ಜೆರುಸಲೇಂ : ಬುಧವಾರ ಇಸ್ರೇಲಿ ವಸಾಹತುಗಾರರು ಪಶ್ಚಿಮ ದಂಡೆಯ ಗ್ರಾಮವೊಂದರ ಮಸೀದಿಗೆ ಬೆಂಕಿ ಹಚ್ಚಿದ್ದಾರೆ ಎಂದು ಸ್ಥಳೀಯ ಮೇಯರ್ ಅವರನ್ನು ಉಲ್ಲೇಖಿಸಿದ ವರದಿ ತಿಳಿಸಿದೆ.
ರಮಲ್ಲಾದ ಉತ್ತರಕ್ಕಿರುವ ಜಿಲ್ಜಿಲಿಯಾ ಗ್ರಾಮದ ಮುಖ್ಯ ಮಸೀದಿಯ ಕೊಠಡಿಗೆ ಬೆಂಕಿ ಹಚ್ಚಿದ್ದು ಮಸೀದಿಗೆ ಹಾನಿ ಮಾಡಿದ್ದಾರೆ.
ಮಸೀದಿಯ ಮೇಲ್ಛಾವಣಿ, ಗೋಡೆಗಳು ಮತ್ತು ನೆಲವು ಹೊಗೆ ಹಾಗೂ ಜ್ವಾಲೆಯಿಂದಾಗಿ ಕಪ್ಪಾಗಿದೆ ಮತ್ತು ಹೊರಗಿನ ಗೋಡೆಗಳ ಮೇಲೆ ದ್ವೇಷದ ಘೋಷಣೆಗಳನ್ನು ಬರೆದಿದ್ದಾರೆ' ಎಂದು ಎಎಫ್‍ಪಿ ಸುದ್ದಿಸಂಸ್ಥೆ ವರದಿ ಮಾಡಿದೆ. ಇಸ್ರೇಲ್ 1967 ರಿಂದ ಪಶ್ಚಿಮ ದಂಡೆಯನ್ನು ಆಕ್ರಮಿಸಿಕೊಂಡಿದೆ.

