HEALTH TIPS

ಹೊಸದುರ್ಗದಿಂದ ಸೆರೆಯಾದ ಬಾಂಗ್ಲಾ ಯುವತಿಯ ಕುಟುಂಬ ಸದಸ್ಯರ ಪತ್ತೆಗೆ ವ್ಯಾಪಕ ಶೋಧ

 ಕಾಸರಗೋಡು: ಬಾಂಗ್ಲಾದೇಶ ದಿಂದ ಅನಧಿಕೃತವಾಗಿ ಕೇರಳಕ್ಕೆ  ಅಕ್ರಮವಾಗಿ ಬಂದು ವಾಸಿಸುತ್ತಿದ್ದ ಯುವತಿಯನ್ನು ಹೊಸದುರ್ಗದಿಂದ ಪೊಲೀಸರು ಬಂಧಿಸಿರುವ ಬೆನ್ನಲ್ಲೇ ಆಕೆಯಜತೆಗೆ ಇಲ್ಲಿಗೆ ಬಂದಿರುವ ಕುಟುಂಬದವರ ಪತ್ತೆಗಾಗಿ ಪೊಲೀ ಸರು ವ್ಯಾಪಕ ಶೋಧ ಆರಂಭಿಸಿದ್ದಾರೆ.  ಬಾಂಗ್ಲಾ ಪ್ರಜೆಯಾಗಿರುವ ಸೆಲ್ಮಾ ಕೌತೂಲಿಯಾ(31) ಎಂಬಾಕೆಯ ನ್ನು ನಿನ್ನೆ ಹೊಸದುರ್ಗ ರೈಲು ನಿಲ್ದಾಣದಿಂದ ಪೊಲೀಸರು ಬಂಧಿಸಿ ದ್ದರು. ಈಕೆ ಮಲಪ್ಪುರಂನಿಂದ ಮಲಬಾರ್ ಎಕ್ಸ್‌ಪ್ರೆಸ್ ರೈಲು ಗಾಡಿಯಲ್ಲಿ ನಿನ್ನೆ ಬೆಳಿಗ್ಗೆ ಹೊಸದುರ್ಗ ರೈಲು ನಿಲ್ದಾಣದಲ್ಲಿ ಬಂದಿಳಿಯತ್ತಿರು ವಂತೆಯೇ  ಶಂಕೆಗೊಂಡ ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದಾಗ ಆಕೆ ಬಾಂಗ್ಲಾದೇಶದ ಪ್ರಜೆಯಾಗಿರು ವುದಾಗಿ  ಸ್ಪಷ್ಟಗೊಂಡಿದೆ. ಆಕೆಯ ಕೈಯಲ್ಲಿ ಭಾರತೀಯ ಪಾನ್‌ಕಾರ್ಡ್  ಪತ್ತೆಹಚ್ಚಿದ್ದು ಅದನ್ನೂ ವಶಕ್ಕೆ ತೆಗೆದುಕೊಂಡಿದ್ದಾರೆ. ಬಂಧಿತಳಾದ ಆಕೆಯನ್ನು ಪೊಲೀಸರು ಹೊಸದುರ್ಗ  ನ್ಯಾಯಾಲಯದಲ್ಲಿ ಹಾಜರುಪಡಿಸಿದ ನಂತರ ನ್ಯಾಯಾಲಯದ ಆದೇಶ ಪ್ರಕಾರ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.

ಬಂಧಿತ ಸಲ್ಮಾ ಎರಡು ವರ್ಷಗಳ ಹಿಂದೆ ಬಾಂಗ್ಲಾದೇಶದಿಂದ ಅನಧಿಕೃತವಾಗಿ ಕೇರಳಕ್ಕೆ ಬಂದು ಮಲಪ್ಪುರದ ಹೋಟೆಲೊಂದರಲ್ಲಿ ದುಡಿಯುತ್ತಿದ್ದಳು. ಅಲ್ಲಿ ಪರಿಚ ಯಗೊಂಡ ಯುವಕನೋರ್ವನನ್ನು ಕಾಣಲೆಂದು ಆಕೆ ರೈಲಿನಲ್ಲಿ ನಿನ್ನೆ ಹೊಸದುರ್ಗ ರೈಲು ನಿಲ್ದಾಣದಲ್ಲಿ    ಬಂದಿಳಿದ ವೇಳೆ ಪೊಲೀಸರಿಗ ಸಿಕ್ಕಿಬಿದ್ದಳು. ಈಕೆಯ ಜತೆಗೆ ಕುಟುಂಬದವರು ಕೇರಳಕ್ಕೆ ಬಂದಿರುವುದಾಗಿ ಪೊಲೀಸರು ನಡೆಸಿದ ತನಿಖೆಯಲ್ಲಿ ಸ್ಪಷ್ಟಗೊಂಡಿದ್ದು, ಅದರಿಂದ ಅವರ ಪತ್ತೆಗಾಗಿ ತೀವ್ರ ಶೋಧ ಆರಂಭಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries