HEALTH TIPS

ಮಲಪ್ಪುರಂನಲ್ಲಿ ಸ್ಪೋಟಕ ವಶ-ಕಟ್ಟತ್ತಡ್ಕದಲ್ಲಿ ಎನ್‍ಐಎ ದಾಳಿ: ಮಹತ್ವದ ಮಾಹಿತಿ ಸಂಗ್ರಹ

ಕಾಸರಗೋಡು: ಮಲಪ್ಪುರಂನ ಕೊಂಡೋಟಿಯಲ್ಲಿ ಉಗ್ರ ಸ್ಫೋಟ ಸಾಮಥ್ರ್ಯವುಳ್ಳ ಒಂದು ಲೋಡ್ ಸ್ಫೋಟಕ ವಸ್ತು ವಶಪಡಿಸಿಕೊಂಡ ಪ್ರಕರಣದ ತನಿಖೆನ್ನು ಕಾಸರಗೋಡು ಜಿಲ್ಲೆಗೆ ವಿಸ್ತರಿಸಲಾಗಿದ್ದು,  ಕುಂಬಳೆ ಪೆÇಲೀಸ್ ಠಾಣೆ ವ್ಯಾಪ್ತಿಯ ಕಟ್ಟತ್ತಡ್ಕದ ವಿವಿಧೆಡೆ ಎನ್‍ಐಎ ದಾಳಿ ನಡೆಸಲಾಗಿದೆ. 


ಐದು ಮಂದಿ ಎನ್‍ಐಎ ಅಧಿಕಾರಿಗಳ ತಂಡ ಪುತ್ತಿಗೆ ಪಂಚಾಯಿತಿ ಕಟ್ಟತ್ತಡ್ಕ ಪ್ರದೇಶದ ಎಕೆಜಿ ನಗರದ ಕ್ವಾರ್ಟರ್ಸ್‍ವೊಂದರಲ್ಲಿ ತಪಾಸಣೆ ನಡೆಸಿದೆ. ಸ್ಪೋಟಕ ವಶಪಡಿಸಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿ ಎನ್‍ಐಎಯ ವಶದಲ್ಲಿರುವ ಮೊಹಮ್ಮದ್ ಸಲೀಂ ಎಂಬಾತನ ಪತ್ನಿ ಹಾಗೂ ಮಕ್ಕಳು ವಾಸಿಸುವ ಕ್ವಾರ್ಟರ್ಸ್ ಇದಾಗಿದ್ದು, ಇವರನ್ನು ವಿಚರಣೆಗೊಳಪಡಿಸುವ ನಿಟ್ಟಿನಲ್ಲಿ ಎನ್‍ಐಎ ದಾಳಿ ನಡೆಸಿದೆ. ದಾಳಿಯಲ್ಲಿ ಪ್ರಕರಣದ ನಿರ್ಣಾಯಕ ದಾಖಲೆ ಎಂದು ಪರಿಗಣಿಸಿರುವ  ಆರ್‍ಸಿ ಬುಕ್ ಹಾಗೂ ಮೂರು ವಿಸಿಟಿಂಗ್ ಕಾರ್ಡ್‍ಗಳನ್ನು ತನಿಖಾ ತಂಡ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. 

2026 ಫೆ. 7ರಂದು ತಿರೂರಂಗಾಡಿ ಪೆÇಲೀಸ್ ಠಾಣೆ ವ್ಯಾಪ್ತಿಯ ಚೆಮ್ಮಾಡ್-ತಲಪ್ಪಾರ ರಸ್ತೆಯಲ್ಲಿ ಇಂಡ್ಯನ್ ಆಯಿಲ್ ಪೆಟ್ರೋಲ್ ಬಂಕ್‍ನ ಮುಂಭಾಗದಲ್ಲಿರುವ ಫರ್ಹ ಹೋಲೋ ಬ್ರಿಕ್ಸ್ ಕಂಪನಿಯ ಕಾಂಪೌಂಡ್‍ನೊಳಗೆ ನಿಲ್ಲಿಸಿದ್ದ ಲಾರಿಯಿಂದ ಸ್ಫೋಟಕ ವಸ್ತುಗಳನ್ನು ವಶಪಡಿಸಲಾಗಿತ್ತು. ಈರುಳ್ಳಿ ತುಂಬಿದ ಗೋಣಿ ಚೀಲಗಳ ಮಧ್ಯೆ 448 ಪೆಟ್ಟಿಗೆಗಳಲ್ಲಾಗಿ 89,600 ಜಿಲಾಟಿನ್ ಕಡ್ಡಿಗಳು, 35 ಪೆಟ್ಟಿಗೆಗಳಲ್ಲಾಗಿ 10,500 ಶಾಕ್ ಟ್ಯೂಬ್‍ಗಳನ್ನು ವಶಪಡಿಸಲಾಗಿತ್ತು. ಈ ಪ್ರಕರಣದಲ್ಲಿ ಎನ್‍ಐಎ ಸ್ವತಃ ಕೇಸು ದಾಖಲಿಸಿ ತನಿಖೆ ಆರಂಭಿಸಿತ್ತು. ಕೋಯಿಕ್ಕೋಡ್ ಹಾಗೂ ಮಲಪ್ಪುರಂನ ಎರಡು ಕೇಂದ್ರಗಳಲ್ಲೂ ಎನ್‍ಐಎ ದಾಳಿ ನಡೆಸಿದೆ.

ದಶಕಗಳ ಹಿಂದೆ ನಡೆದಿತ್ತು ತರಬೇತಿ:

ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಕಟ್ಟತ್ತಡ್ಕ ಪ್ರದೇಶದಲ್ಲಿ ದಶಕಗಳ ಹಿಂದೆ ದೇಹ ಕವಾಯತು ಸೋಗಿನಲ್ಲಿ ಆಯುಧ ತರಬೇತಿ ನಡೆಯುತ್ತಿದ್ದ ಬಗ್ಗೆ ವ್ಯಾಪಕ ದೂರು ಕೇಳಿ ಬಂದಿತ್ತು. ರಾತ್ರಿ ವೇಳೆ ಟೆಂಟ್ ಅಳವಡಿಸಿ ನಡೆಯುತ್ತಿದ್ದ ಇಂತಹ ತರಬೇತಿ ಬಗ್ಗೆ  ಅಂದು ಪೊಲೀಸರು ನಿರ್ಲಕ್ಷ್ಯ ವಹಿಸಿದ್ದರು. ವರ್ಷಗಳ ಹಿಂದೆ ಎಣ್ಮಕಜೆ ಪಂಚಾಯಿತಿ ಗುಣಾಜೆಯ ಮಸೀದಿಯೊಂದರಲ್ಲಿ ಹೆಸರು ಬದಲಾಯಿಸಿ ಇಮಾಂ ಆಗಿ ಕರ್ತವ್ಯ ಸಲ್ಲಿಸುತ್ತಿದ್ದ ವಯನಾಡ್ ವೆಳ್ಳಾಮುಂಡ್ ನಿವಾಸಿಯೊಬ್ಬನನ್ನು ಬೆಂಗಳೂರಿನ ಎನ್‍ಐಎ ಘಟಕ ಬಂಧಿಸಿ ಕರೆದೊಯ್ದಿತ್ತು. ಕಾಶ್ಮೀರದಲ್ಲಿ ಭಯೋತ್ಪಾದಕ ಕೇಂದ್ರದ ಶಸ್ತ್ರಾಭ್ಯಾಸಕ್ಕೆ ಕಣ್ಣೂರು ಪ್ರದೇಶದಿಂದ ಯುವಕರನ್ನು ರಿಕ್ರೂಟ್ ಮಾಡುತ್ತಿದ್ದ ಆರೋಪದಲ್ಲಿ ಈತನನ್ನು ಬಂಧಿಸಲಾಗಿತ್ತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries