್ಧ ಮತ್ತು ಕ್ಯಾಂಪಸ್‌ನಲ್ಲಿ ಪ್ಯಾಲೆಸ್ಟೀನ್‌ ಪರ ಪ್ರತಿಭಟನೆಗಳ ವಿರುದ್ಧ ವಿಶ್ವವಿದ್ಯಾಲಯವು ಕೈಗೊಂಡ ಕಠಿಣ ಕ್ರಮಗಳನ್ನು ಖಂಡಿಸಿ ಕಳೆದ ಮೂರು ವರ್ಷಗಳಲ್ಲಿ ವಿದ್ಯಾರ್ಥಿಗಳು ಅನೇಕ ಪ್ರತಿಭಟನೆಗಳನ್ನು ನಡೆಸಿದ್ದರು. ಈಗ ಈ ಕಾರ್ಯಕ್ರಮದಿಂದ ಹೊರನಡೆದಿದ್ದಾರೆ ಎಂದು 'ಎಸ್‌ಎಫ್‌ಗೇಟ್‌' ವರದಿ ಮಾಡಿದೆ. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries