HEALTH TIPS

ಎಲ್ಲಾ ರೈತರಿಗೆ ಉಚಿತ ವಿದ್ಯುತ್ ನೀಡಲು ಕಲ್ಲಗ ಚಂದ್ರಶೇಖರ ರಾವ್ ಸಚಿವರಿಗೆ ಮನವಿ

ಮುಳ್ಳೇರಿಯ: ಕೇರಳದಲ್ಲಿ ಕೃಷಿ ನೀರಾವರಿ ಉದ್ದೇಶಗಳಿಗಾಗಿ ನೀಡಲಾಗುತ್ತಿರುವ ಉಚಿತ ವಿದ್ಯುತ್ ಸೌಲಭ್ಯವನ್ನು ಇನ್ನಷ್ಟು ವಿಸ್ತರಿಸುವಂತೆ ಆಗ್ರಹಿಸಿ ವಿದ್ಯುತ್ ಇಲಾಖೆ ಸಚಿವ ಸನ್ನಿ ಜೋಸೆಫ್‍ರಿಗೆ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕಲ್ಲಗ ಚಂದ್ರಶೇಖರ್ ರಾವ್ ಮನವಿ ಸಲ್ಲಿಸಿದ್ದಾರೆ.


ಜಿಲ್ಲೆಯ ಅಡಕೆ ಬೆಳೆಗಾರರ ಸಂಕಷ್ಟಗಳನ್ನು ವಿವರಿಸಿ ಈ ಮನವಿ ಸಲ್ಲಿಸಲಾಗಿದೆ. ಈಗ ಕೇರಳದಲ್ಲಿ 5 ಹೆಕ್ಟೇರ್ ಕೃಷಿ ಭೂಮಿ ಹೊಂದಿರುವ ರೈತರಿಗೆ ಮಾತ್ರವೇ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಇದನ್ನು ಹೆಚ್ಚು ಭೂಮಿ ಹೊಂದಿರುವ ಹಿಡುವಳಿಧಾರರಿಗೂ ವಿಸ್ತರಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಕರ್ನಾಟಕದಲ್ಲಿ ರೈತರ ಕೃಷಿ ಚಟುವಟಿಕೆಗಳಿಗೆ ಈಗಾಗಲೇ ಸಂಪೂರ್ಣ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಈ ಮಾದರಿಯನ್ನು ಕೇರಳದಲ್ಲಿ ಜ್ಯಾರಿಗೊಳಿ ಸಬೇಕೆಂದು ಅವರು ಆಗ್ರಹಿಸಿದ್ದಾರೆ. ಅಲ್ಲದೆ ರೈತರ ವಿದ್ಯುತ್ ಶುಲ್ಕವನ್ನು ಕೃಷಿ ಭವನಗಳು ಪಾವತಿಸಬೇಕಾಗಿದ್ದು, ಆದರೆ ರಾಜ್ಯ ವಿದ್ಯುತ್ ಮಂಡಳಿ ರೈತರಿಗೆ ನೇರವಾಗಿ ನೋಟೀಸ್ ನೀಡುತ್ತಿದ್ದು, ಇದನ್ನು ತಕ್ಷಣ ನಿಲ್ಲಿಸಬೇಕೆಂದು ಅವರು ಮನವಿಯಲ್ಲಿ ಆಗ್ರಹಿಸಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries