HEALTH TIPS

ಡಿಸಿಸಿಯಿಂದ ಕಾಂಗ್ರೆಸ್ ನೇತಾರ ಕೆ. ವೆಳ್ತಂಬು ಸಂಸ್ಮರಣೆ

 ಕಾಸರಗೋಡು: ಕೆ.ವೆಳ್ತಂಬು ಅವರು ಕಾಸರಗೋಡು ಜಿಲ್ಲೆಯ ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳಿಗೆ ನೇತೃತ್ವ ನೀಡಿದ ನೇತಾರನಾಗಿದ್ದಾರೆ.ತನ್ನ ಜೀವನದ ಕೊನೆಯ ವರೆಗೂ ಕಾಂಗ್ರೆಸ್ ಕಾರ್ಯಕರ್ತರನ್ನು ಒಗ್ಗಟ್ಟಿನಲ್ಲಿರಿಸಿದ ನೇತಾರನೂ ಆಗಿದ್ದಾರೆಂದು  ಡಿಸಿಸಿ ಅಧ್ಯಕ್ಷ ಪಿ.ಕೆ. ಫೈಸಲ್ ತಿಳಿಸಿದ್ದಾರೆ. ಜಿಲ್ಲಾ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಡಿಸಿಸಿ ಕಚೇರಿಯಲ್ಲಿ ನಡೆದ ಕೆ. ವೆಳ್ತಂಬು ಅವರ ಸಂಸ್ಮರಣೆ ಕಾರ್ಯಕ್ರಮದಲ್ಲಿ ಪುಷ್ಪಾರ್ಚನೆ ನಡೆಸಿದ ಬಳಿಕ ಜರಗಿದ ಸಭೆಯಲ್ಲಿ  ಅಧ್ಯಕ್ಷತೆ ವಹಿಸಿ  ಅವರು ಮಾತನಾಡುತ್ತಿದ್ದರು. 


ಜಿಲ್ಲಾ ಕಾಂಗ್ರೆಸ್ ಕಚೇರಿಯಾದ ಜವಾಹರ್ ಭವನ್ ನಿರ್ಮಿಸಿರುವುದು ವೆಳ್ತಂಬು ನೇತೃತ್ವದಲ್ಲಾಗಿದೆಯೆಂದೂ ಅವರು ತಿಳಿಸಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಕೀಂ ಕುನ್ನಿಲ್ ಮುಖ್ಯ ಭಾಷಣ ನಡೆಸಿದರು.

ಡಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಸಿ. ಪ್ರಭಾಕರನ್ ಸ್ವಾಗತಿಸಿದರು.  ಸೇವಾ ದಳ ರಾಜ್ಯ ಅಧ್ಯಕ್ಷ ರಮೇಶನ್ ಕರುವಾಚ್ಚೇರಿ, ನೇತಾರರಾದ ಸೋಮಶೇಖರ ಶೇಣಿ, ಮಾಮುನಿ ವಿಜಯನ್,  ಕೆ.ಪಿ. ಪ್ರಕಾಶನ್, ವಿ.ಆರ್. ವಿದ್ಯಾಸಾಗರ್, ಪಿ.ವಿ. ಸುರೇಶ್, ಕೆ.ವಿ. ಶಶಿಧರನ್, ಕೆ. ಬಲರಾಮನ್ ನಂಬ್ಯಾರ್, ಕೆ. ಖಾಲಿದ್, ಕೆ. ವಾರಿಜಾಕ್ಷನ್, ಕೆ. ಲಕ್ಷ್ಮಣ ಪ್ರಭು, ಎಂ. ರಾಜೀವ್ ನಂಬ್ಯಾರ್,ಕೆ.ವಿ. ಭಕ್ತವತ್ಸಲನ್ ಮಾತನಾಡಿದರು. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries