ಮುಂಬೈ (PTI): ವಿಯೆಟ್ನಾಂನ ಫೂ ಕ್ವೋಕ್ ದ್ವೀಪದ ಬಳಿ ಸಂಭವಿಸಿದ ದೋಣಿ ದುರಂತದಲ್ಲಿ ಮೃತಪಟ್ಟ 15 ಭಾರತೀಯ ಪ್ರವಾಸಿಗರ ಮೃತದೇಹಗಳನ್ನು ಸೋಮವಾರ ರಾತ್ರಿ ಭಾರತಕ್ಕೆ ತರಲಾಗಿದೆ.
15 ಶವಗಳನ್ನು ಹೊತ್ತ ವಿಯೆಟ್ನಾಂ ಏರ್‌ಲೈನ್ಸ್ ವಿಮಾನ ವಿಎನ್979 ಹೊ ಚಿ ಮಿನ್ಹ್ ನಗರದಿಂದ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರಾತ್ರಿ 9.19ಕ್ಕೆ ಬಂದಿಳಿದಿದೆ.
ಅಲ್ಲಿಂದ ಕೊಯಮತ್ತೂರು, ಚೆನ್ನೈ, ಹೈದರಾಬಾದ್ ಮತ್ತು ತಿರುವನಂತಪುರಕ್ಕೆ ಕಳುಹಿಸಲಾಗಿದೆ.
ಮೃತರ ಪೈಕಿ ತಮಿಳುನಾಡಿನ 10 ಮಂದಿ, ಆಂಧ್ರಪ್ರದೇಶದ ಮೂವರು ಹಾಗೂ ಕೇರಳದ ಇಬ್ಬರು ಸೇರಿದ್ದಾರೆ. ಮೃತರಲ್ಲಿ ಇಬ್ಬರು ಮಹಿಳೆಯರು ಇದ್ದಾರೆ.

