ನವದೆಹಲಿ: 2014ರಿಂದ ಜೈಲಿನಲ್ಲಿರುವ ಇಂಡಿಯನ್ ಮುಜಾಹಿದಿನ್ ಕಾರ್ಯಕರ್ತರೆನ್ನಲಾದ ಇಬ್ಬರಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ. ಅವರ ನಿರಂತರ ಜೈಲುವಾಸವು ಸಂವಿಧಾನದ 21ನೇ ವಿಧಿಯಡಿಯಲ್ಲಿ ಬರುವ ಸ್ವಾತಂತ್ರ್ಯದ ಹಕ್ಕಿನ ''ಸಾರಾಸಗಟು ಉಲ್ಲಂಘನೆ''ಯಾಗಿದೆ ಎಂದು ಸರ್ವೋಚ್ಛ ನ್ಯಾಯಾಲಯ ಹೇಳಿದೆ.
ದಿಲ್ಲಿಯಲ್ಲಿ ದಾಖಲಾದ ಭಯೋತ್ಪಾದನೆ ಪ್ರಕರಣಕ್ಕೆ ಸಂಬಂಧಿಸಿ ಅರ್ಜಿದಾರರಾದ ಮುಹಮ್ಮದ್ ಸಾಕಿಬ್ ಅನ್ಸಾರಿ ಮತ್ತು ವಕಾರ್ ಅಝರ್ ಸುಮಾರು 12 ವರ್ಷಗಳಿಂದ ಜೈಲಿನಲ್ಲಿದ್ದಾರೆ ಹಾಗೂ ಅವರ ವಿಚಾರಣೆ ಶೀಘ್ರದಲ್ಲಿ ಮುಗಿಯುವ ಲಕ್ಷಣವಿಲ್ಲ ಎಂದು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ನ್ಯಾಯಪೀಠವೊಂದು ಹೇಳಿತು.
ದಿಲ್ಲಿ ಹೈಕೋರ್ಟ್ ಎಪ್ರಿಲ್‌ನಲ್ಲಿ ಅರಿಗೆ ಜಾಮೀನು ನೀರಾಕರಿಸಿತ್ತು. ಅದನ್ನು ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್‌ಗೆ ಹೋಗಿದ್ದರು.

