HEALTH TIPS

ಕಾಮನ್‌ವೆಲ್ತ್ ಗೇಮ್ಸ್‌ | ಗುಲ್ವೀರ್ ಸಿಂಗ್ ಐತಿಹಾಸಿಕ ಸಾಧನೆ : ಪುರುಷರ 10,000 ಮೀ. ಓಟದಲ್ಲಿ ಪದಕ ಗೆದ್ದ ಭಾರತದ ಮೊದಲ ಕ್ರೀಡಾಪಟು

ಗ್ಲಾಸ್ಗೊ: ಭಾರತೀಯ ದೂರ ಅಂತರದ ಓಟಗಾರ ಗುಲ್ವೀರ್ ಸಿಂಗ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪುರುಷರ 10,000 ಮೀ. ಓಟದಲ್ಲಿ ಬೆಳ್ಳಿ ಪದಕ ಗೆದ್ದುಕೊಂಡರು. 10 ಸಾವಿರ ಮೀ.ಓಟದಲ್ಲಿ ಪದಕ ಗೆದ್ದ ಭಾರತದ ಮೊತ್ತ ಮೊದಲ ಕ್ರೀಡಾಪಟು ಎಂಬ ಕೀರ್ತಿಗೆ ಭಾಜನರಾಗಿ ಇತಿಹಾಸ ನಿರ್ಮಿಸಿದರು.

ರಾಷ್ಟ್ರೀಯ ದಾಖಲೆ ವೀರ ಗುಲ್ವೀರ್ 27:49.78 ಅವಧಿಯಲ್ಲಿ ಗುರಿ ತಲುಪಿ ಆಸ್ಟ್ರೇಲಿಯದ ಕೀ ರಾಬಿನ್ಸನ್ ನಂತರ ಎರಡನೇ ಸ್ಥಾನ ಪಡೆದರು. ಡೇವಿಡ್ ಮುಲ್ಲಾರ್ಕಿ ಕಂಚಿನ ಪದಕ ಜಯಿಸಿದರು. ದೂರ ಅಂತರದ ಓಟದಲ್ಲಿ ನಿಸ್ಸೀಮರಾಗಿರುವ ಕೀನ್ಯ ಹಾಗೂ ಉಗಾಂಡದ ಅತ್ಲೀಟ್‌ಗಳು ಪದಕ ಗೆಲ್ಲದೆ ಅಚ್ಚರಿಗೊಳಿಸಿದರು.

ಐತಿಹಾಸಿಕ ಮೈಲಿಗಲ್ಲು ತಲುಪಿದ ಭಾರತೀಯ ಅತ್ಲೆಟಿಕ್ಸ್: ಸೈನಿಕ ಗುಲ್ವೀರ್ ಸಿಂಗ್ ಬೆಳ್ಳಿ ಪದಕ ಗೆಲ್ಲುವುದರೊಂದಿಗೆ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪುರುಷರ 10,000 ಮೀ. ಓಟದಲ್ಲಿ ಭಾರತವು ದೀರ್ಘ ಸಮಯದ ನಂತರ ಯಶಸ್ಸು ಸಾಧಿಸಿದೆ.

ಈ ಹಿಂದೆ ಯಾವೊಬ್ಬ ಭಾರತೀಯ ಕ್ರೀಡಾಪಟು 10,000 ಮೀ.ಓಟದಲ್ಲಿ ಪದಕ ಗೆದ್ದಿಲ್ಲ. ಗುಲ್ವೀರ್ ಅವರ ಬೆಳ್ಳಿ ಪದಕವು ಭಾರತೀಯ ಅತ್ಲೆಟಿಕ್ಸ್‌ನ ಹೆಗ್ಗುರುತಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries