HEALTH TIPS

ಸಂತಡ್ಕ ಶ್ರೀ ಅರಸು ಸಂಕಲ ದೈವಕ್ಷೇತ್ರ ಮಾಡದಲ್ಲಿ ಗಿರಿಜಾ ಕಲ್ಯಾಣೋತ್ಸವ ಸಮಾಪ್ತಿ

ಮಂಜೇಶ್ವರ: ಸನಾತನ ಧರ್ಮ ಹೇಗೆ ಇರಬೇಕು ಎನ್ನುವುದನ್ನು ನೋಡುವುದಕ್ಕೆ ಸಾಕ್ಷಿ ಸಂತಡ್ಕ. ಗಿರಿಜಾ ಕಲ್ಯಾಣವೆಂದರೆ ಲೋಕ ಕಲ್ಯಾಣ. ಹಿರಿಯರನ್ನು ಮರೆತರೆ ನಮ್ಮತನವನ್ನು ಮರೆತಂತೆ ಎಂದು ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. 


ಕುಳೂರು ಸಂತಡ್ಕ ಶ್ರೀ ಅರಸು ಸಂಕಲ ದೈವಕ್ಷೇತ್ರ ಮಾಡದ ಭೋಜನ ಶಾಲೆಯ ಉದ್ಘಾಟನಾ ಸಮಾರಂಭದಂಗವಾಗಿ ಹಮ್ಮಿಕೊಂಡ ರುದ್ರಯಾಗ ಹಾಗೂ ಗಿರಿಜಾ ಕಲ್ಯಾಣ ಮಹೋತ್ಸವದ ಸಭಾ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಆಶೀರ್ವಚನ ನೀಡಿದರು. 

ಹೃದಯದಲ್ಲಿ ಶ್ರದ್ಧೆ ಮತ್ತು ಭಕ್ತಿಯ ಬೀಜವನ್ನು ಬಿತ್ತಿದರೆ ಹೃದಯದಲ್ಲಿ ಮನ:ಶಾಂತಿಯ ಫಲ ಸಿಗುತ್ತದೆ. ಜ್ಞಾನದ ಬುದ್ದಿ ಭಗವಂತನನ್ನು ಆಕರ್ಷಿಸಬೇಕಾಗುತ್ತದೆ ಎಂದು ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿದರು.

ಕರ್ನಾಟಕ ಸರ್ಕಾರದ ಮಾನವ ಹಕ್ಕುಗಳ ಹಂಗಾಮಿ ಅಧ್ಯಕ್ಷ ಡಾ.ಟಿ ಶ್ಯಾಮ್ ಭಟ್ ಭೋಜನ ಶಾಲೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭ ಗಣ್ಯರ ಸಮಕ್ಷಮ ಆಡಳಿತ ಮಂಡಳಿಯ ವತಿಯಿಂದ ಡಾ.ಶ್ಯಾಮ್ ಭಟ್ ಇವರನ್ನು ಸನ್ಮಾನಿಸಲಾಯಿತು.

ಡಾ. ಶ್ರೀಧರ ಭಟ್ ಉಪ್ಪಳ ಅಧ್ಯಕ್ಷತೆ ವಹಿಸಿದ್ದರು. ಕುಡುಪು ಬ್ರಹ್ಮಶ್ರೀ ಕೃಷ್ಣರಾಜ ತಂತ್ರಿ, ಐಲ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ನಾರಾಯಣ ಹೆಗ್ಡೆ ಕೋಡಿ ಬೈಲು, ಚಿಗುರುಪಾದೆ ಶ್ರೀ ಮಹಾಲಿಂ ಗೇಶ್ವರ ದೇವಸ್ಥಾನದ ಜೆ.ಸಿ ಜಯ ಪ್ರಕಾಶ್ ನಾರಾಯಣ್ ತೊಟ್ಟತ್ತೋಡಿ, ಆದಿಶಕ್ತಿ ಶ್ರೀ ಗೋಪಾಲಕೃಷ್ಣ ಕ್ಷೇತ್ರ ಅಧ್ಯಕ್ಷ ಹರೀಶ್ ಉಳ್ಳಾಲ, ಕರ್ನಾಟಕ ಲೋಕಾಯುಕ್ತ ದಕ್ಷಿಣ ಕನ್ನಡ ಜಿಲ್ಲೆಯ ವಿಶೇಷ ಸರಕಾರಿ ಅಭಿಯೋಜಕ ರವೀಂದ್ರ ಮುನ್ನಿಪ್ಪಾಡಿ, ಧಾರ್ಮಿಕ ಮುಂದಾಳು ಕೃಷ್ಣಪ್ಪ ಪೂಜಾರಿ ದೇರಂ ಬಳ, ಬಾಲಕೃಷ್ಣ ಭಂಡಾರಿ ಕೆ. ದಡ್ಡಂ ಗಡಿ ಉಪಸ್ಥಿತರಿದ್ದರು. ದಡ್ಡಂಗಡಿ ಅರವಿಂದಾಕ್ಷ ಭಂಡಾರಿ ಸ್ವಾಗತಿಸಿ, ರಾಮಕೃಷ್ಣ ಎಸ್ ವಂದಿಸಿದರು. ತೇಜಶ್ರೀ ಸಂತಡ್ಕ ಪಾರ್ಥಿಸಿದರು. ಜಯಪ್ರಕಾಶ್ ಶೆಟ್ಟಿ ಅಂಗಡಿದಾರು ನಿರೂಪಿಸಿದರು. ಯೋಗೀಶ್ ಕಲ್ಯಾಣತ್ತಾಯ ಕುಳೂರು, ಬ್ರಹ್ಮಶ್ರೀ ವೇದಮೂರ್ತಿ ಅನಂತನಾರಾಯಣ ಭಟ್ ಪರಕ್ಕಜೆ ಇವರ ನೇತೃತ್ವದಲ್ಲಿ ರುದ್ರಯಾಗ ಹಾಗೂ ಗಿರಿಜಾ ಕಲ್ಯಾಣೋತ್ಸವ ಜರಗಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries