HEALTH TIPS

G7 ನಲ್ಲಿ ದ್ವಿಪಕ್ಷೀಯ ಮಾತುಕತೆ | 'ಭಾರತಕ್ಕೆ ಶ್ವೇತಭವನದಲ್ಲಿ ಉತ್ತಮ ಸ್ನೇಹಿತನಿದ್ದಾನೆ': ಮೋದಿ ಭೇಟಿಯ ವೇಳೆ ಟ್ರಂಪ್ ಹೇಳಿಕೆ

 ಎವಿಯನ್: 'ನಾನು ಅಧ್ಯಕ್ಷನಾಗಿರುವವರೆಗೆ ಭಾರತಕ್ಕೆ ಶ್ವೇತಭವನದಲ್ಲಿ ಉತ್ತಮ ಸ್ನೇಹಿತನಿದ್ದಾನೆ. ಇಲ್ಲಿರುವ ಪ್ರತಿಯೊಬ್ಬರೂ ಭಾರತವನ್ನು ಪ್ರೀತಿಸುತ್ತಾರೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಅಪಾರ ಗೌರವ ಹೊಂದಿದ್ದಾರೆ' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಉ7 ಶೃಂಗಸಭೆಯ ಅಂಗವಾಗಿ ಬುಧವಾರ ಪ್ರಧಾನಿ ಮೋದಿ ಅವರೊಂದಿಗೆ ನಡೆದ ದ್ವಿಪಕ್ಷೀಯ ಮಾತುಕತೆಯಲ್ಲಿ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ.


ಈ ವೇಳೆ ಉಭಯ ನಾಯಕರು ಆರ್ಥಿಕ ಬೆಳವಣಿಗೆ, ಪೂರೈಕೆ ಸರಪಳಿಗಳು, ಕೃತಕ ಬುದ್ಧಿಮತ್ತೆ (AI), ಹೂಡಿಕೆ ಪಾಲುದಾರಿಕೆಗಳು ಹಾಗೂ ಜಾಗತಿಕ ಭದ್ರತಾ ಸವಾಲುಗಳಿಗೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚೆ ನಡೆಸಿದರು.

ದ್ವಿಪಕ್ಷೀಯ ಮಾತುಕತೆಯ ಆರಂಭದಲ್ಲಿ ಮಾತನಾಡಿದ ಮೋದಿ, ಕಳೆದ ವರ್ಷ ವಾಷಿಂಗ್ಟನ್‌ನಲ್ಲಿ ನಡೆದ ಮಾತುಕತೆಯ ಬಳಿಕ ಭಾರತ-ಅಮೆರಿಕ ಸಂಬಂಧಗಳಿಗೆ ಹೊಸ ವೇಗ ಮತ್ತು ಶಕ್ತಿ ದೊರೆತಿದೆ ಎಂದು ಹೇಳಿದರು.

'ಎವಿಯನ್‌ ನಲ್ಲಿ ನಿಮ್ಮನ್ನು ಭೇಟಿಯಾಗುತ್ತಿರುವುದು ಸಂತಸದ ಸಂಗತಿ. ಹಲವು ಕ್ಷೇತ್ರಗಳಲ್ಲಿ ನಾವು ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಉಭಯ ದೇಶಗಳ ತಂಡಗಳು ಸಹ ನಿಕಟ ಸಹಕಾರದೊಂದಿಗೆ ಕಾರ್ಯನಿರ್ವಹಿಸುತ್ತಿವೆ. ನಿಗದಿಪಡಿಸಿದ ಗುರಿಗಳತ್ತ ನಾವು ವೇಗವಾಗಿ ಮುನ್ನಡೆಯುತ್ತಿದ್ದೇವೆ' ಎಂದು ಮೋದಿ ಹೇಳಿದರು.

ಈ ವೇಳೆ ಮೋದಿ ಅವರು ಭಾರತೀಯ ನಾವಿಕರ ಸುರಕ್ಷತೆಯ ವಿಷಯವನ್ನೂ ಪ್ರಸ್ತಾಪಿಸಿದರು. ಹಾರ್ಮುಝ್ ಜಲಸಂಧಿ ಸೇರಿದಂತೆ ಜಾಗತಿಕ ಕಡಲ ವ್ಯಾಪಾರ ಮಾರ್ಗಗಳಲ್ಲಿ ಲಕ್ಷಾಂತರ ಭಾರತೀಯ ನಾವಿಕರು ಕಾರ್ಯನಿರ್ವಹಿಸುತ್ತಿದ್ದು, ಅವರ ಸುರಕ್ಷತೆ ಭಾರತಕ್ಕೆ ಅತ್ಯಂತ ಮಹತ್ವದ್ದಾಗಿದೆ. ಇರಾನ್-ಅಮೆರಿಕ ಶಾಂತಿ ಒಪ್ಪಂದದ ಅನುಷ್ಠಾನದ ಸಂದರ್ಭದಲ್ಲಿ ನಾವಿಕರ ಸುರಕ್ಷತೆಗೆ ಅತ್ಯುನ್ನತ ಆದ್ಯತೆ ನೀಡಲಾಗುವುದು ಎಂಬ ವಿಶ್ವಾಸವಿದೆ ಎಂದೂ ಅವರು ಹೇಳಿದರು.

ಇದಕ್ಕೂ ಮುನ್ನ ಉ7 ಶೃಂಗಸಭೆಯ ಅಧಿವೇಶನದಲ್ಲಿ ಮೋದಿ ಮತ್ತು ಟ್ರಂಪ್ ಭೇಟಿಯಾಗಿ ಶುಭಾಶಯ ವಿನಿಮಯ ಮಾಡಿಕೊಂಡರು. ಜಾಗತಿಕ ಸಹಕಾರ ಮತ್ತು ಹೊಸ ಪಾಲುದಾರಿಕೆಗಳ ಕುರಿತು ನಡೆದ ಕಾರ್ಯಕಾರಿ ಅಧಿವೇಶನಕ್ಕೂ ಮುನ್ನ ಉಭಯ ನಾಯಕರು ಸಂಕ್ಷಿಪ್ತ ಮಾತುಕತೆ ನಡೆಸಿದರು.

ಜೂನ್ 15ರಿಂದ 17ರವರೆಗೆ ನಡೆಯುತ್ತಿರುವ 52ನೇ ಉ7 ಶೃಂಗಸಭೆಗೆ ಭಾರತವನ್ನು ಪಾಲುದಾರ ರಾಷ್ಟ್ರವಾಗಿ ಆಹ್ವಾನಿಸಲಾಗಿದೆ. ಉ7 ಶೃಂಗಸಭೆಯಲ್ಲಿ ಭಾರತದ ಇದು 13ನೇ ಭಾಗವಹಿಸುವಿಕೆಯಾಗಿದ್ದು, ಪ್ರಧಾನಿ ಮೋದಿ ಅವರು ಸತತ ಏಳನೇ ಬಾರಿ ಪಾಲ್ಗೊಳ್ಳುತ್ತಿದ್ದಾರೆ.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries