HEALTH TIPS

ಏನಿದು ಒಮೆಗಾ ಬ್ಲಾಕ್? ಹವಾಮಾನ ಬದಲಾವಣೆಯಿಂದಾಗುವ ಪರಿಣಾಮಗಳೇನು?

 ಪಶ್ಚಿಮ ಯುರೋಪ್‌ನಲ್ಲಿ ದಾಖಲೆಯ ತಾಪಮಾನಕ್ಕೆ ಕಾರಣವಾಗಿರುವ ತೀವ್ರ ಬಿಸಿಗಾಳಿಯ ಹಿಂದೆ 'ಒಮೆಗಾ ಬ್ಲಾಕ್' ಎಂಬ ಹವಾಮಾನ ವಿದ್ಯಮಾನದ ಪಾತ್ರವಿದೆ. ಈ ಬಿಸಿಗಾಳಿಯಿಂದ ಫ್ರಾನ್ಸ್‌ನಲ್ಲಿ 40ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಸ್ಪೇನ್ ಮತ್ತು ಪೋರ್ಚುಗಲ್‌ನ ಹಲವು ಭಾಗಗಳಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಟಿದೆ. 

ಹಾಗಾದರೆ ಒಮೆಗಾ ಬ್ಲಾಕ್ ಎಂದರೇನು? ಹವಾಮಾನ ಬದಲಾವಣೆ ಇದರ ಮೇಲೆ ಉಂಟುಮಾಡುವ ಪರಿಣಾಮವೇನು? ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ. 


ಏನಿದು ಒಮೆಗಾ ಬ್ಲಾಕ್?

ಗ್ರೀಕ್ ಭಾಷೆಯ 'Ω' ಅಕ್ಷರರಿಂದ 'ಒಮೆಗಾ ಬ್ಲಾಕ್' ಎಂಬ ಹೆಸರು ಬಂದಿದೆ. ಒಮೆಗಾ ಬ್ಲಾಕ್ ವಿದ್ಯಮಾನವು ಹೆಚ್ಚಿನ ಒತ್ತಡದಿಂದ ಕೂಡಿದ ಬೆಚ್ಚಗಿನ ಮತ್ತು ಸ್ಥಿರವಾದ ವಾಯುಭಾರ ಕುಸಿತದಿಂದ ರೂಪುಗೊಳ್ಳುವ ತಣ್ಣಗಿನ ಕಡಿಮೆ ಒತ್ತಡದ ವ್ಯವಸ್ಥೆಗಳ ನಡುವೆ ರೂಪುಗೊಳ್ಳುತ್ತದೆ.

ಸಾಮಾನ್ಯವಾಗಿ ಜೆಟ್ ಸ್ಟ್ರೀಮ್ ಹವಾಮಾನ ಪರಿಸ್ಥಿತಿಯಲ್ಲಿ ಗಾಳಿಯು ಪಶ್ಚಿಮದಿಂದ ಪೂರ್ವಕ್ಕೆ ಬೀಸುತ್ತದೆ. ಆದರೆ, ಒಮೆಗಾ ಬ್ಲಾಕ್ ಸೃಷ್ಟಿಯಾದಾಗ, ವಾಯುವಿನ ದಿಕ್ಕಿಗೆ ಅಡ್ಡಿಯುಂಟಾಗುತ್ತದೆ. ಗಾಳಿಯು ಉತ್ತರದಿಂದ ದಕ್ಷಿಣಕ್ಕೆ ಬಾಗಿದಂತೆ ಬೀಸುವ ಸ್ಥಿತಿ ನಿರ್ಮಾಣವಾಗುತ್ತದೆ. ಇದರಿಂದಾಗಿ, ಹೆಚ್ಚಿನ ಒತ್ತಡ ಸೃಷ್ಟಿಸುವ ಬಿಸಿಗಾಳಿಯು ಒಂದೇ ಪ್ರದೇಶದಲ್ಲಿ ಹಲವು ದಿನಗಳ ವರೆಗೆ ಸ್ಥಗಿತಗೊಳ್ಳುತ್ತದೆ (ಬ್ಲಾಕ್‌). ಇದರಿಂದಾಗಿ, ಬ್ಲಾಕ್‌ನ ಒಂದು ಬದಿಯಲ್ಲಿನಿರಂತರ ಮಳೆ ಹಾಗೂ ಮತ್ತೊಂದು ಕಡೆ ಬಿರು ಬಿಸಿಲಿನ ವಾತಾವವರಣವನ್ನು ಸೃಷ್ಟಿಸುತ್ತದೆ.

ವಾತಾವರಣದ ಮೇಲೆ ಏನೆಲ್ಲ ಪರಿಣಾಮ?

'ಒಮೆಗಾ ಬ್ಲಾಕ್'ನಿಂದ ವಾಯುಮಂಡಲದಲ್ಲಿ ಸೃಷ್ಟಿಯಾಗುವ ಒತ್ತಡವು ಕೇಂದ್ರ ಭಾಗದಲ್ಲಿ ತೀವ್ರ ಶಾಖ ಮತ್ತು ಶುಷ್ಕ ಹವಾಮಾನ ಸೃಷ್ಟಿಸುತ್ತದೆ. ಅಧಿಕ ಒತ್ತಡವಿರುವ ಭಾಗದಲ್ಲಿ, ಮೋಡಗಳ ರಚನೆಯನ್ನು ತಡೆಯುವುದರಿಂದ ಬಿಸಿ ವಾತಾವರಣ, ಭೂ ಮೇಲ್ಮೈನ ತಾಪಮಾನ ನಿರಂತರವಾಗಿ ಏರುತ್ತದೆ. ಇದಕ್ಕೆ ತದ್ವಿರುದ್ಧವಾಗಿ, ಕಡಿಮೆ ಒತ್ತಡದ ಭಾಗದಲ್ಲಿ, ತಣ್ಣನೆಯ ಹಾಗೂ ಮಳೆಯ ವಾತಾವರಣ ಕಂಡುಬರುತ್ತದೆ.

ಬ್ರಿಟನ್‌ನ ಮಗ್ಗಲಿನಲ್ಲೇ 'ಒಮೆಗಾ ಬ್ಲಾಕ್' ವ್ಯವಸ್ಥೆಯ ನಿರ್ಮಾಣವಾಗಿದೆ. ಉತ್ತರ - ಪಶ್ಚಿಮ ಭಾಗದಲ್ಲಿ ತಣ್ಣನೆಯ ವಾತಾವರಣ ಮತ್ತು ದಕ್ಷಿಣ - ಪೂರ್ವ ಪ್ರದೇಶದಲ್ಲಿ ತೀವ್ರ ಶಾಖದ ಪರಿಸ್ಥಿತಿ ಇದೆ. ಇದು ಹಲವು ವಾರಗಳ ವರೆಗೆ ಮುಂದುವರಿಯಬಹುದು ಎಂದು ಯುನೈಟೆಡ್ ಕಿಂಗ್‌ಡಮ್‌ನ ಅಧಿಕೃತ ಹವಾಮಾನ ಸಂಸ್ಥೆ 'ಯುಕೆ ಮೆಟ್ ಆಫೀಸ್' ತಿಳಿಸಿದೆ.

ಹವಾಮಾನ ಬದಲಾವಣೆಯು 'ಒಮೆಗಾ ಬ್ಲಾಕ್‌'ನಂತಹ ಪರಿಸ್ಥಿತಿಯನ್ನು ಹೆಚ್ಚಿಸುತ್ತದೆಯೇ ಎಂಬುದರ ಬಗ್ಗೆ ವೈಜ್ಞಾನಿಕ ವಲಯದಲ್ಲಿ ಈವರೆಗೆ ಒಮ್ಮತ ಮೂಡಿಲ್ಲ. ಆದರೆ, ಹವಾಮಾನ ಬದಲಾವಣೆಯು ಬಿಸಿಗಾಳಿಯ ತೀವ್ರತೆ ಮತ್ತು ಆವರ್ತನವನ್ನು ಹೆಚ್ಚಿಸುತ್ತಿದೆ ಎಂಬುದು ಸಾಬೀತಾಗಿದೆ. ಕೈಗಾರಿಕಾ ಪೂರ್ವ ಕಾಲಘಟ್ಟಕ್ಕೆ ಹೋಲಿಸಿದರೆ, ಕಲ್ಲಿದ್ದಲು, ತೈಲ ಮತ್ತು ಅನಿಲ ದಹನದಿಂದಾಗಿ ಜಾಗತಿಕ ತಾಪಮಾನ ಸರಾಸರಿ ಸುಮಾರು 1.3 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗಿದೆ.

ಬಿಸಿಗಾಳಿ ಪ್ರಮಾಣ ಏರಿಕೆಯಾಗುತ್ತಿದೆ. ಇದರ ಫಲವಾಗಿ ಯುರೋಪ್‌ನಲ್ಲಿ ಎರಡರಿಂದ ಮೂರು ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಿನ ತಾಪಮಾನ ಏರಿಕೆಯ ಅನುಭವವಾಗುತ್ತಿದೆ. ಅಂದರೆ, 'ಒಮೆಗಾ ಬ್ಲಾಕ್‌' ನೈಸರ್ಗಿಕ ವಿದ್ಯಮಾನವೇ ಆದರೂ, ಹವಾಮಾನ ಬದಲಾವಣೆಯು ಅದರ ಪರಿಣಾಮವನ್ನು ಇನ್ನಷ್ಟು ತೀವ್ರಗೊಳಿಸುತ್ತಿದೆ. ಹೀಗಾಗಿ, ಭವಿಷ್ಯದಲ್ಲಿ ಇಂತಹ ಪರಿಸ್ಥಿತಿ ಎದುರಾದಾಗಲೆಲ್ಲ ವಿಪರೀತ ಬಿಸಿಗಾಳಿಯ ಅನುಭವ ಹೆಚ್ಚಲಿದೆ ಎಂದು ಲಂಡನ್‌ನ ಇಂಪೀರಿಯಲ್ ಕಾಲೇಜಿನ ಸಂಶೋಧಕಿ ಕ್ಲೇರ್ ಬಾರ್ನ್ಸ್ ಅಭಿಪ್ರಾಯಪಟ್ಟಿದ್ದಾರೆ. 









Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries