ಕಾಸರಗೋಡು: ಪ್ರಶ್ನೆಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಭಾನುವಾರ ನಡೆದ ನೀಟ್-ಯು.ಜಿ ಮರು ಪರೀಕ್ಷೆಯಲ್ಲಿ ಜಿಲ್ಲೆಯ 508 ಮಂದಿ ಗೈರಾಗಿದ್ದಾರೆ. ಈ ಹಿಂದೆ ನಡೆದ ನೀಟ್-ಯು.ಜಿ ಪರೀಕ್ಷೆಯಲ್ಲಿ ಜಿಲ್ಲೆಯ ವಿವಿಧ ಪರೀಕ್ಷಾ ಕೇಂದ್ರಗಳಲ್ಲಾಗಿ ಒಟ್ಟು 2223 ಮಂದಿ ಪರೀಕ್ಷೆ ಬರೆದಿದ್ದರೆ, ಮರು ಪರೀಕ್ಷೆಯಲ್ಲಿ 1714 ಮಂದಿ ಮಾತ್ರ ಹಾಜರಾಗಿದ್ದಾರೆ.
ಇದೇ ಸಂದರ್ಭ ಈ ಹಿಂದೆ ನಡೆದ ಪರೀಕ್ಷೆಗೆ ಜಿಲ್ಲೆಯಲ್ಲಿ 2422 ಮಂದಿ ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದರು. ಆದರೆ ಮರು ಪರೀಕ್ಷೆಗೆ 2499 ಮಂದಿ ಹೆಸರು ನೋಂದಾಯಿಸಿದ್ದರೂ, ಮರುಪರೀಕ್ಷೆಗೆ ಹಾಜರಾದವರ ಸಂಖ್ಯೆಯಲ್ಲಿ ಒಟ್ಟಾರೆಯಾಗಿ 785 ಮಂದಿಯ ಕಡಿತ ಉಂಟಾಗಿತ್ತು.
ಕಾಸರಗೋಡು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ, ಚೆರ್ಕಳ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ, ಕುಂಬಳೆ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ, ಮೊಗ್ರಾಲ್ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ, ಬದಿಯಡ್ಕ ನವಜೀವನ ಪ್ರೌಢಶಾಲೆ, ಹೊಸದುರ್ಗ, ತೃಕರಿಪುರ ಮತ್ತು ಪೆರಿಯಾ ಪಾಲಿಟೆಕ್ನಿಕ್ ಕಾಲೇಜು ಸೇರಿದಂತೆ ಜಿಲ್ಲೆಯ ಒಟ್ಟು ಎಂಟು ಕೇಂದ್ರಗಳಲ್ಲಿ ಭಾನುವಾರ ನೀಟ್-ಯು.ಜಿ ಮರುಪರೀಕ್ಷೆ ನಡೆಸಲಾಗಿತ್ತು.
ಪ್ರತಿ ಪರೀಕ್ಷಾ ಕೇಂದ್ರಗಳಲ್ಲೂ ತಲಾ ಒಬ್ಬರು ಅಧ್ಯಾಪಕರನ್ನು ಇನ್ ವಿಜಿಲೇಟರ್‍ಗಳನ್ನಾಗಿ ನೇಮಿಸಲಾಗಿತ್ತು. ಎಲ್ಲಾ ಪರೀಕ್ಷಾ ಕೇಂದ್ರಗಳು, ಅವುಗಳ ಪರಿಸರ ಹಾಗೂ ಅತ್ತ ಸಾಗುತ್ತಿರುವ ಪಕ್ಕದ ರಸ್ತೆಗಳಲ್ಲೂ ಬಿಗಿ ಪೆÇಲೀಸ್ ಭದ್ರತೆ ಏರ್ಪಡಿಸಲಾಗಿತ್ತು. ಪರೀಕ್ಷಾ ಕೇಂದ್ರಗಳತ್ತ ಸಾಗುತ್ತಿರುವ ಎಲ್ಲಾ ವಾಹನಗಳು ಮತ್ತು ಅದರಲ್ಲಿ ಸಂಚರಿಸುತ್ತಿರುವವರನ್ನು ಪೆÇಲೀಸರು ಬಿಗಿ ತಪಾಸಣೆಗೊಳಪಡಿಸಿ ಮುಂದೆ ಬಿಡುತ್ತಿದ್ದರು.
(ಚೆರ್ಕಳ ಸರ್ಕರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನೀಟ್ ಪರೀಕ್ಷೆ ಬರೆದುಹೊರಬರುತ್ತಿರುವ ವಿದ್ಯಾರ್ಥಿಗಳು.)

