HEALTH TIPS

ಇ20 ಇಂಧನ ಬಳಕೆಯಿಂದ ಬಿಎಸ್-3 ವಾಹನಗಳ ರಬ್ಬರ್ ಭಾಗ ಬದಲಿಸಬೇಕಾಗಬಹುದು: ಗಡ್ಕರಿ

ನವದೆಹಲಿ: ಎಥೆನಾಲ್ ಮಿಶ್ರಿತ ಇ-20 ಪೆಟ್ರೋಲ್ ಬಳಸುವ ಸಂದರ್ಭದಲ್ಲಿ, 2016ಕ್ಕೂ ಮೊದಲು ತಯಾರಿಸಲಾದ ಬಿಎಸ್‌-III ವಾಹನಗಳಲ್ಲಿನ ಕೆಲವು ರಬ್ಬರ್ ಭಾಗಗಳು ಮತ್ತು ಗ್ಯಾಸ್ಕೆಟ್‌ಗಳನ್ನು ಬದಲಾಯಿಸುವ ಅಗತ್ಯ ಉಂಟಾಗಬಹುದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ರಾಜ್ಯಸಭೆಗೆ ಬುಧವಾರ ತಿಳಿಸಿದ್ದಾರೆ. 


ಈ ಬಗ್ಗೆ ಕೇಳಲಾದ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಅವರು, ಭಾರತ್ ಸ್ಟೇಜ್-III (ಬಿಎಸ್‌-III) ವಾಹನಗಳ ಮೇಲೆ ಇ20 ಇಂಧನದ ಪರಿಣಾಮ ಕುರಿತು ಇಂಡಿಯನ್ ಆಯಿಲ್ ಕಾರ್ಪೊರೇಷನ್, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಪೆಟ್ರೋಲಿಯಂ, ಭಾರತೀಯ ವಾಹನ ತಯಾರಕರ ಸಂಘ ಹಾಗೂ ಭಾರತೀಯ ಆಟೋಮೋಟಿವ್ ಸಂಶೋಧನಾ ಸಂಘ ಜಂಟಿಯಾಗಿ ಅಧ್ಯಯನ ನಡೆಸಿವೆ ಎಂದು ಹೇಳಿದರು.

ಕಾರು ಮತ್ತು ದ್ವಿಚಕ್ರ ವಾಹನಗಳ ಎಂಜಿನ್‌ನಲ್ಲಿ ಯಾವುದೇ ಮಾರ್ಪಾಡು ಅಗತ್ಯವಿಲ್ಲ ಎಂಬುದು ಈ ಅಧ್ಯಯನಗಳಲ್ಲಿ ಕಂಡುಬಂದಿದೆ. ಹಳೆಯ ವಾಹನಗಳಲ್ಲಿಯೂ ಕಾರ್ಯಕ್ಷಮತೆ ಅಥವಾ ಎಂಜಿನ್‌ನ ಸವೆತದಲ್ಲಿ ಗಮನಾರ್ಹ ವ್ಯತ್ಯಾಸ ಕಂಡುಬಂದಿಲ್ಲ ಎಂದು ತಿಳಿಸಿದ್ದಾರೆ.

ಜೊತೆಗೆ ವಾಹನ ಚಾಲನೆಯ ಗುಣಮಟ್ಟ, ಸ್ಟಾರ್ಟ್ ಆಗುವ ಸಾಮರ್ಥ್ಯ, ಲೋಹ ಮತ್ತು ಪ್ಲಾಸ್ಟಿಕ್ ಭಾಗಗಳ ಹೊಂದಾಣಿಕೆಯಲ್ಲಿ ಯಾವುದೇ ಸಮಸ್ಯೆ ಕಂಡುಬಂದಿಲ್ಲ ಎಂದು ತಿಳಿಸಿದ್ದಾರೆ. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries