ಗುವಾಹಟಿ: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಹೊಸದಾಗಿ ಸೇರ್ಪಡೆಗೊಂಡ 12 ಸಚಿವರಿಗೆ ಸೋಮವಾರ ಖಾತೆ ಹಂಚಿಕೆ ಮಾಡಿದ್ದಾರೆ. ಗೃಹ ಮತ್ತು ರಾಜಕೀಯ, ಲೋಕೋಪಯೋಗಿ, ವಿದ್ಯುತ್, ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಬೇರೆ ಯಾವುದೇ ಸಚಿವರಿಗೆ ಹಂಚಿಕೆಯಾಗದ ಖಾತೆಗಳನ್ನು ಮುಖ್ಯಮಂತ್ರಿ ತಮ್ಮ ಬಳಿ ಉಳಿಸಿಕೊಂಡಿದ್ದಾರೆ.
ಹಿರಿಯ ಸಚಿವರಲ್ಲಿ ರಾನೋಜ್ ಪೆಗು ಅವರು ಶಿಕ್ಷಣ ಇಲಾಖೆ ತಮ್ಮಲ್ಲೆ ಉಳಿಸಿಕೊಂಡಿದ್ದಾರೆ. ಅಶೋಕ್ ಸಿಂಘಲ್ ಅವರಿಗೆ ಹಿಂದಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆ ಖಾತೆಯನ್ನು ನೀಡಲಾಗಿದೆ. ಬಿಮಲ್ ಬೋರಾ ಅವರಿಗೆ ಸಾಂಸ್ಕೃತಿಕ ವ್ಯವಹಾರಗಳು-ಕೈಗಾರಿಕೆಗಳು, ವಾಣಿಜ್ಯ ಹಾಗೂ ಸಾರ್ವಜನಿಕ ಉದ್ದಿಮೆಗಳು ಮತ್ತು ಪೂರ್ವ ನೀತಿ ವ್ಯವಹಾರಗಳ ಖಾತೆ ನೀಡಲಾಗಿದೆ.
ಅಲ್ಲದೆ, ತಮ್ಮ ಆಪ್ತ ಜಯಂತ್ ಮಲ್ಲ ಬರುಆ ಅವರಿಗೆ ಹಣಕಾಸು ಖಾತೆಯನ್ನು ಮುಖ್ಯಮಂತ್ರಿ ಹಂಚಿಕೆ ಮಾಡಿದ್ದಾರೆ.

