ಮೂವರ ವಯಸ್ಸು ಸೇರಿಸಿದರೆ ಬರೋಬ್ಬರಿ 316 ವರ್ಷ. ವಯಸ್ಸಿನ ಮಿತಿಯನ್ನೂ ಮೀರಿ, ನಗುನಗುತ್ತಾ ನೂರರ ಗಡಿ ದಾಟಿರುವ ಈ ಸಹೋದರಿಯರು ಇತ್ತೀಚೆಗೆ ಗಿನ್ನೆಸ್ ದಾಖಲೆ ಬರೆಯುವ ಮೂಲಕ ಜಗತ್ತಿನ ಗಮನ ಸೆಳೆದಿದ್ದಾರೆ. ಇವರ ದೀರ್ಘಾಯುಷ್ಯದ ರೋಚಕ ಕಥೆ ಇಲ್ಲಿದೆ...
ಸದ್ಯ ಈ ಮೂವರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಗುಟ್ಟು ಕಂಡುಹಿಡಿಯಲು ವಿಜ್ಞಾನಿಗಳು ಡಿಎನ್ಎ ಸಂಶೋಧನೆ ನಡೆಸುತ್ತಿದ್ದಾರೆ ಎಂದು ರಾಯಿಟರ್ಸ್ ವರದಿ ತಿಳಿಸಿದೆ.
ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ
ಶತಾಯುಷಿಗಳಾದ ಮೂವರು ಸಹೋದರಿಯರ ಡಿಎನ್ಎ ಸಂಶೋಧನೆಗೆ ಮುಂದಾದ ವಿಜ್ಞಾನಿಗಳು!
ಒಂದು ಸಾಲಿನಲ್ಲಿಬ್ರೆಜಿಲ್ನ ಮೂವರು ಸಹೋದರಿಯರು 100 ವರ್ಷಗಳ ಸುದೀರ್ಘ ಆಯುಷ್ಯವನ್ನು ಹೊಂದಿದ್ದು, ಅವರ ದೀರ್ಘಾಯುಷ್ಯದ ರಹಸ್ಯವನ್ನು ಪತ್ತೆಹಚ್ಚಲು ವಿಜ್ಞಾನಿಗಳು ಡಿಎನ್ಎ ಸಂಶೋಧನೆಯನ್ನು ನಡೆಸುತ್ತಿದ್ದಾರೆ.
ಪ್ರಮುಖ ಪ್ರಶ್ನೋತ್ತರ
ಈ ಮೂವರು ಸಹೋದರಿಯರು ಯಾರು ಮತ್ತು ಎಷ್ಟು ವಯಸ್ಸಾಗಿದೆ?
ರಿಯೊ ಡಿ ಜನೈರೋದಲ್ಲಿರುವ ಲೆವಿತಾ (109), ಜೊರೈಡೆ (104) ಮತ್ತು ಜುಲಿನಾ (103) ಎಂಬ ಮೂವರು ಸಹೋದರಿಯರ ಒಟ್ಟು ವಯಸ್ಸು 316 ವರ್ಷಗಳಾಗಿದ್ದು, ಇವರು ಇತ್ತೀಚೆಗೆ ಗಿನ್ನೆಸ್ ದಾಖಲೆ ಬರೆದಿದ್ದಾರೆ.
ವಿಜ್ಞಾನಿಗಳು ಏಕೆ ಡಿಎನ್ಎ ಅಧ್ಯಯನ ನಡೆಸುತ್ತಿದ್ದಾರೆ?
ಹೃದಯ, ಸ್ನಾಯು ಮತ್ತು ಮೆದುಳಿನ ಆರೋಗ್ಯವನ್ನು ಕಾಪಾಡುವ ರಕ್ಷಣಾತ್ಮಕ ಜೀನ್ಗಳನ್ನು ಗುರುತಿಸಿ, ವಯಸ್ಸಾಗುವಿಕೆಯನ್ನು ತಡೆಯುವ ವಿಧಾನಗಳನ್ನು ಕಂಡುಹಿಡಿಯುವುದು ಈ ಸಂಶೋಧನೆಯ ಮುಖ್ಯ ಉದ್ದೇಶವಾಗಿದೆ.
ಈ ಸಹೋದರಿಯರ ದೀರ್ಘಾಯುಷ್ಯಕ್ಕೆ ಕಾರಣವೇನು?
ಆನುವಂಶಿಕ ಗುಣಗಳಷ್ಟೇ ಅಲ್ಲದೆ, ಬಾಲ್ಯದಿಂದಲೂ ಸೇವಿಸಿದ ರಾಸಾಯನಿಕ ರಹಿತ ಆಹಾರ ಮತ್ತು ನಿಸರ್ಗದೊಂದಿಗೆ ಬೆರೆತ ಜೀವನಶೈಲಿಯೇ ತಮ್ಮ ಆರೋಗ್ಯದ ಗುಟ್ಟು ಎಂದು ಸಹೋದರಿಯರು ಅಭಿಪ್ರಾಯಪಡುತ್ತಾರೆ.
ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ?
ಈ ಮೂವರು ಸಹೋದರಿಯರು ಪರಸ್ಪರ ಹತ್ತಿರದ ಪ್ರದೇಶದಲ್ಲಿ ವಾಸಿಸುತ್ತಿರುವುದರಿಂದ ಅವರಿಗೆ ಏಕಾಂಗಿತನ ಕಾಡುವುದಿಲ್ಲ, ಇದು ಅವರ ಉತ್ತಮ ಮಾನಸಿಕ ಆರೋಗ್ಯಕ್ಕೆ ಕಾರಣವಾಗಿದೆ.
ಸಂಶೋಧನೆಯ ಮುಂದಿನ ಗುರಿ ಏನು?
ಸಾವೊ ಪಾಲೊ ವಿಶ್ವವಿದ್ಯಾಲಯದ ವಿಜ್ಞಾನಿಗಳು ಈ ಯೋಜನೆಯಡಿ ಒಟ್ಟು 500 ಶತಾಯುಷಿಗಳನ್ನು ಅಧ್ಯಯನ ಮಾಡುವುದರ ಮೂಲಕ ವಯಸ್ಸಾಗುವಿಕೆಗೆ ಸಂಬಂಧಿಸಿದ ಅಂಶಗಳನ್ನು ವಿಶ್ಲೇಷಿಸಲು ನಿರ್ಧರಿಸಿದ್ದಾರೆ.
ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ
ಯಾರು ಆ ಸಹೋದರಿಯರು?
ಈ ಸಹೋದರಿಯರು ರಿಯೊ ಡಿ ಜನೈರೋದಲ್ಲಿ ವಾಸಿಸುತ್ತಿದ್ದಾರೆ. ದೀರ್ಘಾಯುಷ್ಯದ ದಾಖಲೆಗಳನ್ನು ಪರಿಶೀಲಿಸುವ ಜಾಗತಿಕ ಸಂಸ್ಥೆಯಾದ ಲಾಂಜೆವಿಕುಯೆಸ್ಟ್ ಇವರ ವಯಸ್ಸನ್ನು ಖಚಿತಪಡಿಸಿದ ನಂತರ ಗಿನ್ನೆಸ್ ದಾಖಲೆ ನೀಡಲಾಗಿದೆ.
ಮೊದಲನೆಯವರ ಹೆಸರು ಲೆವಿತಾ ಡಿ ಡ್ಯೂಸ್ ನೂನ್ಸ್ ಇವರಿಗೆ 109 ವರ್ಷ. ಇವರು ಈ ಹಿಂದೆ ಕರಕುಶಲ ಕಲಾವಿದೆಯಾಗಿ ಮತ್ತು ಟವಿಗಳಲ್ಲಿ ಕೆಲಸ ಮಾಡಿದ್ದರು. ಎರಡನೇಯವರು ಜೊರೈಡೆ ಡಿ ಡ್ಯೂಸ್ ಮೋಟಾ ಇವರ ವಯಸ್ಸು 104 ಇವರು ನರ್ಸ್ ಆಗಿ ಕೆಲಸ ಮಾಡಿದ್ದು, ಐವರು ಮಕ್ಕಳಿದ್ದಾರೆ. ಇಂದಿಗೂ ಎಂಬ್ರಾಯ್ಡರಿ ಕೆಲಸ ಮಾಡುತ್ತಾರೆ. ಮೂರನೆಯವರು ಜುಲಿನಾ ಡಿ ಡ್ಯೂಸ್ ನೂನ್ಸ್ ಇವರಿಗೆ ಈಗ 103 ವರ್ಷ. ಇವರು ಗೃಹಿಣಿಯಾಗಿದ್ದು, 6 ಮಕ್ಕಳಿದ್ದಾರೆ.
ಡಿಎನ್ಎ ಅಧ್ಯಯನಕ್ಕೆ ಮುಂದಾದ ವಿಜ್ಞಾನಿಗಳು
ಸಾವೊ ಪಾಲೊ ವಿಶ್ವವಿದ್ಯಾಲಯದ ಹ್ಯೂಮನ್ ಜಿನೋಮ್ ರಿಸರ್ಚ್ ಸೆಂಟರ್ನ ಪ್ರಸಿದ್ಧ ವಿಜ್ಞಾನಿ ಮಯಾನಾ ಝಾಟ್ಜ್ ಎನ್ನುವವರ ನೇತೃತ್ವದಲ್ಲಿ ಡಿಎನ್ಎ ಅಧ್ಯಯನ ನಡೆಸಲಾಗುತ್ತಿದೆ. 'ಡಿಎನ್ಎ ಲಾಂಗೆವೊ ಪ್ರಾಜೆಕ್ಟ್' ಎನ್ನುವುದು ಈ ಅಧ್ಯಯನದ ಹೆಸರು. ಇದರ ಭಾಗವಾಗಿ ಸಹೋದರಿಯರ ರಕ್ತ ಮತ್ತು ಲಾಲಾರಸದ ಮಾದರಿಗಳನ್ನು ಸಂಗ್ರಹಿಸಲಾಗಿದೆ.
ಒಂದೇ ಕುಟುಂಬದ ಮೂವರು ಸಹೋದರಿಯರು 100 ವರ್ಷಕ್ಕೂ ಹೆಚ್ಚು ಕಾಲ ಬದುಕಲು ಕೇವಲ ಜೀವನಶೈಲಿ ಮಾತ್ರವಲ್ಲ, ಅವರಲ್ಲಿರುವ ಪ್ರಬಲವಾದ ಆನುವಂಶಿಕ ಗುಣವೂ ಕಾರಣ ಎನ್ನುವುದು ವಿಜ್ಞಾನಿಗಳ ಅಭಿಮತ. ವಯಸ್ಸಾಗುವಿಕೆಯಿಂದ ಹೃದಯ, ಸ್ನಾಯು ಮತ್ತು ಮೆದುಳಿಗೆ ಹಾನಿಯಾಗದಂತೆ ತಡೆಯುವ ರಕ್ಷಣಾತ್ಮಕ ಜೀನ್ಗಳನ್ನು ಪತ್ತೆ ಹಚ್ಚುವುದು ಈ ಸಂಶೋಧನೆಯ ಮುಖ್ಯ ಗುರಿಯಾಗಿದೆ.
ಈ ಸಹೋದರಿಯರ ಡಿಎನ್ಎಯನ್ನು ಬೇಗನೆ ವಯಸ್ಸಾದಂತೆ ಕಾಣುವ ಅಥವಾ ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವ ಜನರ ಡಿಎನ್ಎ ಜೊತೆ ಹೋಲಿಕೆ ಮಾಡಿ ವಯಸ್ಸಾಗುವಿಕೆಯನ್ನು ತಡೆಯುವ ಅಂಶಗಳನ್ನು ವಿಜ್ಞಾನಿಗಳು ಹುಡುಕುತ್ತಿದ್ದಾರೆ. ಈ ಯೋಜನೆಯಡಿ ಒಟ್ಟು 500 ಶತಾಯುಷಿಗಳನ್ನು ಅಧ್ಯಯನ ಮಾಡಲು ವಿಜ್ಞಾನಿಗಳು ನಿರ್ಧರಿಸಿದ್ದಾರೆ.
ಆಹಾರಶೈಲಿಯೇ ಕಾರಣ ಎನ್ನುವ ಸಹೋದರಿಯರು
ದೀರ್ಘಾಯುಷ್ಯಕ್ಕೆ ವಿಜ್ಞಾನಿಗಳು ಜೀನ್ಗಳ ಬಗ್ಗೆ ಮಾತನಾಡುತ್ತಿದ್ದರೆ, ಸಹೋದರಿಯರು ಮಾತ್ರ ನಿಸರ್ಗದ ಜತೆಗಿನ ಒಡನಾಟ ಮತ್ತು ತಾಜಾ ಆಹಾರದಿಂದ ಆರೋಗ್ಯವಾಗಿದ್ದೇವೆ ಎನ್ನುತ್ತಾರೆ.
ಈ ಬಗ್ಗೆ ಮಾತನಾಡಿರುವ ಸಹೋದರಿಯರು, 'ಚಿಕ್ಕವರಿದ್ದಾಗ ನದಿಗಳಲ್ಲಿ ಈಜಾಡುತ್ತಾ, ಮೀನು ಹಿಡಿಯುತ್ತಾ ಬೆಳೆದಿದ್ದೇವೆ. ಆ ಕಾಲದಲ್ಲಿ ಫ್ರಿಡ್ಜ್ ಇಲ್ಲವಾಗಿತ್ತು. ಎಲ್ಲವನ್ನೂ ಆ ಸಮಯದಲ್ಲಿಯೇ ಸಿದ್ಧಪಡಿಸಿ ತಿನ್ನುತ್ತಿದ್ದರು. ಯಾವುದೇ ರಾಸಾಯನಿಕಯುಕ್ತ ಸಂಸ್ಕರಿತ ಆಹಾರಗಳನ್ನು ಸೇವಿಸುತ್ತಿರಲಿಲ್ಲ ಎಂದು ಜುಲಿನಾ ನೆನಪಿಸಿಕೊಳ್ಳುತ್ತಾರೆ.
'ಬಾಲ್ಯದಲ್ಲಿ ತಾಯಿಯ ಎದೆಹಾಲು ದೇಹವನ್ನು ಗಟ್ಟಿಗೊಳಿಸಿತ್ತು ಎನ್ನುವ ಜೊರೈಡೆ, ಇಂದಿಗೂ ಎಂಬ್ರಾಯ್ಡರಿ ಮಾಡುತ್ತೇನೆ ಎಂದು ನಗುತ್ತಾ ಹೇಳುತ್ತಾರೆ. ಇನ್ನು 109 ವರ್ಷದ ಲೆವಿತಾ ತಾವೆ ಹೆಣೆದ ಚಪ್ಪಲಿಗಳನ್ನು ಧರಿಸುವುದಾಗಿ ಹೇಳಿಕೊಂಡಿದ್ದಾರೆ.
'ರಿಯೊ ಡೊ ಜನೈರೊದಲ್ಲಿ ಮೂವರು ಸಹೋದರಿಯರು ಕೆಲವೇ ಕಿಲೋಮೀಟರ್ಗಳ ಅಂತರದಲ್ಲಿ ವಾಸಿಸುತ್ತಿದ್ದಾರೆ. ಹೀಗಾಗಿ ವೃದ್ಧಾಪ್ಯದಲ್ಲಿ ಒಂಟಿತನ ಕಾಡುತ್ತಿಲ್ಲ. ಇದು ಇವರ ಮಾನಸಿಕ ಆರೋಗ್ಯದ ರಹಸ್ಯವಾಗಿದೆ' ಎಂದು ಲಾಂಜೆವಿಕುಯೆಸ್ಟ್ ಸಂಸ್ಥೆಯ ಸಿಇಒ ಬೆನ್ ಮೇಯರ್ಸ್ ಹೇಳಿದ್ದಾರೆ.
ಮಾಹಿತಿ: ರಾಯಿಟರ್ಸ್, ಸೌತ್ ಚೀನಾ ಮಾರ್ನಿಂಗ್ ಪೋಸ್ಟ್, ಅಲ್ ಝಜೀರಾ ಇಂಗ್ಲೀಷ್

