ಪೆರ್ಲ: ಮಹಿಳೆಯರ ಆರೋಗ್ಯ, ದೈಹಿಕ ಸದೃಢತೆ ಹಾಗೂ ಜೀವನಶೈಲಿ ಸಂಬಂಧಿತ ಕಾಯಿಲೆಗಳ ತಡೆಗಟ್ಟುವ ಉದ್ದೇಶದಿಂದ ಜೂನ್ 14ರಿಂದ 20ರವರೆಗೆ ಪೆರ್ಲ ಶ್ರೀ ಭಾರತಿ ಸದನದಲ್ಲಿ ಉಚಿತ "ಶಕ್ತಿ ಯೋಗ ಶಿಬಿರ" ಆಯೋಜಿಸಲಾಗಿದೆ. ಪ್ರತಿದಿನ ಸಂಜೆ 4.30ರಿಂದ 6.00 ಗಂಟೆಯವರೆಗೆ ಶಿಬಿರ ನಡೆಯಲಿದ್ದು, ಶಿಬಿರದಲ್ಲಿ ಸ್ನಾಯು ಮತ್ತು ಮೂಳೆಗಳ ಬಲವರ್ಧನೆ, ಕೀಲುಗಳ ಆರೋಗ್ಯ, ಸಮತೋಲನ ತರಬೇತಿ, ಮೆನೋಪಾಸ್ ಆರೋಗ್ಯ, ಹಾಗೂ ಆರೋಗ್ಯಕರ ಆಹಾರ ಪದ್ಧತಿ ಕುರಿತು ಮಾರ್ಗದರ್ಶನ ನೀಡಲಾಗುವುದು.ಯೋಗಾಭ್ಯಾಸದ ಜೊತೆಗೆ ಪ್ರತಿದಿನ ಆರೋಗ್ಯ ಜಾ
ಗೃತಿ ಉಪನ್ಯಾಸ ಹಾಗೂ ಪ್ರಾಯೋಗಿಕ ತರಬೇತಿ ನಡೆಯಲಿರುವುದು. ಯೋಗ ತರಬೇತಿ ಅವಧಿಯಲ್ಲಿ ಡಾ. ಪಲ್ಲವಿ ಅವರು ತರಬೇತುದಾರರಾಗಿ ಭಾಗವಹಿಸಿ ಮಾರ್ಗದರ್ಶನ ನೀಡುವರು. ಶಿಬಿರದಲ್ಲಿ ಭಾಗವಹಿಸಲು ಯಾವುದೇ ಶುಲ್ಕ ಇರುವುದಿಲ್ಲ. ಆಸಕ್ತ ಮಹಿಳೆಯರು ಹೆಚ್ಚಿನ ಮಾಹಿತಿಗಾಗಿ ಡಾ. ಸಪ್ನಾ ಜೆ. (ಉಕ್ಕಿನಡ್ಕಾಸ್ ಆಯುರ್ವೇದ) ಮೊ. 9645443993 ಅನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

