HEALTH TIPS

ಕ್ಯೂಬಾ ಅಧ್ಯಕ್ಷರ ಮೇಲೆ ಅಮೆರಿಕ ನಿರ್ಬಂಧ

 ವಾಶಿಂಗ್ಟನ್: ಕ್ಯೂಬಾ ಅಧ್ಯಕ್ಷ ಮಿಗುವೆಲ್ ಡಯಾಜ್-ಕ್ಯಾನಲ್, ಅವರ ಪತ್ನಿ ಹಾಗೂ ಇತರ ಮೂವರ ವಿರುದ್ಧ ನಿರ್ಬಂಧ ಜಾರಿಗೊಳಿಸಿರುವುದಾಗಿ ಅಮೆರಿಕ ಘೋಷಿಸಿದ್ದು ಈ ಕ್ರಮ ಕ್ಯೂಬಾ ಖಂಡಿಸಿದೆ. 


ಕ್ಯೂಬಾದ ಮಾಜಿ ಅಧ್ಯಕ್ಷ ರೌಲ್ ಕ್ಯಾಸ್ಟ್ರೋ ಅವರ ಪುತ್ರ ಅಲೆಜಾಂಡ್ರೋ ಕ್ಯಾಸ್ಟ್ರೋ ಎಸ್ಪಿನ್, ಎಸ್ಪಿನ್ ಅವರ ಪುತ್ರ ರೌಲ್ ಅಲೆಜಾಂಡ್ರೋ ಕ್ಯಾಸ್ಟ್ರೋ ಕ್ಯಾಲಿಸ್ ಅವರೂ ನಿರ್ಬಂಧದ ಪಟ್ಟಿಯಲ್ಲಿ ಸೇರಿದ್ದಾರೆ.

ಕ್ಯೂಬಾದ ವಿರುದ್ಧ ಟ್ರಂಪ್ ಹೊಸ ಬೆದರಿಕೆಯೊಡ್ಡುತ್ತಿದ್ದಾರೆ . ಈ ಕ್ರಮಗಳು ನಿರ್ಬಂಧ ಮರುಜಾರಿಗೊಳಿಸುವ ಮತ್ತು ಅಮೆರಿಕ ಹಾಗೂ ಕ್ಯೂಬಾದ ನಡುವೆ ಘರ್ಷಣೆಯನ್ನು ಉಲ್ಬಣಿಸುವ ಉದ್ದೇಶವನ್ನು ಹೊಂದಿದೆ. ಈ ರಾಜಕೀಯ ಕುರುಡುತನವು ಕ್ಯೂಬನ್ ಜನರಿಗೆ ಹಾನಿ ಮಾಡಲು ವಿನ್ಯಾಸಗೊಳಿಸಲಾದ ಬಲವಂತದ ಕ್ರಮಗಳ ಮುಂದುವರಿದ ಭಾಗವಾಗಿದೆ. ಅಮೆರಿಕ ಸರ್ಕಾರದ ಆಕ್ರಮಣಶೀಲತೆ ಮತ್ತು ವಿಕೃತ ನಡವಳಿಕೆಯನ್ನು ನಾವು ವಿರೋಧಿಸುತ್ತೇವೆ ಮತ್ತು ಸಾಮ್ರಾಜ್ಯಶಾಹಿ ದಾಳಿಗಳನ್ನು ವಿರೋಧಿಸಲು ದೃಢ ಸಂಕಲ್ಪ ಮಾಡಿದ್ದೇವೆ ಎಂದು ಡಯಾಜ್ ಕ್ಯಾನಲ್ ಪ್ರತಿಕ್ರಿಯಿಸಿದ್ದಾರೆ.

ʼಎರಡು ದೇಶಗಳ ನಡುವೆ ಘರ್ಷಣೆಯ ಪರಿಸ್ಥಿತಿ ನಿರ್ಮಿಸುವ ಉದ್ದೇಶದ ಅಮೆರಿಕದ ಪ್ರತಿಯೊಂದು ಕ್ರಮವೂ ವಿಫಲಗೊಳ್ಳಲಿದೆ. ಕ್ಯೂಬಾದ ಸ್ವಾತಂತ್ರ್ಯ ಮತ್ತು ಸಾರ್ವಭೌಮತ್ವದ ವಿರುದ್ಧದ ಪ್ರತಿಯೊಂದು ಬೆದರಿಕೆಯನ್ನೂ ನಮ್ಮ ಜನರು ಇನ್ನೂ ಹೆಚ್ಚಿನ ಒಗ್ಗಟ್ಟು ಮತ್ತು ದೃಢಸಂಕಲ್ಪದೊಂದಿಗೆ ಎದುರಿಸುತ್ತಾರೆ' ಎಂದವರು `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.

ಕ್ಯೂಬಾ ವಿರುದ್ಧ ಮಿಲಿಟರಿ ಕ್ರಮ ಕೈಗೊಳ್ಳುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರಂತರ ಬೆದರಿಕೆ ಒಡ್ಡಿರುವಂತೆಯೇ ಕ್ಯೂಬಾದ ವಿರುದ್ಧ ಇಂಧನ ನಿರ್ಬಂಧಕ್ಕೂ ಆದೇಶಿಸಿದ್ದರು. ಕಳೆದ ತಿಂಗಳು ಕ್ಯೂಬಾದ ಮಾಜಿ ಅಧ್ಯಕ್ಷ ರೌಲ್ ಕ್ಯಾಸ್ಟ್ರೋ ವಿರುದ್ಧ ಕ್ರಿಮಿನಲ್ ಆರೋಪವನ್ನೂ ಅಮೆರಿಕ ದಾಖಲಿಸಿದೆ. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries