HEALTH TIPS

ಕಟ್ಟೆಬಜಾರ್ ತಿರುವಿನಲ್ಲಿ ಬಾಯ್ತೆರೆದ ಚರಂಡಿ: ವಾಹನ ಸವಾರರಲ್ಲಿ ಆತಂಕ

ಮಂಜೇಶ್ವರ: ಮಂಜೇಶ್ವರ ಪಂಚಾಯತಿ ವ್ಯಾಪ್ತಿಯ ಬಂಗ್ರಮಂಜೇಶ್ವರ ರಸ್ತೆಯ ಕಟ್ಟೆಬಜಾರ್ ತಿರುವು ಸವಾರರಲ್ಲಿ ಆತಂಕವನ್ನು ಉಂಟುಮಾಡುತ್ತಿದೆ. ಈ ತಿರುವಿನ ಇಕ್ಕೆಡೆಗಳಲ್ಲಿ ರಸ್ತೆಗೆ ತಾಗಿಕೊಂಡು ತೆರೆದ ಸ್ಥಿತಿಯಲ್ಲಿರುವ ಚರಂಡಿ ವಾಹನ ಸವಾರರಿಗೆ ಅಪಾಯ ಒಡ್ಡುತ್ತಿದೆ. ಮಂಜೇಶ್ವರ ಭಾಗದಿಂದ ಹೊಸಂಗಡಿ ಕಡೆಗೆ ಸಂಚರಿಸುವಾಗ ಈ ತಿರುವಿನಲ್ಲಿ ಎದುರಿನಿಂದ ಬರುವ ವಾಹನಕ್ಕೆ ಸೈಡು ನೀಡುವ ವೇಳೆ ಚರಂಡಿಗೆ ಬಿದ್ದು ಅಪಘಾತಕ್ಕೆ ಕಾರಣವಾಗುತ್ತಿದ್ದು, ಕೆಲವರು ಕೂದಲೆಳೆ ಅಂತರದಿಂದ ಪಾರಾಗಿದ್ದಾರೆ. ಈ ಪರಿಸರದಲ್ಲಿ ಚರಂಡಿಯಲ್ಲಿ ಗಿಡ, ಪೊದೆಗಳು ತುಂಬಿ ಚರಂಡಿ ಗಮನಕ್ಕೆ ಬಾರದೆ ಇನ್ನಷ್ಟು ಅಪಾಯಕ್ಕೆ ಕಾರಣವಾಗುತ್ತಿರುವುದಾಗಿ ಸಾರ್ವಜನಿಕರು ದೂರಿದ್ದಾರೆ. ತಿರುವು ಇಕ್ಕಟ್ಟಿನಿಂದ ಕೂಡಿದ್ದು, ಬಸ್ ಸಹಿತ ದೊಡ್ಡ ವಾಹನಗಳು ಸಂಚರಿಸುವ ವೇಳೆ ಹರಸಾಹಸಪಡಬೇಕಾಗುತ್ತಿದೆ. ಈ ತಿರುವಿನಲ್ಲಿರುವ ಚರಂಡಿಗೆ ಸ್ಲ್ಯಾಬ್ ನಿರ್ಮಿಸಿ ಭದ್ರತೆಯನ್ನು ಒದಗಿಸಿದ ಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries