HEALTH TIPS

ವಿಜಯಮಾಲಾ ಸರಳಾಯರಿಗೆ ಡಾಕ್ಟರೇಟ್ ಪದವಿ

ಮುಳ್ಳೇರಿಯ: ಕಾಸರಗೋಡು ತಾಲೂಕು ಅಡೂರು ಗ್ರಾಮದ ಕಾಯರ್ತಿಮಾರು ಕೇಶವ ಸರಳಾಯರ ಧರ್ಮಪತ್ನಿ ವಿಜಯಮಾಲಾ ಸರಳಾಯ ಇವರು ಕರ್ನಾಟಕ ಶಾಸ್ತ್ರೀಯ ಸಂಗೀತದ ವಿಭಾಗದಲ್ಲಿ '20ನೇ ಶತಮಾನದ ಆದಿಯಲ್ಲಿನ ಅಜ್ಞಾತವಾಗಿಯೇ ಉಳಿದ ಮೈಸೂರಿನ ಕರ್ನಾಟಕ ಸಂಗೀತದ ವಾಗ್ಗೇಯಕಾರರು- ಒಂದು ಸಮಗ್ರ ಅಧ್ಯಯನ' ಎಂಬ ವಿಷಯದಲ್ಲಿ ಡಾ. ಮೀರಾ ರಾಜಾರಾಂ ಪ್ರಾಣೇಶ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆಯನ್ನು ಕೈಗೊಂಡು ರಚಿಸಿ ಸಲ್ಲಿಸಿದ ಮಹಾಪ್ರಬಂಧಕ್ಕೆ ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿಯನ್ನು ನೀಡಿದೆ.  


ಇವರು ಮೈಸೂರಿನ ಹಿರಿಯ ಸಂಗೀತ ವಿದುಷಿ ಡಾ. ಸುಕನ್ಯಾ ಪ್ರಭಾಕರ್ ಅವರ ಶಿಷ್ಯೆಯಾಗಿದ್ದು, ಶಾಸ್ತ್ರೀಯ ಸಂಗೀತದ ಜೊತೆಗೆ ಸಾಹಿತ್ಯ, ಯೋಗ ಮತ್ತು ಚಿತ್ರಕಲೆಯಲ್ಲೂ ಪರಿಶ್ರಮವನ್ನು ಹೊಂದಿರುವ ಇವರ ಅನೇಕ ಸಂಶೋಧನಾ ಬರಹಗಳು, ಸಂಗೀತಾತ್ಮಕ ಲೇಖನಗಳು ಸಂಶೋಧನಾ ಜರ್ನಲ್ ಹಾಗೂ ಹಲವು ನಿಯತಕಾಲಿಕೆಗಳಲ್ಲಿ ಪ್ರಕಟವಾಗಿರುತ್ತವೆ.

ವಿಜಯಮಾಲಾ ಅವರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ., ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾಲಯದಿಂದ ಚಿನ್ನದ ಪದಕಗಳ ಸಹಿತ ಕರ್ನಾಟಕ ಸಂಗೀತದಲ್ಲಿ ಎಂ. ಮ್ಯೂಸಿಕ್, ಜೈನ್ ವಿಶ್ವವಿದ್ಯಾಲಯದಿಂದ ಎಂ.ಫಿಲ್  ಹಾಗೂ ಸಂಸ್ಕøತ ವಿಶ್ವ ವಿದ್ಯಾಲಯದ ಯೋಗ ಪಿ.ಜಿ. ಡಿಪ್ಲೊಮಾ ಪದವಿಗಳನ್ನೂ ಪಡೆದಿರುತ್ತಾರೆ. 

ವಿಜಯಮಾಲಾ ಅವರು, ಕೊಕ್ಕಡ ಕೆ. ವಿ. ಆನಂದ ಯಡಪಡಿತ್ತಾಯ ಮತ್ತು ವನಜಾಕ್ಷಿ ದಂಪತಿಗಳ ಪುತ್ರಿ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries