ಅಲ್ಲದೆ, ಏಳು ದಿನಗಳ ಒಳಗೆ ಸಾರ್ವಜನಿಕವಾಗಿ ಬೇಷರತ್ ಕ್ಷಮೆ ಯಾಚಿಸುವಂತೆ ಆಗ್ರಹಿಸಿದೆ.
ಜಮ್ಮು ಮತ್ತು ಕಾಶ್ಮೀರ ಉಚ್ಚ ನ್ಯಾಯಾಲಯ ಮತ್ತು ಲಡಾಖ್ ಉಚ್ಚ ನ್ಯಾಯಾಲಯದ ವಕೀಲ ಪರಿಮೋಕ್ಸ್ ಸೇಠ್ ಅವರು ಜಮ್ಮು ಮತ್ತು ಕಾಶ್ಮೀರದ ಬಿಜೆಪಿ ಅಧ್ಯಕ್ಷ ಹಾಗೂ ರಾಜ್ಯ ಸಭಾ ಸಂಸದ ಸತ್ಪಾಲ್ ಶರ್ಮಾ ಅವರ ಪರವಾಗಿ ಈ ನೋಟಿಸ್ ಜಾರಿ ಮಾಡಿದ್ದು, ಕ್ಷಮೆ ಯಾಚಿಸಲು ವಿಫಲವಾದರೆ 100 ಕೋ.ರೂ. ಮಾನನಷ್ಟ ಮೊಕದ್ದಮೆ ಸೇರಿದಂತೆ ಕಾನೂನು ಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ನೋಟಿಸ್ ಪ್ರಕಾರ, ಜಮ್ಮು ಪ್ರದೇಶದ ನ್ಯಾಷನಲ್ ಕಾನ್ಫರೆನ್ಸ್ (ಎನ್ಸಿ) ಶಾಸಕರನ್ನು ಬಿಜೆಪಿಗೆ ಸೇರ್ಪಡೆಗೊಳಿಸಲು ಪ್ರತಿಯಾಗಿ 20ರಿಂದ 30 ಕೋ.ರೂ. ಹಣ, ಸಚಿವ ಸ್ಥಾನ ಮತ್ತು ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನವನ್ನು ಮರು ಸ್ಥಾಪಿಸುವ ಆಮಿಷವನ್ನು ಬಿಜೆಪಿ ಪದಾಧಿಕಾರಿ ಒಡ್ಡಿದ್ದಾರೆ ಎಂದು ಅಬ್ದುಲ್ಲಾ ಅವರು ಸುಳ್ಳು, ಆಧಾರ ರಹಿತ ಮತ್ತು ಮಾನಹಾನಿಕರ ಆರೋಪಗಳನ್ನು ಮಾಡಿದ್ದಾರೆ ಎಂದು ಹೇಳಿದೆ.

