HEALTH TIPS

ವಿವಾಹೇತರ ಸಂಬಂಧಗಳ ಮಾಹಿತಿಯನ್ನು ಬಳಸಿಕೊಂಡು ಬ್ಲ್ಯಾಕ್‌ ಮೇಲ್‌ ಗೆ ಯತ್ನಿಸಿದ್ದ: Epstein ವಿರುದ್ಧ ಬಿಲ್‌ ಗೇಟ್ಸ್‌ ಆರೋಪ

ವಾಷಿಂಗ್ಟನ್‌: ತಮ್ಮ ವಿವಾಹೇತರ ಸಂಬಂಧಗಳ ಕುರಿತ ಮಾಹಿತಿಯನ್ನು ಬಳಸಿಕೊಂಡು ಲೈಂಗಿಕ ಅಪರಾಧ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಜೆಫ್ರಿ ಎಪ್ಸ್ಟೀನ್‌, ಬ್ಲ್ಯಾಕ್‌ ಮೇಲ್‌ ಗೆ ಯತ್ನಿಸಿದ್ದ ಎಂದು ಮೈಕ್ರೋಸಾಫ್ಟ್‌ ಸಹ-ಸಂಸ್ಥಾಪಕ ಬಿಲ್‌ ಗೇಟ್ಸ್‌ ಅಮೆರಿಕ ಸಂಸತ್ತಿನ ಹೌಸ್‌ ಓವರ್‌ ಸೈಟ್‌ ಸಮಿತಿಗೆ ತಿಳಿಸಿದ್ದಾರೆ ಎಂದು ರಾಯಿಟರ್ಸ್‌ ವರದಿ ಮಾಡಿದೆ.

ಸಮಿತಿಗೆ ಸಲ್ಲಿಸಿದ ಲಿಖಿತ ಹೇಳಿಕೆಯಲ್ಲಿ, ಎಪ್ಸ್ಟೀನ್‌ 'ಹಲವು ಸುಳ್ಳುಗಳನ್ನು ಹೇಳುತ್ತಿದ್ದ ವ್ಯಕ್ತಿ' ಎಂದು ಗೇಟ್ಸ್‌ ಹೇಳಿದ್ದಾರೆ. ತಮ್ಮ ವಿವಾಹೇತರ ಸಂಬಂಧಗಳ ಮಾಹಿತಿಯನ್ನು ಬಳಸಿಕೊಂಡು ಮತ್ತೆ ಸಂಪರ್ಕ ಬೆಳೆಸಲು ಹಾಗೂ ಬ್ಲ್ಯಾಕ್‌ ಮೇಲ್‌ ಮಾಡಲು ಎಪ್ಸ್ಟೀನ್‌ ಯತ್ನಿಸಿದ್ದ ಎಂದು ಅವರು ಆರೋಪಿಸಿದ್ದಾರೆ.

ತಮ್ಮ ವಿವಾಹೇತರ ಸಂಬಂಧಗಳ ಕುರಿತು ತಿಳಿದಿದ್ದ ಮಾಹಿತಿಯನ್ನು ಬಳಸಿಕೊಂಡು ಎಪ್ಸ್ಟೀನ್‌ ಬ್ಲ್ಯಾಕ್‌ ಮೇಲ್‌ ಗೆ ಯತ್ನಿಸಿದ್ದ. ಆದರೆ, 'ಆ ಸಂಬಂಧ'ಗಳಿಗೆ ಎಪ್ಸ್ಟೀನ್‌ ನೊಂದಿಗಿನ ಸಂಪರ್ಕಕ್ಕೆ ಯಾವುದೇ ಲಿಂಕ್ ಇರಲಿಲ್ಲ. ಈ ವಿಷಯವು ಕುಟುಂಬಕ್ಕೆ ತೀವ್ರ ನೋವುಂಟುಮಾಡಿತ್ತು ಎಂದು ಬಿಲ್ ಗೇಟ್ಸ್‌ ಹೇಳಿದ್ದಾರೆ.

ಎಪ್ಸ್ಟೀನ್‌ ನೊಂದಿಗೆ ಸಂಪರ್ಕ ಸಾಧಿಸಿದ್ದು ಗಂಭೀರ ತಪ್ಪಾಗಿತ್ತು ಎಂದು ಗೇಟ್ಸ್‌ ಹೇಳಿದ್ದಾರೆ. ಜಾಗತಿಕ ಆರೋಗ್ಯ ಮತ್ತು ದತ್ತಿ ಕಾರ್ಯಗಳಿಗೆ ನೆರವು ದೊರೆಯಬಹುದು ಎಂಬ ನಿರೀಕ್ಷೆಯಲ್ಲಿ ಆರಂಭದಲ್ಲಿ ಆತನನ್ನು ಭೇಟಿಯಾಗಿದ್ದೆ. ಆದರೆ, ಅದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎಂಬುದು ತಿಳಿದ ಬಳಿಕ ಸಂಪರ್ಕವನ್ನು ಕೊನೆಗೊಳಿಸಿದ್ದೆ ಎಂದು ಹೇಳಿದ್ದಾರೆ.

'ದಿ ನ್ಯೂಯಾರ್ಕ್‌ ಟೈಮ್ಸ್‌' ವರದಿ ಪ್ರಕಾರ, 2008ರಲ್ಲಿ ಎಪ್ಸ್ಟೀನ್‌ ಶಿಕ್ಷೆಗೆ ಗುರಿಯಾದ ಬಳಿಕವೂ ಬಿಲ್ ಗೇಟ್ಸ್‌, ಆತನನ್ನು ಹಲವು ಬಾರಿ ಭೇಟಿಯಾಗಿದ್ದರು. ನ್ಯೂಯಾರ್ಕ್‌ ನಲ್ಲಿ ನಡೆದ ಭೇಟಿ ಹಾಗೂ ದತ್ತಿ ಕಾರ್ಯಗಳಿಗೆ ಸಂಬಂಧಿಸಿದ ಚರ್ಚೆಗಳು ಇದರಲ್ಲಿ ಸೇರಿದ್ದವು.

ಎಪ್ಸ್ಟೀನ್‌ ನನ್ನು ಭೇಟಿಯಾಗಿದ್ದು ಮತ್ತು ಆತನೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದು ತಪ್ಪಾಗಿತ್ತು ಎಂದು ಬಿಲ್ ಗೇಟ್ಸ್‌ ಬಳಿಕ ಒಪ್ಪಿಕೊಂಡಿದ್ದರು. ಆತನೊಂದಿಗಿನ ಒಡನಾಟದಿಂದ ತಮ್ಮ ಹೆಸರಿಗೆ ಧಕ್ಕೆಯಾಗುವ ಸಾಧ್ಯತೆಯನ್ನು ತಾವು ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂದು ಖೇದ ವ್ಯಕ್ತಪಡಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries