ತಿರುವನಂತಪುರಂ: ವಿಳಿಂಜಂ ಬಂದರಿನ ಹೆಸರಿನಲ್ಲಿ ಭಾರಿ ವಂಚನೆ. 300 ಕೋಟಿ ರೂ. ಮೌಲ್ಯದ ಟೆಂಡರ್ ಪಡೆಯಲಾಗಿದೆ ಎಂದು ನಕಲಿ ದಾಖಲೆ ಸೃಷ್ಟಿಸಿ ವಂಚನೆ.
ವಿಳಿಂಜಂ ಇಂಟನ್ರ್ಯಾಷನಲ್ ಸೀ ಪೋರ್ಟ್ ಲಿಮಿಟೆಡ್ ಈ ಘಟನೆಯಲ್ಲಿ ದೂರು ದಾಖಲಿಸಿದೆ. ಮಲಪ್ಪುರಂ ಮೂಲದ ಸಲ್ಮಾನ್ ಫಾರಿಸ್ ವಿರುದ್ಧ ಪೆÇಲೀಸರು ಪ್ರಕರಣ ದಾಖಲಿಸಿದ್ದಾರೆ.
ವಂಚನೆಗಾಗಿ ವಿಎಲ್‍ಸಿಎಲ್ ಹೆಸರಿನಲ್ಲಿ ನಕಲಿ ಒಪ್ಪಂದ ದಾಖಲೆ ಸೃಷ್ಟಿಸಲಾಗಿದೆ. ರಾಜ್ಯ ಸರ್ಕಾರದ ಹೆಸರಿನಲ್ಲಿ ಟೆಂಡರ್‍ಗಳನ್ನು ಆಹ್ವಾನಿಸುವ ಮೂಲಕ ವಂಚನೆ ಮಾಡುವ ಪ್ರಯತ್ನ ನಡೆದಿದೆ.
ವಿಳಿಂಜಂನ ಮಾಜಿ ಸಿಎಂಡಿ ದಿವ್ಯಾ ಎಸ್. ಅಯ್ಯರ್ ಅವರ ಹೆಸರನ್ನೂ ನಕಲಿ ದಾಖಲೆಯಲ್ಲಿ ಉಲ್ಲೇಖಿಸಲಾಗಿದೆ. ತಂಪನೂರು ಪೋಲೀಸರು ಪ್ರಕರಣ ದಾಖಲಿಸಿದ್ದಾರೆ. ವಿವರವಾದ ತನಿಖೆ ಆರಂಭಿಸಲಾಗಿದೆ.

