HEALTH TIPS

ಮಂಜೇಶ್ವರದಲ್ಲಿ ಗಂಟೆಗಳ ಮಧ್ಯೆ ಎರಡು ಘಟನೆಗಳು: ರೈಲು ಢಿಕ್ಕಿ ಹೊಡೆದು ಇಬ್ಬರು ಯುವಕರು ದಾರುಣ ಮೃತ್ಯು

 ಮಂಜೇಶ್ವರ: ಮಂಜೇಶ್ವರದಲ್ಲಿ ಮೊನ್ನೆ ಗಂಟೆಗಳೊಳಗೆ ಇಬ್ಬರು ಯುವಕರು ರೈಲು ಢಿಕ್ಕಿ ಹೊಡೆದು ಮೃತಪಟ್ಟ ಘಟನೆ ಸಂಭವಿಸಿದೆ.

ಹೊಸಬೆಟ್ಟು ಸ್ಫೂರ್ತಿನಗರದ ಬಾಡಿಗೆ ಮನೆಯಲ್ಲಿ ವಾಸಿಸುವ ಉಮೇಶ (40) ಹಾಗೂ ಮಂಜೇಶ್ವರ ಕೀರ್ತೇಶ್ವರ ದೇವಸ್ಥಾನ ಬಳಿಯ ಮನೀಶ್ (18) ಎಂಬಿವರು ಮೃತಪಟ್ಟ ದುರ್ದೈವಿಗಳಾಗಿದ್ದಾರೆ.


ಉಮೇಶ್ ಮೊನ್ನೆ ಸಂಜೆ ೫ ಗಂಟೆಗೆ ರೈಲು ಢಿಕ್ಕಿ ಹೊಡೆದು ಮೃತಪಟ್ಟಿ ದ್ದಾರೆ. ಮಂಜೇಶ್ವರ ರೈಲು ನಿಲ್ದಾಣ ಬಳಿಯ ಹಳಿಯಲ್ಲಿ ಇವರ ಮೃತದೇಹ ಪತ್ತೆಯಾಗಿದೆ. ಅನಂತರ ರಾತ್ರಿ 9.45ರ ವೇಳೆ ಇದೇ ಸ್ಥಳದ ಬೇರೊಂದು ಹಳಿಯಲ್ಲಿ ಮನೀಶ್‌ರ ಮೃತದೇಹ ಪತ್ತೆಯಾಗಿದೆ. 

ಉಮೇಶ್ ಕೂಲಿ ಕಾರ್ಮಿಕನಾ ಗಿದ್ದಾರೆ. ನಿನ್ನೆ ಸಂಜೆ 5 ಗಂಟೆಗೆ ರೈಲು ಹಳಿ ದಾಟುತ್ತಿದ್ದಾಗ ಕಾಸರಗೋಡು ಭಾಗದಿಂದ ಮಂಗಳೂರಿನತ್ತ ತೆರಳುತ್ತಿದ್ದ ಗೂಡ್ಸ್ ರೈಲು  ಢಿಕ್ಕಿ ಹೊಡೆದಿರುವುದಾಗಿ ತಿಳಿದುಬಂದಿದೆ.  ಮಂಜೇಶ್ವರ  ಪೊಲೀಸರು ಸ್ಥಳಕ್ಕೆ ತಲುಪಿ ಪಂಚನಾಮೆ ನಡೆಸಿದ ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಗಲ್ಪಾಡಿ ತಾಲೂಕು ಆಸ್ಪತ್ರೆಗೆ ತಲುಪಿಸಲಾಗಿದ.

ಮೂಲತಃ ಮೊಗ್ರಾಲ್ ಪುತ್ತೂರು ಕೋಟೆಕುನ್ನು ನಿವಾಸಿ ದಿವಂಗತರಾದ  ಕೋಮಾರು ಹಾಗೂ ಲಕ್ಷ್ಮಿ ದಂಪತಿಯ ಪುತ್ರನಾದ ಉಮೇಶ ಕಳೆದ ಐದು ವರ್ಷಗಳಿಂದ ಹೊಸಬೆಟ್ಟು ಸ್ಫೂರ್ತಿನಗರದ ಬಾಡಿಗೆ  ಮನೆಯಲ್ಲಿ ವಾಸಿಸುತ್ತಿದ್ದರು. ಮೃತರು ಪತ್ನಿ ತಾರ, ಸಹೋದರ-ಸಹೋರಿಯರಾದ ಶಶಿಧರ,ಅನಿಲ್ ಕುಮಾರ,ಇಂದಿರ, ಗೀತ, ಜಯಶ್ರೀ,ಸುಜಾತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಇನ್ನೊಂದು ಘಟನೆಯಲ್ಲಿ  ಮೃತಪಟ್ಟ ಮನೀಶ್ ಮಂಜೇಶ್ವರ ಕೀರ್ತೇಶರ ದೇವಸ್ಥಾನ ಬಳಿಯ ಬಾಡಿಗೆ ಮನೆಯಲ್ಲಿ ವಾಸಿಸುವ ದಾಮೋದರ- ಲೀಲಾವತಿ ದಂಪತಿಯ ಏಕೈಕ ಪುತ್ರನಾಗಿದ್ದಾರೆ.

ಪಿಯುಸಿ ಶಿಕ್ಷಣ ಪೂರ್ತಿಗೊಳಿ ಸಿದ ಬಳಿಕ  ಮನೀಶ್ ಫ್ಯಾಬ್ರಿಕೇಶನ್ ಕೆಲಸ ನಿರ್ವಹಿಸುತ್ತಿದ್ದರು. ನಿನ್ನೆ ಕುಂಬಳೆ ಭಾಗದಲ್ಲಿ ಕೆಲಸಕ್ಕೆಂದು ತಿಳಿಸಿ ಮನೆಯಿಂದ ತೆರಳಿದ್ದರೆನ್ನಲಾಗಿದೆ. ಕೆಲಸ ಮುಗಿಸಿ ರಾತ್ರಿ ಮನೆಗೆ ಮರಳುತ್ತಿದ್ದಾಗ ಮಂಗಳೂರಿನಿಂದ ಕಣ್ಣೂರು ಭಾಗಕ್ಕೆ ತೆರಳುತ್ತಿದ್ದ ಗೂಡ್ಸ್ ರೈಲು ಢಿಕ್ಕಿ ಹೊಡೆದು ಸಾವು ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ. ರಾತ್ರಿ 9.45ಕ್ಕೆ ಮೃತದೇಹ ಪತ್ತೆಯಾಗಿತ್ತು. ವಿಷಯ ತಿಳಿದು ತಲುಪಿದ ಮಂಜೇಶ್ವರ ಪೊಲೀಸರು ಮೃತದೇಹದ ಪಂಚನಾಮೆ ನಡೆಸಿದ್ದು ಬಳಿಕ  ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿದೆ.

ಈಎರಡೂ ಘಟನೆಗಳ ಬಗ್ಗೆ ಮಂಜೇಶ್ವರ ಪೊಲೀಸರು ಕೇಸು ದಾಖಲಿ ಸಿಕೊಂಡಿದ್ದಾರೆ. ನಾಡಿನಲ್ಲಿ ಚಿರಪರಿಚಿತ ರಾದ ಉಮೇಶ ಹಾಗೂ ಮನೀಶ್‌ರ ಅಕಾಲಿಕ ಅUಲುವಿಕೆಯಿಂದ ನಾಡಿನಲ್ಲಿ ಶೋಕಸಾಗರ ಸೃಷ್ಟಿಸಿದೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries