ಬದಿಯಡ್ಕ: ಬೇಳ ಕುಮಾರಮಂಗಲ ಸನಿಹದ ಕೋಡುಮಾಡು ನಿವಾಸಿ, ಪ್ರಗತಿಪರ ಕೃಷಿಕ ಹಾಗೂ ಸಮಾಜಸೇವಕ ಗಜರಾಜ ಭಟ್ (58)ಅಲ್ಪಕಾಲದ ಅಸೌಖ್ಯದಿಂದ ನಿಧನಹೊಂದಿದರು. ಕೃಷಿ ಕ್ಷೇತ್ರದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ್ದ ಅವರು, ಕುಮಾರಮಂಗಲ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜನಪ್ರಿಯ ವ್ಯಕ್ತಿತ್ವವಾಗಿದ್ದರು. ಅಲ್ಲದೆ ಕುಮಾರಮಂಗಲ, ಕಂಠಪಾಡಿ ಕ್ಷೇತ್ರ ಹಾಗೂ ಕುಂಜಾರು ಶ್ರೀ ಶಕ್ತಿಪುರದ ದೈವಸ್ಥಾನಗಳ ಅಭಿವೃದ್ಧಿ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಗಮನಾರ್ಹ ಕೊಡುಗೆ ನೀಡಿದ್ದರು. ಅವರುಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.


