HEALTH TIPS

G7 Summit 2026 | 'ನಾವೀಗ ಅತ್ಯಂತ ಪ್ರಸಿದ್ಧ ಜೋಡಿಗಳು': ಮೋದಿ ಎದುರು ಮೆಲೋನಿ ಹಾಸ್ಯ ಚಟಾಕಿ

 ಎವಿಯಾನ್-ಲೆಸ್-ಬೈನ್ಸ್ : ಪ್ರಧಾನಿ ನರೇಂದ್ರ ಮೋದಿ ಹಾಗೂ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ಹೆಸರುಗಳನ್ನು ಜೋಡಿಸಿ ರೂಪಿಸಲಾದ 'ಮೆಲೋಡಿ' ಪದ ಮತ್ತೊಮ್ಮೆ ಸುದ್ದಿಯಾಗಿದೆ. ಫ್ರಾನ್ಸ್‌ ನ ಎವಿಯಾನ್-ಲೆಸ್-ಬೈನ್ಸ್‌ ನಲ್ಲಿ ನಡೆಯುತ್ತಿರುವ G7 ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರನ್ನು ಉದ್ದೇಶಿಸಿ ಮಾತನಾಡಿದ ಮೆಲೋನಿ, "ಹೌದು, ನಾವು ಇನ್‌ಸ್ಟಾಗ್ರಾಂ ನಲ್ಲಿ ಅತ್ಯಂತ ಪ್ರಸಿದ್ಧ ಜೋಡಿಗಳು" ಎಂದು ಹಾಸ್ಯಮಯವಾಗಿ ಹೇಳಿದ್ದು ಗಮನ ಸೆಳೆಯಿತು.


ಕಳೆದ ತಿಂಗಳು ಪ್ರಧಾನಿ ಮೋದಿ ಇಟಲಿಗೆ ಭೇಟಿ ನೀಡಿದ್ದ ವೇಳೆ, ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿಗೆ ಭಾರತದ ಜನಪ್ರಿಯ ಟಾಫಿಗಳಲ್ಲಿ ಒಂದಾದ 'ಮೆಲೋಡಿ'ಯನ್ನು ಉಡುಗೊರೆಯಾಗಿ ನೀಡಿದ್ದರು. ಪ್ರಧಾನಿ ನರೇಂದ್ರ ಮೋದಿ ಹಾಗೂ ಜಾರ್ಜಿಯಾ ಮೆಲೋನಿ ಅವರ ಉಪನಾಮಗಳನ್ನು ಸಂಯೋಜಿಸಿ ರೂಪಿಸಲಾದ 'ಮೆಲೋಡಿ' ಪದ ಆಗ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವೈರಲ್‌ ಆಗಿತ್ತು.

G7 ಶೃಂಗಸಭೆಯ ವೇಳೆ ಪ್ರಧಾನಿ ಮೋದಿ ಹಾಗೂ ಮೆಲೋನಿ ಪರಸ್ಪರ ಹಸ್ತಲಾಘವ ಮಾಡಿ ಶುಭಾಶಯ ವಿನಿಮಯ ಮಾಡಿಕೊಂಡರು. ಇದೇ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಗ್ರೂಪ್‌ ಫೊಟೋ ತೆಗೆಸಿಕೊಳ್ಳಲು ಹಲವು ರಾಷ್ಟ್ರಗಳ ನಾಯಕರು ಸಾಲಿನಲ್ಲಿ ನಿಂತಿದ್ದರು.

ಆ ವೇಳೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿಯ ಸಾಮಾಜಿಕ ಮಾಧ್ಯಮಗಳಲ್ಲಿನ ಜನಪ್ರಿಯತೆಯ ಕುರಿತು ಪ್ರಧಾನಿ ಮೋದಿ ಇತರ ನಾಯಕರಿಗೆ ವಿವರಿಸುತ್ತಿರುವಂತೆ ಕಂಡುಬಂತು. ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಮೆಲೋನಿ, "ಹೌದು, ನಾವು ಇನ್‌ಸ್ಟಾಗ್ರಾಂನಲ್ಲಿ ಅತ್ಯಂತ ಪ್ರಸಿದ್ಧ ಜೋಡಿಗಳು" ಎಂದು ಹೇಳಿ ಹಾಸ್ಯ ಚಟಾಕಿ ಹಾರಿಸಿದರು.

ಸುಮಾರು ಒಂದು ತಿಂಗಳ ಹಿಂದೆ ಇಟಲಿಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿ, ಜಾರ್ಜಿಯಾ ಮೆಲೋನಿಗೆ 'ಮೆಲೋಡಿ' ಟಾಫಿಯನ್ನು ಉಡುಗೊರೆಯಾಗಿ ನೀಡಿದ್ದರು. ಈ ಸಂದರ್ಭದ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದ ಮೆಲೋನಿ, "ನಿಮ್ಮ ಉಡುಗೊರೆಗೆ ಧನ್ಯವಾದಗಳು" ಎಂದು ಹೇಳಿದ್ದರು.

"ಪ್ರಧಾನಿ ಮೋದಿ ನನಗಾಗಿ ತುಂಬಾ, ತುಂಬಾ ಒಳ್ಳೆಯ ಟಾಫಿಯನ್ನು ಉಡುಗೊರೆಯಾಗಿ ತಂದಿದ್ದಾರೆ" ಎಂದೂ ಅವರು ಹೇಳಿದ್ದರು. ವಿಡಿಯೊಗೆ 'ವೆರಿ, ವೆರಿ ಚಾಕೊಲೇಟಿ' ಎಂಬ ಶೀರ್ಷಿಕೆ ನೀಡಿದ್ದರು.

2023ರಲ್ಲಿ ನಡೆದ ದ್ವಿಪಕ್ಷೀಯ ಸಭೆಯ ಬಳಿಕ ಪ್ರಧಾನಿ ನರೇಂದ್ರ ಮೋದಿ ಹಾಗೂ ಜಾರ್ಜಿಯಾ ಮೆಲೋನಿ ಅವರ ಉಪನಾಮಗಳನ್ನು ಸೇರಿಸಿ 'ಮೆಲೋಡಿ' ಎಂಬ ಪದ ಸೃಷ್ಟಿಯಾಗಿತ್ತು. ಬಳಿಕ ವಿವಿಧ ಬಹುಪಕ್ಷೀಯ ಶೃಂಗಸಭೆಗಳಲ್ಲಿ ಈ ಇಬ್ಬರು ನಾಯಕರು ಜೊತೆಯಾಗಿ ಕಾಣಿಸಿಕೊಂಡ ವಿಡಿಯೊ ತುಣುಕುಗಳು ವೈರಲ್ ಆಗಿದ್ದವು. ಈ ಪದವನ್ನು ಇಬ್ಬರು ನಾಯಕರ ನಡುವಿನ ಸ್ನೇಹಪರ, ಆತ್ಮೀಯ - ಸಹಜ ಕ್ಷಣಗಳನ್ನು ಬಣ್ಣಿಸಲು ಸಾಮಾಜಿಕ ಮಾಧ್ಯಮದಲ್ಲಿ ಜನರು ಬಳಸುತ್ತಿದ್ದಾರೆ.

ಮೋದಿ ಹಾಗೂ ಮೆಲೋನಿ ಜೊತೆಯಾಗಿ ಕಾಣಿಸಿಕೊಂಡಿರುವ ಹಲವು ವಿಡಿಯೊಗಳಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಲಕ್ಷಾಂತರ ವೀಕ್ಷಣೆ ದೊರೆತಿದೆ. 









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries