ಪೆರ್ಲ: ಕ್ಯಾಂಪ್ಕೋ ಕೇಂದ್ರ ಕಚೇರಿ ಮಂಗಳೂರಿನ ಪ್ರಾದೇಶಿಕ ಕಚೇರಿ ಬದಿಯಡ್ಕದ ಪೆರ್ಲ ಶಾಖೆ(ಬದಿಯಡ್ಕ-ನೀರ್ಚಾಲು ಶಾಖೆ ಸೇರಿದಂತೆ)ಸದಸ್ಯ ಬೆಳೆಗಾರರ ಸಭೆ ಜೂ. 13ರಂದು ಬೆಳಗ್ಗೆ 10.30ಕ್ಕೆ ಪೆರ್ಲ ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರೀ (ಉಳ್ಳಾಲ್ತಿ)ವಿಷ್ಣುಮೂರ್ತಿ ದೇವಸ್ಥಾನದ ಸಭಾಂಗಣದಲ್ಲಿ ಜರುಗಲಿದೆ.
ನಾಡಿನ ಹಿರಿಯ ರೈತ ಸದಸ್ಯರಿಂದ ಉದ್ಘಾಟನೆ ನಡೆಯುವುದು. ಮಂಗಳೂರು ಕ್ಯಾಂಪೆÇ್ಕ ಅಧ್ಯಕ್ಷ ಎಸ್.ಆರ್ ಸತೀಶ್ಚಂದ್ರ ಅಧ್ಯಕ್ಷತೆ ವಹಿಸುವರು. ಕ್ಯಾಂಪ್ಕೋ ಉಪಾಧ್ಯಕ್ಷ ಪದ್ಮರಾಜ ಪಟ್ಟಾಜೆ, ವ್ಯವಸ್ಥಾಪಕ ನಿರ್ದೇಶಕ ಡಾ. ಬಿ.ವಿ ಸತ್ಯನಾರಾಯಣ, ನಿರ್ದೇಶಕ ವೆಂಕಟ್ರಮಣ ಭಟ್ ವೈ ಉಪಸ್ಥಿತರಿರುವರು. ಬೆಳಗ್ಗೆ10.30ಕ್ಕೆ ನೋಂದಾವಣೆ, ಸಂವಾದ, ಅಧ್ಯಕ್ಷರ ಭಾಷಣ ಮೊದಲಾದ ಕಾರ್ಯಕ್ರಮ ನಡೆಯಲಿರುವುದು.

