HEALTH TIPS

ಜಮ್ಮು-ಕಾಶ್ಮೀರ: ಮೂರು ಶೆಲ್ ಪತ್ತೆ

ಜಮ್ಮು: ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಗಡಿ ನಿಯಂತ್ರಣದ ರೇಖೆಯ ಬಳಿ ಎರಡು ಸ್ಥಳಗಳಲ್ಲಿ ಮೂರು ಶೆಲ್‌ಗಳು ಸೋಮವಾರ ಪತ್ತೆಯಾಗಿವೆ.‌

ಬಾಂಬ್ ನಿಷ್ಕ್ರಿಯ ದಳವು ಮೂರು ಶೆಲ್‌ಗಳನ್ನು ನಿಷ್ಕ್ರಿಯಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎರಡು ಶೆಲ್‌ಗಳು ಝಂಘರ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದ್ದವು.

ಇನ್ನೊಂದು ಶೆಲ್ ಮಕ್ರಿ ಗ್ರಾಮದ ನಿರ್ಜನ ಪ್ರದೇಶದಲ್ಲಿ ಪತ್ತೆಯಾಗಿತ್ತು.

ಪ್ರತ್ಯೇಕ ಪ್ರಕರಣವೊಂದರಲ್ಲಿ, ಸಾಂಬಾ ಜಿಲ್ಲೆಯ ಅಂತರರಾಷ್ಟ್ರೀಯ ಗಡಿಯ ಬಳಿ ಪಾಕಿಸ್ತಾನದ ಅಂತರರಾಷ್ಟ್ರೀಯ ವಿಮಾನಯಾನ ಸಂಸ್ಥೆಯ ಗುರುತು ಇದ್ದ ವಿಮಾನ ಆಕಾರದ ಬಲೂನ್‌ ಸೋಮವಾರ ಪತ್ತೆಯಾಗಿದೆ.

ಬಿಳಿ ಮತ್ತು ಹಸಿರು ಬಣ್ಣದ ವಿಶೇಷ ಬಲೂನ್‌ ಹಾರಾಡುತ್ತಿರುವುದನ್ನು ಗ್ರಾಮಸ್ಥರು ಗಮನಿಸಿದ್ದರು. ಬಳಿಕ ಪೊಲೀಸರು ಅದನ್ನು ಜಪ್ತಿ ಮಾಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries