ಗಾಝಾ: ಗಾಝಾದಲ್ಲಿ ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ ಂಟರಿಚಿzeeಡಿಚಿ ವಾಹಿನಿಯ ಕ್ಯಾಮೆರಾಮನ್ ಸೇರಿದಂತೆ ಕನಿಷ್ಠ ಆರು ಜನರು ಸಾವನ್ನಪ್ಪಿದ್ದಾರೆ ಎಂದು 'ಅಸೋಸಿಯೇಟೆಡ್ ಪ್ರೆಸ್' ವರದಿ ಮಾಡಿದೆ. ಆದರೆ, ಮೃತ ಪತ್ರಕರ್ತ ಹಮಾಸ್‌ನ ಮಿಲಿಟರಿ ವಿಭಾಗದ ಸದಸ್ಯನಾಗಿದ್ದ ಎಂದು ಇಸ್ರೇಲ್ ಸೇನೆ ಪ್ರತಿಪಾದಿಸಿದೆ.
ಮಧ್ಯ ಗಾಝಾ ಪಟ್ಟಿಯ ಬುರೇಜ್ ನಿರಾಶ್ರಿತರ ಶಿಬಿರದಲ್ಲಿದ್ದ ಮನೆಯೊಂದರ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಸಂಸ್ಥೆಯ ಕ್ಯಾಮೆರಾಮನ್ ಆಗಿ ಕೆಲಸ ಮಾಡುತ್ತಿದ್ದ ಅಹ್ಮದ್ ವಿಷಾ ಸಾವನ್ನಪ್ಪಿದ್ದಾರೆ. ಡ್ರೋನ್ ಮೂಲಕ ಈ ದಾಳಿ ನಡೆಸಲಾಗಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು Aljazeera ತಿಳಿಸಿದೆ.
ಈ ದಾಳಿ ನಡೆಸಿರುವುದನ್ನು ಇಸ್ರೇಲ್ ಸೇನೆ ಖಚಿತಪಡಿಸಿದೆ. 'ಹಮಾಸ್ ನ ಸಕ್ರಿಯ ಕಾರ್ಯಕರ್ತನಾಗಿದ್ದ ವಿಷಾನನ್ನು ಇತರ ಇಬ್ಬರು ಹಮಾಸ್ ಉಗ್ರರೊಂದಿಗೆ ನಿಖರ ದಾಳಿಯ ಮೂಲಕ ಹತ್ಯೆ ಮಾಡಲಾಗಿದೆ. ಆತ ಇತ್ತೀಚಿನ ವರ್ಷಗಳಲ್ಲಿ ಅಲ್ ಜಜೀರಾದಲ್ಲಿ ಫೋಟೋ ಜರ್ನಲಿಸ್ಟ್ ಆಗಿ ಕೆಲಸ ಮಾಡುವ ಜೊತೆಗೆ, ಹಮಾಸ್‌ನ ಮಿಲಿಟರಿ ವಿಭಾಗದಲ್ಲಿ ಸ್ನೈಪರ್ ಆಗಿ ಸೇವೆ ಸಲ್ಲಿಸುತ್ತಿದ್ದ' ಎಂದು ಇಸ್ರೇಲ್ ಆರೋಪಿಸಿದೆ.

