ಕಾಸರಗೋಡು: ಬಿಲ್ಲವ ಸಮಾಜದ ವಿರುದ್ಧ ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವಿದ್ವೇಷ ಕಾರುತ್ತಾ ಅಸಭ್ಯ ಭಾಷೆಗಳಿಂದ ನಿಂದಿಸುತ್ತ ಬರುತ್ತಿರುವ ಅನಿತಾ ಕಾಸರಗೋಡು ಎಂಬ ಮಹಿಳೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಿಲ್ಲವ ಮುಖಂಡರು ಕಾಸರಗೋಡು ನಗರ ಆರಕ್ಷಕ ಠಾಣೆಯ ವಲಯ ನಿರೀಕ್ಷಕರಿಗೆ ದೂರು ಸಲ್ಲಿಸಿದರು.
ಬಿಲ್ಲವ ಸೇವಾ ಸಂಘ (ರಿ ) ಕಾಸರಗೋಡು ಘಟಕ ಅಧ್ಯಕ್ಷ ರಘು ಕೆ ಮೀಪುಗುರಿ, ಕಾರ್ಯದರ್ಶಿ ಹರಿಕಾಂತ ಕಾಸರಗೋಡು, ಗೌರವಾಧ್ಯಕ್ಷ ಎ ಕೇಶವ, ನಗರ ಸಭಾ ಸದಸ್ಯರೂ ಸಂಘದ ಉಪಾಧ್ಯಕ್ಷರಾದ ಹರೀಶ್ ಕೆ ಆರ್, ರವೀಂದ್ರ ಪೂಜಾರಿ ಇವರ ನೇತೃತ್ವದಲ್ಲಿ ಠಾಣೆಗೆ ತೆರಳಿ ದೂರು ನೀಡಲಾಯಿತು. ಸದಸ್ಯರಾದ ಮೈಂದಪ್ಪ, ಸಂತೋಷ್, ಮಹೇಶ್ ಹಾಗೂ ಬಂಟ ಸಮುದಾಯದ ಪ್ರತಿನಿಧಿ ವಿಶ್ವನಾಥ ಶೆಟ್ಟಿ ವಿವೇಕಾನಂದನಗರ ಜೊತೆಗಿದ್ದರು.



