HEALTH TIPS

ಸಹಿ ಹಾಕುವ ಮೊದಲೇ ಅಮೆರಿಕ-ಇರಾನ್‌ ಒಪ್ಪಂದದ ಕರಡು ಸೋರಿಕೆ

 ದುಬೈ/ಇವಿಯಾನ್‌ ಲಿ ಬಾನ್‌: ಯುದ್ಧ ಅಂತ್ಯಗೊಳಿಸುವ ಕುರಿತು ಅಮೆರಿಕ ಮತ್ತು ಇರಾನ್‌ ದೇಶಗಳು 14 ಅಂಶಗಳ ಒಪ್ಪಂದದ ಕರಡು (ಇದು ಅಂತಿಮ ಶಾಂತಿ ಒಪ್ಪಂದವಲ್ಲ) ರೂಪಿಸಿಕೊಂಡಿವೆ. ಈ ಒಪ್ಪಂದಕ್ಕೆ ಎರಡೂ ದೇಶಗಳು ಸ್ವಿಟ್ಜರ್ಲೆಂಡ್‌ನಲ್ಲಿ ಶುಕ್ರವಾರ ಸಹಿ ಹಾಕಲಿವೆ. ಇದಕ್ಕೆ ಎರಡು ದಿನ ಮುಂಚೆಯೇ ಒಪ್ಪಂದದ ಅಂಶಗಳು ಸೋರಿಕೆಯಾಗಿವೆ. 


ಸೌದಿ ಅರೇಬಿಯಾದ ಪ್ರಮುಖ ಪತ್ರಿಕೆ 'ಅಲ್‌ ಅರೇಬಿಯಾ' ಇವುಗಳನ್ನು ಪ್ರಕಟಿಸಿದೆ. ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಮೆರಿಕ ಇಬ್ಬರು ಅಧಿಕಾರಿಗಳು, 'ಈ ಅಂಶಗಳು ಹೆಚ್ಚು-ಕಡಿಮೆ ಮೂಲ ಅಂಶಗಳಿಗೆ ಹೊಂದಿಕೆಯಾಗುತ್ತವೆ' ಎಂದಿದ್ದಾರೆ. 14 ಅಂಶಗಳ ಸಂಕ್ಷಿಪ್ತ ವಿವರ ಇಲ್ಲಿವೆ:

1. ಒಪ್ಪಂದಕ್ಕೆ ಸಹಿ ಹಾಕಿದ ತಕ್ಷಣದಲ್ಲಿಯೇ ಎಲ್ಲ ರೀತಿಯ ಯುದ್ಧಗಳು ನಿಲ್ಲಬೇಕು. ಲೆಬನಾನ್‌ ಮೇಲಿನ ದಾಳಿಯೂ ನಿಲ್ಲಬೇಕು. ಎರಡೂ ದೇಶಗಳು ಪರಸ್ಪರರ ಸಾರ್ವಭೌಮತ್ವವನ್ನೂ ದೇಶದ ಸಮಗ್ರತೆಯನ್ನೂ ಗೌರವಿಸಬೇಕು. ಆಂತರಿಕ ವಿಚಾರಗಳಲ್ಲಿ ಮಧ್ಯಪ್ರವೇಶಿಸುವಂತಿಲ್ಲ

2. ಸಹಿ ಹಾಕಿದ 60 ದಿನಗಳ ಒಳಗೆ ಅಂತಿಮ ಶಾಂತಿ ಒಪ್ಪಂದದ ರೂಪುರೇಷೆ ಪೂರ್ಣಗೊಳ್ಳಬೇಕು. ಇಬ್ಬರ ಒಪ್ಪಿಗೆ ಮೇರೆಗೆ ಈ ಅವಧಿ ವಿಸ್ತರಣೆಗೊಳ್ಳಬಹುದು

3. ಸಹಿ ಹಾಕಿದ ಬಳಿಕ, ಇರಾನ್‌ ಬಂದರುಗಳ ಮೇಲಿನ ದಿಗ್ಭಂದನವನ್ನು 30 ದಿನಗಳ ಒಳಗೆ ಅಮೆರಿಕ ತೆರವು ಮಾಡಬೇಕು. ಪರ್ಶಿಯನ್‌ ಕೊಲ್ಲಿಯಿಂದ ಒಮಾನ್‌ ಕೊಲ್ಲಿಗೆ ವಾಣಿಜ್ಯ ಹಡಗುಗಳ ಸಂಚಾರಕ್ಕೆ ಇರಾನ್‌ ಅನುವು ಮಾಡಿಕೊಡಲಿದೆ

4. ಅಂತಿಮ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ, ಇರಾನ್‌ ಮೇಲೆ ಎಲ್ಲ ರೀತಿಯ ನಿರ್ಬಂಧವನ್ನು ತೆರವು ಮಾಡಲು ಅಮೆರಿಕ ಒಪ್ಪಿಕೊಂಡಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಗಳನ್ನೂ ತೆರವು ಮಾಡಲಾಗುವುದು

5. ಅಣ್ವಸ್ತ್ರಗಳನ್ನು ತಯಾರಿಸುವುದಿಲ್ಲ ಎಂದು ಇರಾನ್‌ ಪುನರುಚ್ಚರಿಸಿದೆ. ಸಂವರ್ಧಿತ ಯುರೇನಿಯಂ ಅನ್ನು ಏನು ಮಾಡಬೇಕು ಮತ್ತು ಇರಾನ್‌ನ ಅಣುಶಕ್ತಿ ಅಗತ್ಯಗಳ ಕುರಿತು ಅಂತಿಮ ಒಪ್ಪಂದದ ಕುರಿತ ಚರ್ಚೆಯ ವೇಳೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ

6. ಅಂತಿಮ ಒಪ್ಪಂದ ಆಗುವವರೆಗೂ ಇರಾನ್‌ ತನ್ನ ಪರಮಾಣು ಯೋಜನೆಯನ್ನು ಮುಂದುವರಿಸಲಿದೆ ಮತ್ತು ಅಮೆರಿಕವು ಈ ಅವಧಿಯಲ್ಲಿ ಯಾವುದೇ ರೀತಿಯ ಹೊಸ ನಿರ್ಬಂಧವನ್ನು ಇರಾನ್‌ ಮೇಲೆ ಹೇರುವಂತಿಲ್ಲ

7. ಶುಕ್ರವಾರ ಎರಡೂ ದೇಶಗಳು ಸಹಿ ಹಾಕಿದ ದಿನದಿಂದ ಅಮೆರಿಕವು ಇರಾನ್‌ ಮೇಲಿನ ಎಲ್ಲ ನಿರ್ಬಂಧವನ್ನು ತೆರವು ಮಾಡುವ ದಿನವರೆಗೂ ಅಮೆರಿಕದ ಹಣಕಾಸು ಇಲಾಖೆಯು ಇರಾನ್‌ನ ಕಚ್ಚಾ ತೈಲ, ಪೆಟ್ರೋಕೆಮಿಕಲ್‌ ಉತ್ಪನ್ನಗಳು, ಬ್ಯಾಂಕಿಂಗ್‌, ವಿಮೆ, ಸಂಚಾರ ಸೇರಿದಂತೆ ಹಲವು ವಿಚಾರಗಳ ಮೇಲಿನ ನಿರ್ಬಂಧವನ್ನು ತೆರವು ಮಾಡಲಿದೆ

8. ಅಂತಿಮ ಒಪ್ಪಂದದಲ್ಲಿ ಮಾತುಕತೆಯು ಪ್ರಗತಿ ಕಾಣುತ್ತಿದ್ದಂತೆಯೇ ಮುಟ್ಟುಗೋಲು ಹಾಕಿಕೊಂಡಿರುವ ಇರಾನ್‌ನ ಆಸ್ತಿ, ಹಣವನ್ನು ಬಿಡುಗಡೆ ಮಾಡಲು ಅಮೆರಿಕ ಒಪ್ಪಿಕೊಂಡಿದೆ. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries